ಕೇದಾರದ ನಂತರ ಬದಿರನಾಥ ದೇಗುಲವೂ ದರ್ಶನಕ್ಕೆ ಲಭ್ಯ

ನವದೆಹಲಿ, ಮೇ 10: ಹಿಮಪಾತದ ವಿರಾಮದ ನಂತರ ಬದರಿನಾಥ ದೇಗುಲವು ಮತ್ತೆ ತೆರೆಯಲಾಗಿದೆ. ಹಿಂದುಗಳ ಪವಿತ್ರ ಚಾರ್ ಧಾಮ್ ಯಾತ್ರಾ ಸ್ಥಳವಾದ ಕೇದಾರನಾಥ ಇತ್ತೀಚೆಗೆ ಭಕ್ತರ ದರ್ಶನಕ್ಕೆ ಬಾಗಿಲು ತೆಗೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಿಮಾಲಯದ ತಪ್ಪಲಿನಲ್ಲಿರುವ ಬದಿರನಾಥ ದೇಗುಲದ ಬಾಗಿಲುಗಳು ಶುಕ್ರವಾರದಂದು 4.15ಕ್ಕೆ ಭಕ್ತರಿಗೆ ತೆರೆಯಲಾಯಿತು ಎಂದು ಪ್ರಧಾನ ಅರ್ಚಕ ಈಶ್ವರಿ ಪ್ರಸಾದ್ ನಂಬೂದರಿ ಅವರು ತಿಳಿಸಿದರು.

Badrinath reopens after winter break

ಸಮುದ್ರಮಟ್ಟದಿಂದ ಅತಿ ಎತ್ತರದಲ್ಲಿರುವ ಈ ದೇಗುಲವು ಹಿಮಾವೃತವಾಗುವುದರಿಂದ ಭಕ್ತಾದಿಗಳಿಗೆ ದರ್ಶನ ಭಾಗ್ಯವಿರಲಿಲ್ಲ. ಸುಮಾರು 10 ಸಾವಿರಕ್ಕೂ ಅಧಿಕ ಭಕ್ತಾದಿಗಳು ಈ ಅವಧಿಯಲ್ಲಿ ದರ್ಶನ ಪಡೆಯಲಿದ್ದಾರೆ.

ಚಾರ್ ಧಾಮ್ ಯಾತ್ರೆಗಳ ಪೈಕಿ ಗಂಗೋತ್ರಿ,ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ್ ಯಾತ್ರೆಯನ್ನು ಭಕ್ತರು ಈ ಅವಧಿಯಲ್ಲಿ ಕೈಗೊಳ್ಳುತ್ತಾರೆ. ಅದಿಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ ಎನ್ನಲಾದ 12ನೇ ಶತಮಾನದ ಕೇದಾರನಾಥ್ ದೇಗುಲವು ಗುರುವಾರದಿಂದ ಭಕ್ತರ ದರ್ಶನಕ್ಕೆ ಲಭ್ಯವಾಗಿದೆ.

ಸಮುದ್ರಮಟ್ಟದಿಂದ 3,500 ಮೀಟರ್ ಎತ್ತರವಿರುವ ಕೇದಾರನಾಥ್ ದೇಗುಲವು 2013ರಲ್ಲಿ ಮೇಘ ಸ್ಫೋಟ, ಹಿಮ ಪಾತ, ಪ್ರವಾಹದಿಂದ ತತ್ತರಿಸಿತ್ತು.

ಆದರೆ, ಮಂದಾಕಿನಿ ತಟದ ಈ ದೇಗುಲಕ್ಕೆ ಯಾವುದೆ ಹಾನಿಯಾಗಿರಲಿಲ್ಲ, ಪ್ರತಿ ವರ್ಷ ವೈಶಾಖ ಮಾಸ(ಏಪ್ರಿಲ್-ಮೇ)ದಲ್ಲಿ ದೇಗುಲದ ಬಾಗಿಲು ತೆಗೆಯಲಾಗುತ್ತದೆ, ಕಾರ್ತಿಕ (ಅಕ್ಟೋಬರ್-ನವೆಂಬರ್) ಮಾಸದಲ್ಲಿ ಬಾಗಿಲು ಹಾಕಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+