• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

|
Google Oneindia Kannada News
   Ayodhya Verdict : Entire Disputed 2.77-Acre Land Goes to Hindus for Ram Mandir | Oneindia Kannada

   ನವದೆಹಲಿ, ನವೆಂಬರ್ 09: ಉತ್ತರಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿದೆ. ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ.

   ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಶರದ್ ಬೊಬ್ಡೆ, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಶನಿವಾರ(ನವೆಂಬರ್ 09)ದಂದು ನ್ಯಾಯಾಲಯಕ್ಕೆ ರಜೆ ಇದ್ದರೂ ಕಾರ್ಯ ನಿರ್ವಹಿಸಿ, ಈ ಐತಿಹಾಸಿಕ ತೀರ್ಪು ನೀಡಿದ್ದಾರೆ.

   ತೀರ್ಪಿನ ಮುಖ್ಯಾಂಶಗಳು:

   * ಅಯೋಧ್ಯಾದ ವಿವಾದಿತ ಭೂಮಿ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ
   * ಕೇಂದ್ರ ಸರ್ಕಾರ ವಶದಲ್ಲಿದ್ದ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ 5 ಎಕರೆ
   * ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಪ್ರತ್ಯೇಕ ಟ್ರಸ್ಟ್ ರಚನೆ ಆಗಬೇಕಿದೆ. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕಾಗುತ್ತದೆ.

   ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ

   1885ರಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚಿಸಿತ್ತು, ಮೂವರು ಸಂಧಾನಕಾರರನ್ನು ನೇಮಿಸಿತ್ತು. ಆದರೆ, ಸಂಧಾನಕಾರರಿಂದಲೂ ಈ ವ್ಯಾಜ್ಯ ಬಗೆಹರೆಯಲು ಸಾಧ್ಯವಾಗಲಿಲ್ಲ. ತೀರ್ಪಿನ ಇನ್ನಷ್ಟು ಮುಖ್ಯಾಂಶ, ಏನಿದು ಪ್ರಕರಣ, ಮೋದಿ ಸರ್ಕಾರದ ಪಾತ್ರವೇನು? ಮುಂದೆ ಓದಿ...

   ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ

   ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ

   ಉತ್ತರಪ್ರದೇಶ ರಾಜ್ಯದ ಸರಯೂ ನದಿ ತೀರದ ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ತಾಣದಲ್ಲೇ ಮೊಘಲರು ಮಸೀದಿ ನಿರ್ಮಾಣ ಮಾಡಿದ್ದಾರೆ ಎಂಬ ವಾದವಿದೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಪಂಚ ಸದಸ್ಯರ ನ್ಯಾಯಪೀಠವು ಅಂತಿಮ ತೀರ್ಪು ನೀಡಿದೆ.

   1885ರಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಸೂಚಿಸಿತ್ತು, ಮೂವರು ಸಂಧಾನಕಾರರನ್ನು ನೇಮಿಸಿತ್ತು. ಆದರೆ, ಸಂಧಾನಕಾರರಿಂದಲೂ ಈ ವ್ಯಾಜ್ಯ ಬಗೆಹರಿಸಲು ಸಾಧ್ಯವಾಗಿರಲಿಲ್ಲ.

   ರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿರ್ಮಾಣ

   ರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿರ್ಮಾಣ

   ಏನಿದು ಪ್ರಕರಣ?: ಹಿಂದೂಗಳ ಆರಾಧ್ಯ ದೈವ ಶ್ರೀರಾಮಚಂದ್ರ ಹುಟ್ಟಿದ ಸ್ಥಳದಲ್ಲಿ ಮಸೀದಿ ನಿರ್ಮಾಣ.

   1853: ಅಯೋಧ್ಯೆದಲ್ಲಿ ಮೊಟ್ಟ ಮೊದಲ ಬಾರಿಗೆ ಕೋಮು ಗಲಭೆ ಘಟನೆ ದಾಖಲಾಗಿದೆ.
   1859: ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ. ಒಳಾಂಗಣ ಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಭಾಗ ಹಿಂದೂಗಳಿಗೆ ಎಂದು ಹಂಚಿಕೆ. ಹಂಚಿಕೆಯಾದ ಭೂ ಭಾಗದಲ್ಲಿ ಮಂದಿರ ನಿರ್ಮಾಣ ಮಾಡಲು ಹಿಂದುಗಳ ನಿರಾಕರಣೆ.

   1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು.

   ಅಲಹಾಬಾದ್ ಹೈಕೋರ್ಟ್ ಆದೇಶ

   ಅಲಹಾಬಾದ್ ಹೈಕೋರ್ಟ್ ಆದೇಶ

   2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ಭಗವಾನ್ ರಾಮ್ ಲಲ್ಲಾ ವಿರಾಜ್ ಮಾನ್ ಸಮಾನಾಗಿ ಹೊಂದಿವೆ. ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು.

   ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ಆದೇಶ ನೀಡಿತ್ತು. ಇದಾದ ಬಳಿಕ ಮೇ 2011ರಲ್ಲಿ 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಹಿಂದೂ ಹಾಗೂ ಮುಸ್ಲಿಂ ಸಮುದಾಯದಿಂದ ಮೇಲ್ಮನವಿ ಸಲ್ಲಿಸಲಾಯಿತು. ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು.

   2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆಯನ್ನು ಅಕ್ಟೋಬರ್ ತಿಂಗಳಿನಲ್ಲಿ ಸತತವಾಗಿ 40 ದಿನಗಳ ವಿಚಾರಣೆ ನಡೆಸಲಾಗಿದ್ದು, ಅಂತಿಮ ತೀರ್ಪು ನವೆಂಬರ್ 09ರಂದು ಹೊರ ಬಂದಿದ್ದು, ಮಂದಿರ ಹಾಗೂ ಮಸೀದಿಗೆ ಮತ್ತೊಮ್ಮೆ ಭೂ ಹಂಚಿಕೆಯಾಗಿದೆ.

   ತೀರ್ಪಿನ ನಂತರ ಮುಂದೇನು?

   ತೀರ್ಪಿನ ನಂತರ ಮುಂದೇನು?

   ಒಂದು ವೇಳೆ ಈ ನ್ಯಾಯಪೀಠದಿಂದ ತೀರ್ಪು ಒಮ್ಮತವಾಗದಿದ್ದರೆ ಮತ್ತೊಂದು ನ್ಯಾಯಪೀಠಕ್ಕೆ ಪ್ರಕರಣ ವರ್ಗಾವಣೆಯಾಗಲಿದೆ. ಆದರೆ, ಅಂತಿಮ ತೀರ್ಪು ಎರಡು ಕಡೆ ಅರ್ಜಿದಾರರಿಗೆ ಒಪ್ಪಿಗೆಯಾಗದಿದ್ದರೆ, ಕೇಂದ್ರ ಸರ್ಕಾರ ತನ್ನ ಪರಮಾಧಿಕಾರ ಬಳಸಿ, ವಿವಾದ ಇತ್ಯರ್ಥಕ್ಕೆ ಮುಂದಾಗಬಹುದು. ಸುಗ್ರಿವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಹುದು.

   ಸಂವಿಧಾನದ ಆರ್ಟಿಕಲ್ 123 ಪ್ರಕಾರ, ಸುಗ್ರಿವಾಜ್ಞೆ ಹೊರಡಿಸುವುದು ಅಷ್ಟು ಸುಲಭವ ಕೆಲಸವಲ್ಲ. ಹಾಗು ಅದಕ್ಕೆ ಸೂಕ್ತ ಪರಿಸ್ಥಿತಿ ಇದೆಯೇ ಎಂಬುದು ಸಾಬೀತಾಗಬೇಕು. ಸಂಸತ್ತಿನ ಉಭಯ ಸದನ, ರಾಷ್ಟ್ರಪತಿಗಳಿಗೆ ಈ ಪರಿಸ್ಥಿತಿಯಲ್ಲಿ ಸುಗ್ರಿವಾಜ್ಞೆ ಹೊರಡಿಸುವುದೊಂದೇ ಮಾರ್ಗ ಎಂಬುದು ಮನವರಿಕೆಯಾದರೆ ಮಾತ್ರ ಸರ್ಕಾರ ಇಂಥ ಕ್ರಮಕ್ಕೆ ಮುಂದಾಗಬಹುದು.

   ಸುಪ್ರೀಂ ತೀರ್ಪಿನ ಬಳಿಕವೂ, ಮೋದಿ ಸರ್ಕಾರ ಸುಗ್ರಿವಾಜ್ಞೆ ಬಳಸಬಹುದೆ?ಸುಪ್ರೀಂ ತೀರ್ಪಿನ ಬಳಿಕವೂ, ಮೋದಿ ಸರ್ಕಾರ ಸುಗ್ರಿವಾಜ್ಞೆ ಬಳಸಬಹುದೆ?

   ತೀರ್ಪಿನ ಮುಖ್ಯಾಂಶಗಳು

   ತೀರ್ಪಿನ ಮುಖ್ಯಾಂಶಗಳು

   * ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿದ ಆದೇಶವನ್ನು ಪಕ್ಕಕ್ಕಿಟ್ಟ ಸುಪ್ರೀಂಕೋರ್ಟ್, ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರನೇ ಒಂದು ಭಾಗ ಹಂಚಿಕೆ ಮಾಡಿದ್ದ ಆದೇಶವನ್ನು ತಿರಸ್ಕರಿಸಲಾಗಿದೆ. ವಿವಾದಿತ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕಾಗಿ ಸ್ಥಾಪನೆಯಾಗಿದ್ದ ಟ್ರಸ್ಟ್ ಗೆ ನೀಡಿದ ಕೋರ್ಟ್,

   * ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಪ್ರತ್ಯೇಕ ಟ್ರಸ್ಟ್ ರಚನೆ ಆಗಬೇಕಿದೆ. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕಾಗುತ್ತದೆ.

   English summary
   Ayodhya Case SC Verdict in Kannada: The Supreme Court has pronounced verdict of Ram Janmbhoomi-Babri Masjid land dispute in Ayodhya.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X