Get Updates
Get notified of breaking news, exclusive insights, and must-see stories!

Baba Vanga Predictions: ಬಾಬಾ ವಂಗಾ ಭವಿಷ್ಯವಾಣಿಯಂತೆ 2025ರ ಆರಂಭದಲ್ಲಿ ಭಾರತದ ಹಲವೆಡೆ ಭೂಕಂಪ: ಜನರಿಗೆ ಢವಢವ

Baba Vanga Predictions: ಹಲವು ಸ್ವಾಮೀಜಿಗಳು ಆಗಾಗ ಭಯಾನಕ ಭವಿಷ್ಯಗಳನ್ನು ನುಡಿಯುತ್ತಲೇ ಇರುತ್ತಾರೆ. ಹಾಗೆಯೇ ಬಲ್ಗೇರಿಯಾದ ಬಾಬಾ ವಂಗಾ ಅವರು ಕೂಡ ಭವಿಷ್ಯವಾಣಿಗಳನ್ನು ನುಡಿದಿದ್ದು, ಇವುಗಳಲ್ಲಿ ಹಲವು ನಿಜವಾಗಿ ಎಂದು ಹಲವರು ಹೇಳುತ್ತಿದ್ದಾರೆ. ಹಾಗೆಯೇ 2025ರಲ್ಲಿ ಘಟನೆಗಳು ಸಂಭವಿಸುತ್ತವೆ ಎಂದು ಹೇಳಿದ್ದ ಸ್ಫೋಟಕ ಮಾತುಗಳು ಕೂಡ ಸತ್ಯವಾಗಿವೆ ಎಂದು ತಿಳಿದುಬಂದಿದೆ. ಹಾಗಾದ್ರೆ ಯಾವೆಲ್ಲಾ ನಿಜವಾಗಿವೆ ಎಂದು ಇಲ್ಲಿ ತಿಳಿಯಿರಿ.

ಬಲ್ಗೇರಿಯಾದ ಬಾಬಾ ವಂಗಾ 12 ವರ್ಷಗಳ ಕಾಲ ಸಾಮಾನ್ಯ ಜೀವನವನ್ನು ನಡೆಸಿದ ನಂತರ, ಅವರು ಭವಿಷ್ಯ ನುಡಿಯುವಲ್ಲಿ ಪರಿಣಿತರಾಗಿದ್ದು, ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿರುವ ಉದಾಹರಣೆಗಳಿವೆ ಎಂದು ಹಲವರು ಹೇಳುತ್ತಿದ್ದಾರೆ. ಹಾಗೆಯೇ ಇದೀಗ 2025ರಲ್ಲೂ ಅವರು ಹೇಳಿದಂತೆ ಕೆಲವು ಘಟನೆಗಳು ನಡೆದಿವೆ ಎಂದು ತಿಳಿದುಬಂದಿದೆ.

Baba Vanga Predictions Earthquakes in many Parts of India in 2025

ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ ದಶಕಗಳ ಹಿಂದೆಯೇ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಿರುವ ಅನೇಕ ಭವಿಷ್ಯಗಳು ಇಲ್ಲಿಯವರೆಗೆ ನಿಜವಾಗಿವೆ ಎಂದು ತಿಳಿದುಬಂದಿದೆ. ಅವರು 2025ರ ವರ್ಷದಲ್ಲಿ ಕೆಲವು ಸ್ಫೋಟಕ ಭವಿಷ್ಯಗಳನ್ನು ನುಡಿದಿದ್ದರು. 2025ರಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ವಿನಾಶಕಾರಿ ಭೂಕಂಪಗಳು ಸಂಭವಿಸುತ್ತವೆ ಹಲವು ವರ್ಷಗಳ ಹಿಂದೆಯೇ ಹೇಳಿದ್ದರು.

ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ವಿನಾಶ ಸಂಭವಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಅಂತಲೂ ಹೇಳಿದ್ದರು. ಅವರು ನುಡಿದ ಭವಿಷ್ಯದಂತೆ ಕಳೆದ ಕೆಲವು ದಿನಗಳಲ್ಲಿ ಅಮೆರಿಕದಿಂದ ಏಷ್ಯಾ ಖಂಡದವರೆಗೆ ಬಹಳಷ್ಟು ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿದೆ. ಇನ್ನು ಭಾರತದಲ್ಲಿಯೂ ದೆಹಲಿಯಿಂದ ಬಿಹಾರ ಮತ್ತು ಬಂಗಾಳದವರೆಗೆ ಭೂಮಿ ಕಂಪಿಸಿದೆ. ಇದೀಗ ಈ ಎಲ್ಲಾ ದುರಂತಗಳನ್ನು ಗಮನಿಸಿದಾಗ ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜವಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ.

ಬಾಬಾ ವಂಗಾ ಅವರು 2025ರಲ್ಲಿ ವಿಶ್ವದ ಅನೇಕ ದೇಶಗಳು ವಿನಾಶಕಾರಿ ಭೂಕಂಪಗಳನ್ನು ಎದುರಿಸುತ್ತವೆ ಎಂದು ಭವಿಷ್ಯ ನುಡಿದಿದ್ದರು. ಈಗಾಗಲೇ ಹಲವೆಡೆ ಭೂಕಂಪನವಾಗಿದ್ದು, ಮುಂದಿನ ದಿನಗಳಲ್ಲಿ ಅವರು ನುಡಿದಿರುವ ಭವಿಷ್ಯದಂತೆ ಎಲ್ಲೆಲ್ಲಿ ಭೂಕಂಪನ ಉಂಟಾಗಲಿದೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಅಲ್ಲದೇ ಈ ಪ್ರಾಕೃತಿಕ ವಿಕೋಪದಿಂದ ಅಪಾರ ಜೀವ ಮತ್ತು ಆಸ್ತಿ ನಷ್ಟ ಅನುಭವಿಸುವ ಭಯದಲ್ಲಿ ಜನರಿದ್ದಾರೆ.

ಈ ಎಲ್ಲಾ ಭವಿಷ್ಯವಾಣಿಗಳನ್ನು ಗಮನಿಸಿದಾಗ ಬಾಬಾ ವಂಗಾ ಭವಿಷ್ಯವಾಣಿಗಳು ನಿಜವಾಗುತ್ತಿವೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಒಂದೆಡೆ ಆತಂಕವೂ ಮನೆ ಮಾಡಿದೆ. ಜನವರಿಯಿಂದ ಇಲ್ಲಿಯವರೆಗೆ, ಭಾರತದ ಹಲವು ಭಾಗಗಳಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಸಹ, ಈ ವರ್ಷ ಭೂಮಿಯು ಹಲವು ಬಾರಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಅಲ್ಲದೆ, ಬಿಹಾರದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂವರೆಗೆ ಭೂಕಂಪನ ಸಂಭವಿಸಿದೆ. ಏಷ್ಯಾ, ಅಮೆರಿಕ ಮತ್ತು ಇತರ ಖಂಡಗಳ ವಿವಿಧ ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.

ಬಾಬಾ ವಂಗಾ ಬಲ್ಗೇರಿಯಾದ ಒಬ್ಬ ಪ್ರವಾದಿಯಾಗಿದ್ದಾರೆ. ಆಕೆಯ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವ್. ಅವರು 1911ರಲ್ಲಿ ಜನಿಸಿದರು, ಆದರೆ 12ನೇ ವಯಸ್ಸಿನಲ್ಲಿ ಅವರು ಚಂಡಮಾರುತದಿಂದ ಉಂಟಾದ ಧೂಳಿನಿಂದ ಶಾಶ್ವತವಾಗಿ ಕುರುಡರಾದರು. ಆದರೆ, ಅವರು ದೃಷ್ಟಿ ಕಳೆದುಕೊಂಡ ನಂತರ ಭವಿಷ್ಯವಾಣಿಗಳನ್ನು ನುಡಿಯಲು ಆರಂಭಿಸಿದರು. ಇವುಗಳಲ್ಲಿ ಬಹುತೇಕ ಬವಿಷ್ಯಗಳು ನಿಜವಾಗಿರುವ ಉದಾರಣೆಗಳಿವೆ. ಬರೀ ಬಾಬಾ ವಂಗಾ ಅಷ್ಟೇ ಹಲವು ಸ್ವಾಮೀಜಿಗಳು ಸಹ ಆಗಾಗ ಸ್ಫೋಟಕ ಭವಿಷ್ಯಗಳನ್ನು ನುಡಿಯುತ್ತಲೇ ಇದ್ದಾರೆ. ಅವುಗಳಲ್ಲಿ ಹಲವು ಸತ್ಯವಾಗಿವೆ ಎಂದು ಹೇಳಲಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+