ಸರಯೂ ನದಿ ದಡದಲ್ಲಿ ಸನಾತನ ಸಂಸ್ಕೃತಿಯ ವೈಭವ, ಕಣ್ತುಂಬಿಕೊಳ್ಳಿ ಈ ಅದ್ಭುತವ!

ಅಯೋಧ್ಯೆ ಎಂದ ಕೂಡಲೇ 'ಸನಾತನ ಸಂಸ್ಕೃತಿ'ಯ ಮೆರಗು ಕಣ್ಣೆದುರು ಬರುತ್ತದೆ. ಈ ಸಹಸ್ರಮಾನದ ವೈಭವ ಈಗ ಮತ್ತಷ್ಟು ಮೇಳೈಸುತ್ತಿದೆ. ಅದರಲ್ಲೂ ಸೂರ್ಯ ಅಯೋಧ್ಯೆ ಮೇಲೆ ಅಸ್ತಮಿಸುತ್ತಿದ್ದಂತೆ, ಐತಿಹಾಸಿಕ ಸರಯೂ ನದಿ ದಡದ ಉದ್ದಕ್ಕೂ ಪ್ರಶಾಂತತೆ ಮತ್ತೆ ಮತ್ತೆ ಕಣ್ಮನ ಸೆಳೆಯುತ್ತದೆ. ಇದೇ ಭಾಗದಲ್ಲಿ ಪ್ರತಿದಿನ ಸೂರ್ಯ ಅಸ್ತಮಿಸಿದ ನಂತರವು, ಜ್ಯೋತಿ ಬೆಳಗುತ್ತಿದೆ. ಅದು ಹೇಗೆ ಗೊತ್ತಾ?

ಹೌದು, 'ನಮಾಮಿ ಸರಯೂ ಸೇವಾ ಟ್ರಸ್ಟ್' ವತಿಯಿಂದ ಪ್ರತಿದಿನ ಸಂಜೆ ಹಬ್ಬದ ರೀತಿಯ ಆರತಿ ಸರಯೂ ಘಾಟ್‌ನಲ್ಲಿ, ಪ್ರತಿದಿನ ಸಂಜೆ ನಡೆಯುತ್ತೆ. ಕಳೆದ 1 ದಶಕದಿಂದಲು ಕೂಡ ಅಯೋಧ್ಯೆಯನ್ನ ಈ ವಿಶೇಷ ಸಂಜೆಯ ಆರತಿ ಅಲಂಕರಿಸಿದೆ. ಚಳಿಗಾಲದ ವೇಳೆ, ಸಂಜೆ 6 ಗಂಟೆಗೆ ನಮಾಮಿ ಸರಯೂ ಸೇವಾ ಟ್ರಸ್ಟ್ ಅನ್ನ ಪ್ರತಿನಿಧಿಸುವ ರಾಕೇಶ್ ಜಿ ರಾಜ ಮಹಾರಾಜ್ ಅವರ ಶಿಷ್ಯರಿಂದ ಆರತಿ ಆರಂಭವಾಗುತ್ತದೆ. ಸರಯೂ ನದಿ ಮುಂದೆ ನಿಂತು, ಸಂಜೆ ಆರತಿ ಪ್ರಾರಂಭಿಸಲು ಸಿದ್ಧರಾಗುತ್ತಾರೆ. ಆಗಲೇ ಸನಾತನ ಸಂಸ್ಕೃತಿಯ ವೈಭವ ವಿಜೃಂಭಿಸುತ್ತದೆ.

Ayodhyas Sarayu Ghat Evening Aarti: Exclusive Glimpses - Oneindia Special Coverage

ಸನಾತನ ಸಂಪ್ರದಾಯದ ಸಂಭ್ರಮ

ಪ್ರತಿದಿನ ನಡೆಯುವ ಈ ಸಂಭ್ರಮದ ವೇಳೆ, ರಾಕೇಶ್ ಜಿ ರಾಜ ಮಹಾರಾಜ್ ಅವರು ತಂಡದ ಪರ ಮಾತನಾಡುತ್ತಾ ಆರತಿಯ ಮಹತ್ವ ವಿವರಿಸುತ್ತಾರೆ. ಈ ಆಚರಣೆಯು ಜಾತಿ, ಧರ್ಮ ಮತ್ತು ಎಲ್ಲವನ್ನ ಮೀರಿ ಪ್ರತಿ ವರ್ಗದ ವ್ಯಕ್ತಿಗೂ ಹೇಗೆ ಆತ್ಮೀಯ ಸ್ವಾಗತ ನೀಡುತ್ತೆ ಎಂಬುದನ್ನು ಅವರು ವಿವರಿಸುತ್ತಾರೆ. ಹಾಗೆ ಅಮಿತ್ ಮಿಶ್ರಾ, ಅಭಿಷೇಕ್ ಪಾಂಡೆ ಹಾಗೂ ಅಜಿತ್ ತಿವಾರಿ ಈ ಆರತಿಯ ವೈಭವಕ್ಕೆ ತಮ್ಮ ಭಕ್ತಿಯಿಂದ ಇನ್ನಷ್ಟು ಕಳೆ ತುಂಬುತ್ತಾರೆ. ಹೀಗೆ ಸಂಜೆಯ ಆರತಿ ಮೂಲಕ ಹಿಂದೂ ಸಂಸ್ಕೃತಿಯ ಮಹತ್ವವನ್ನು ಅವರು ಜಗತ್ತಿಗೆ ಪಸರಿಸುತ್ತಾರೆ. ಈ ವೇಳೆ ಜಗತ್ತಿನ ಮೂಲೆ ಮೂಲೆಯಿಂದ ಬಂದ ಜನರು ಆರತಿ ಕಣ್ತುಂಬಿಕೊಳ್ಳುತ್ತಾರೆ.

'ಜೈ ಶ್ರೀ ರಾಮ್' ಘೋಷಣೆ

ಹೀಗೆ ಸರಯೂ ನದಿ ದಡದ ಸಂಜೆ ಆರತಿ ಮೂಲಕ ರಾಕೇಶ್ ಜಿ ರಾಜ ಮಹಾರಾಜ್ ಹಾಗೂ ಅವರ ತಂಡ ಹಿಂದೂ ಸಂಪ್ರದಾಯ ಎತ್ತಿಹಿಡಿಯುವುದು ಮಾತ್ರವಲ್ಲ, ಜೊತೆಗೆ ಸಾಂಸ್ಕೃತಿಕ ರಾಯಭಾರಿಗಳೂ ಆಗಿದ್ದಾರೆ. ಹಿಂದೂ ಆಚರಣೆ ಸಾರವನ್ನು ಅಲ್ಲಿ ನೆರೆದಿರುವ ಭಕ್ತರ ಜತೆಗೆ ಅವರು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಇನ್ನು ಆರತಿ ಬೆಳಗುವ ವೇಳೆ ದೀಪದ ಬೆಳಕು & 'ಜೈ ಶ್ರೀ ರಾಮ್' ಪಠಣವು ಭಕ್ತಿಯ ಸ್ವರ್ಗವನ್ನು ಧರೆಗೆ ಇಳಿಸುತ್ತದೆ.

Ayodhyas Sarayu Ghat Evening Aarti: Exclusive Glimpses - Oneindia Special Coverage

ಆಧ್ಯಾತ್ಮಿಕ ಸಾರ ಸಾರುವ ಆರತಿ

ಹೀಗೆ ಅಯೋಧ್ಯೆಗೆ ಭೇಟಿ ನೀಡುವ ಭಕ್ತರು, ಸಂಜೆಯ ಆರತಿ ಎಂದಿಗೂ ಮಿಸ್ ಮಾಡಿಕೊಳ್ಳಲು ಇಷ್ಟ ಪಡುವುದಿಲ್ಲ. ಜೊತೆಗೆ ಅಲ್ಲಿನ ಭಕ್ತಿಗೆ & ಸಂಪ್ರದಾಯದ ಸಂಭ್ರಮಕ್ಕೆ ಖುಷಿ ಪಡದ ಮನಸ್ಸುಗಳೇ ಇರುವುದಿಲ್ಲ. ಹೀಗೆ ಸರಯೂ ನದಿ ದಡದಲ್ಲಿ ಪ್ರತಿದಿನ ಬೆಳಗುವ ಜ್ಯೋತಿ, ಸಾವಿರ ಸಾವಿರ ವರ್ಷಗಳ ಪರಂಪರೆಯನ್ನ ಪ್ರತಿಬಿಂಬಿಸುತ್ತದೆ. ಸಾಂಸ್ಕೃತಿಕ ಪರಂಪರೆಯ ಆಧ್ಯಾತ್ಮಿಕ ಸಾರವನ್ನು ಕೂಡ ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+