ಅಯೋಧ್ಯೆ ಶ್ರೀರಾಮ ಮಂದಿರ ಶೀಘ್ರವೇ ಪೂರ್ಣ: ನರೇಂದ್ರ ಮೋದಿ

ಚಿತ್ರಕೂಟ, ಅಕ್ಟೋಬರ್ 27: ಜಗದ್ಗುರು ರಾಮಭದ್ರಾಚಾರ್ಯರು ಪ್ರತಿಯೊಬ್ಬ ದೇಶವಾಸಿಗಳ ಕನಸನ್ನು ನನಸಾಗಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಅವರು ಕೊಡುಗೆ ನೀಡಿದ ರಾಮಮಂದಿರವು ಶ್ರೀ ಅಯೋಧ್ಯೆಯಲ್ಲಿ ಸಿದ್ಧವಾಗುತ್ತಿದೆ. ಆದಷ್ಟು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದರು.

ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಜಗದ್ಗುರು ರಾಮಭದ್ರಾಚಾರ್ಯರ ತುಳಸಿ ಪೀಠದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಗಳು, ಅಯೋಧ್ಯ ರಾಮಮಂದಿ ಕುರಿತು ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಹಿಂದೂ ಮುಖಂಡರು ಹರ್ಷೋದ್ಗಾರ ಮೊಳಗಿಸಿದರು.

Ayodhya Sri Ram Mandir Will Be Ready soon, Rambhadracharya Contributed remember by PM modi

ಅಯೋಧ್ಯೆಯಲ್ಲಿ ರಾಮಮಂದಿರ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದ ಪ್ರಧಾನಿ ಮೋದಿ ಮಂದಿರ ನಿರ್ಮಾಣದಲ್ಲಿ ಹಿಂದೂ ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯರ ಕೊಡುಗೆ ಶ್ಲಾಘಿಸಿದ್ದಾರೆ. ಸಂಸ್ಕೃತವು ಸಂಪ್ರದಾಯಗಳ ಭಾಷೆ ಮಾತ್ರವಲ್ಲದೇ ನಮ್ಮ ಏಳಿಗೆ, ಅಸ್ಮಿತೆಯೂ ಆಗಿದೆ.

ಮೂರು ಪ್ರಮುಖ ಕೃತಿ ಬಿಡುಗಡೆಗೊಳಿಸಿದ ಪ್ರಧಾನಿ

2024ರ ಜನವರಿ 22ರಂದು ನಡೆಯಲಿರುವ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ತಮಗೆ ನೀಡಿದ ಆಹ್ವಾನ ಪ್ರಸ್ತಾಪಿಸಿದರು. ರಾಮಭದ್ರಾಚಾರ್ಯರ ಬುದ್ಧಿವಂತಿಕೆ ಪ್ರಸ್ತಾಪಿಸಿದ ಅವರು ಈ ಬುದ್ಧಿವಂತಿಕೆ ರಾಷ್ಟ್ರದ ಸಂಪತ್ತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಗದ್ಗುರು ರಾಮಭದ್ರಾಚಾರ್ಯ ವಿರಚಿತ 'ಅಷ್ಟಾಧ್ಯಾಯಿ ಭಾಷ್ಯ', 'ರಮಾನಂದಾಚಾರ್ಯ ಚರಿತಂ' ಮತ್ತು 'ಭಗವಾನ್ ಶ್ರೀ ಕೃಷ್ಣ ಕಿ ರಾಷ್ಟ್ರಲೀಲಾ' ಎಂಬ ಮೂರು ಕೃತಿಗಳನ್ನು ಪ್ರಧಾನಿಯವರು ಬಿಡುಗಡೆ ಮಾಡಿದರು.

ಸಂಸ್ಕೃತ ಭಾಷೆ ಮಹತ್ವ ತಿಳಿಸಿದ ಪಿಎಂ ಮೋದಿ

ಸಾವಿರ ವರ್ಷಗಳ ಹಿಂದಿನ ಗುಲಾಮಗಿರಿಯ ಯುಗದಲ್ಲಿ ಭಾರತದ ಸಂಸ್ಕೃತಿ ಮತ್ತು ಪರಂಪರೆಯನ್ನು ಕಿತ್ತು ಹಾಕಲು ಪ್ರಯತ್ನಿಸಲಾಯಿತು. ಕೆಲವು ವ್ಯಕ್ತಿಗಳು ಮುಂದುವರಿಸಿದ ಗುಲಾಮ ಮನಸ್ಥಿತಿ ಸಂಸ್ಕೃತದ ಬಗ್ಗೆ ದ್ವೇಷದ ಭಾವನೆಗೆ ಕಾರಣವಾಯಿತು. ನಮ್ಮ ಸಂಸ್ಕೃತವು ಇಲ್ಲಿನ ಸಂಪ್ರದಾಯಗಳ ಭಾಷೆ ಮಾತ್ರವೇ ಅಲ್ಲ. ಈ ಭಾಷೆ ನಮ್ಮ ಗುರುತಿನ ಭಾಷೆಯೇ ಆಗಿದೆ. ನಮ್ಮ ಸರ್ಕಾರದ ದೇಶದಲ್ಲಿ ಸಂಸ್ಕೃತವನ್ನು ಉತ್ತೇಜಿಸಲು ಕಳೆದ ಒಂಬತ್ತು ವರ್ಷಗಳಲ್ಲಿ ಅನೇಕ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಸಂಸ್ಕೃತಿ ಭಾಷೆ ಮಹತ್ವ ತಿಳಿಸಿದರು.

ಈ ರಾಜ್ಯದ ಚಿತ್ರಕೂಟವು ಅಭಿವೃದ್ಧಿ ವಿಚಾರದಲ್ಲಿ ಬಹಳ ಎತ್ತರ ಹಂತ ತಲುಪಲಿದೆ. ಚಿತ್ರಕೂಟದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾದ ತುಳಸಿ ಪೀಠವನ್ನು 1987 ರಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಸ್ಥಾಪಿಸಿದರು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+