ಅಜಂ ಖಾನ್ ಮುಸ್ಲಿಂ ದೇಶದಲ್ಲಿದ್ದಿದ್ದರೆ ಯಾವತ್ತೋ ತಲೆ ಉರುಳುತ್ತಿತ್ತು: ಸ್ವಾಮಿ
ಭಾರತದಲ್ಲಿರುವುದರಿಂದ ಅಜಂ ಖಾನ್, ಪ್ರಜಾಪ್ರಭುತ್ವ ನೀಡಿದ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ, ಬೇರೆ ಯಾವುದೇ ಮುಸ್ಲಿಂ ದೇಶದಲ್ಲಿದ್ದುಕೊಂಡು ಸೇನೆಯ ವಿರುದ್ಧ ಇಂಥ ಹೇಳಿಕೆ ನೀಡಿದ್ದರೆ ಅಲ್ಲಿ ಎಂದೋ ಅವರ ತಲೆಯನ್ನು ಕಡಿಯಲಾಗುತ್ತಿತ್ತು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಟಾಂಕ್ ನೀಡಿದ್ದಾರೆ.
ಜೂನ್ 28 ರಂದು ಮಾಧ್ಯಮದ ಜೊತೆ ಮಾತನಾಡುತ್ತಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್, "ಕಾಶ್ಮೀರ, ಅಸ್ಸಾಂ, ಜಾರ್ಖಂಡ್ ಗಳಲ್ಲಿ ಸೈನಿಕರ ಮೇಲೆ ಮಹಿಳೆಯರು ದಾಳಿ ನಡೆಸುತ್ತಿದ್ದಾರೆ. ನಿಜಹೇಳಬೇಕೆಂದರೆ ಸೇನೆ ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರಕ್ಕೆ ಮಹಿಳೆಯರು ಅನಿವಾರ್ಯವಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಇದು ಹಿಂದೂಸ್ಥಾನ ತಲೆ ತಗ್ಗಿಸುವ ವಿಚಾರ," ಎಂದಿದ್ದರು. ಈ ಕುರಿತು ದೇಶದಾದ್ಯಂತ ಚರ್ಚೆ ನಡೆದು, ಅಜಂ ಖಾನ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿ, ದೇಶವನ್ನು ಕಾಪಾಡುತ್ತಿರುವ ಸೈನಿಕರ ವಿರುದ್ಧ ಇಂಥ ಹೇಳಿಕೆ ನೀಡುತ್ತಿರುವ ಅಜಂ ಖಾನ್, ಭಾರತದಲ್ಲಿರುವುದರಿಂದ ಬಚಾವ್ ಆಗಿದ್ದಾರೆ. ಬೇರೆ ಮುಸ್ಲಿಂ ದೇಶದಲ್ಲಿದ್ದಿದ್ದರೆ ಇಷ್ಟರಲ್ಲೇ ಅವರ ತಲೆಕಡಿಯಲಾಗುತ್ತಿತ್ತು ಎಂದು ಪ್ರತಿಕ್ರಿಯಿಸಿದ್ದು, ಈ ಹೇಳಿಕೆಯೂ ಮತ್ತೊಂದು ವಿವಾದ ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications