ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ವಿಚಾರಣೆ ಮುಕ್ತಾಯ, ಏನೆಲ್ಲ ಆಯ್ತು?

ನವದೆಹಲಿ, ಅಕ್ಟೋಬರ್ 16: ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ವಿಚಾರಣೆ ಅಂತ್ಯಗೊಂಡಿದ್ದು, ತೀರ್ಪಿನ ದಿನಾಂಕವನ್ನು ಕಾಯ್ದಿರಿಸಲಾಗಿದೆ.

ಕಳೆದ 40 ದಿನಗಳಿಂದ ಪ್ರತಿದಿನವೂ ನಿರಂತರವಾಗಿ ಅಯೋಧ್ಯೆ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತ್ತು. ಇಂದು 5 ಗಂಟೆಯ ಒಳಗೆ ವಿಚಾರಣೆಯನ್ನು ಮುಗಿಸಲೇಬೇಕೆಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ವಕೀಲರಿಗೆ ಗಡುವು ನೀಡಿದ್ದರು.

ಅಂತೆಯೇ ವಿಚಾರಣೆ ಮುಕ್ತಾಯವಾಗಿದ್ದು, ತೀರ್ಪು ಮುಂದಿನ ತಿಂಗಳು ಹೊರಬೀಳಲಿದೆ. ನವೆಂಬರ್ 17 ರಂದು ರಂಜನ್ ಗೊಗೊಯ್ ಅವರು ಸೇವೆಯಿಂದ ನಿವೃತ್ತರಾಗಲಿದ್ದು, ಅದಕ್ಕೂ ಮುನ್ನ ತೀರ್ಪು ನೀಡಬೇಕಿದೆ.

ನವೆಂಬರ್ 4-5 ರಂದು ಟೀರ್ಪು ಹೊರಬರಬಹುದು ಎಂದು ಅಂದಾಜಿಸಲಾಗಿದೆ. ಇಂದು ನಡೆದ ಅಂತಿಮ ದಿನದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟಿನಲ್ಲಿ ನಡೆದ ವಾದ-ವಿವಾದಗಳ ವಿವರ ಇಲ್ಲಿದೆ.

5 ಗಂಟೆಯೊಳಗೆ ಮುಗಿಸಲೇಬೇಕು ಎಂದಿದ್ದ ಸಿಜೆಐ

5 ಗಂಟೆಯೊಳಗೆ ಮುಗಿಸಲೇಬೇಕು ಎಂದಿದ್ದ ಸಿಜೆಐ

ಇಂದು ವಿಚಾರಣೆ ಆರಂಭವಾಗುತ್ತಿದ್ದಂತೆಯೇ, ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು, "ಇಂದು(ಅ.16) ಸಂಜೆ 5 ಗಂಟೆಯವೊಳಗೆ ವಿಚಾರಣೆಯನ್ನು ಮುಗಿಸಲೇಬೇಕು. ಎಲ್ಲದಕ್ಕೂ ಒಂದು ಮಿತಿ ಎಂಬುದಿದೆ. ದಶಕಗಳಿಂದ ನಡೆಯುತ್ತಿರುವ ವಿಚಾರಣೆ ಇದು. ಇನ್ನೂ ಎಳೆಯುವುದು ಸರಿಯಲ್ಲ. ಐದು ಗಂಟೆಯ ಒಳಗೆ ಎಲ್ಲ ವಾದ-ವಿವಾದವೂ ಮುಕ್ತಾಯವಾಗಬೇಕು" ಎಂದು ಖಡಕ್ಕಾಗಿ ಹೇಳಿಬಿಟ್ಟಿದ್ದರು.

ದಾಖಲೆಗಳನ್ನು ಹರಿದ ಮುಸ್ಲಿಂ ಪರ ವಕೀಲ

ದಾಖಲೆಗಳನ್ನು ಹರಿದ ಮುಸ್ಲಿಂ ಪರ ವಕೀಲ

ಕುನಾಲ್ ಕಿಶೋರ್ ಎಂಬುವವರು ಬರೆದ 'ಅಯೋಧ್ಯೆ ರಿವಿಸಿಟೆಡ್' ಎಂಬ ಪುಸ್ತವನ್ನು ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಕೋರ್ಟಿಗೆ ನೀಡಿದರು. ಈ ದಾಖಲೆಯನ್ನು ಸುನ್ನಿ ವಕ್ಫ್ ಬೋರ್ಡ್ ಪರವಾಗಿ ವಾದ ಮಂಡಿಸುತ್ತಿದ್ದ ಹಿರಿಯ ವಕೀಲ ರಾಜೀವ್ ಧನವ್ ಅವರು ಬಲವಾಗಿ ಖಂಡಿಸಿದರು. ಅವರಿಗೆ ನೀಡಲಾಗಿದ್ದ ಈ ಪುಸ್ತಕದ ಹಾಳೆಗಳನ್ನು ಹರಿಯುವ ಮೂಲಕ ಅವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ರಂಜನ್ ಗೊಗೊಯ್ ಕೆಂಗಣ್ಣು

ರಂಜನ್ ಗೊಗೊಯ್ ಕೆಂಗಣ್ಣು

"ರಾಜೀವ್ ವರ್ತನೆಯಿಂದ ತೀವ್ರವಾಗಿ ಬೇಸರಗೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, "ಆ ಹಾಳೆಗಳನ್ನು ಇನ್ನೂ ಹರಿದು, ಚೂರು ಚೂರು ಮಾಡಿಬಿಡಿ" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದರು. ಜೊತೆಗೆ ಕೋರ್ಟಿನಲ್ಲಿ ಇಂಥ ವರ್ತನೆ ಸಹ್ಯವಲ್ಲ, ಇದು ಮುಂದುವರಿದರೆ ನಾನೇ ಇಲ್ಲಿಂದ ಹೊರಹೋಗುತ್ತೇನೆ" ಎಂದರು.

ಹಿಂದುಗಳಿಗೆ ಶಿಯಾ ವಕ್ಫ್ ಬೋರ್ಡ್ ಬೆಂಬಲ

ಹಿಂದುಗಳಿಗೆ ಶಿಯಾ ವಕ್ಫ್ ಬೋರ್ಡ್ ಬೆಂಬಲ

"ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದೇ ಸರಿ. ಏಕೆಂದರೆ ಹಿಂದುಗಳ ವಾದದಂತೆ ಅದು ರಾಮನ ಜನ್ಮಸ್ಥಳ" ಎಂದು ಶಿವಾ ವಕ್ಫ್ ಬೋರ್ಡ್ ನ ಚೇರ್ ಪರ್ಸನ್ ವಾಸಿಮ್ ರಿಜ್ವಿ ಹೇಳುವ ಮೂಲಕ ಹಿಂದುಗಳ ವಾದಕ್ಕೆ ಬೆಂಬಲ ನೀಡಿದ್ದಾರೆ.

ಹಿಂದು ಮಹಾಸಭಾ ಪ್ರತಿಕ್ರಿಯೆ

ಹಿಂದು ಮಹಾಸಭಾ ಪ್ರತಿಕ್ರಿಯೆ

"ನಾವು ನ್ಯಾಯಾಲಯದ ಘನತೆಗೆ ಧಕ್ಕೆ ತರುವಂಥ ವರ್ತನೆಯನ್ನು ಎಂದಿಗೂ ಮಾಡುವುದಿಲ್ಲ. ನಾವು ಕೋರ್ಟಿನ ಘನತೆಯನ್ನು ಕಾಪಾಡುತ್ತೇನೆ. ನಮಗೆ ನ್ಯಾಯಾಲಯದ ಬಗ್ಗೆ ಸಾಕಷ್ಟು ಗೌರವವಿದೆ" ಎಂದು ಈ ಘಟನೆಗೆ ಹಿಂದು ಮಹಾಸಭಾ ಪ್ರತಿಕ್ರಿಯೆ ನೀಡಿತು.

ದಾಖಲೆಗಳನ್ನು ಹರಿಯಲು ಸಿಜಿಐ ಅನುಮತಿ!

ದಾಖಲೆಗಳನ್ನು ಹರಿಯಲು ಸಿಜಿಐ ಅನುಮತಿ!

ದಾಖಲೆಗಳನ್ನು ಹರಿಯಲು ನನಗೆ ಸಿಜೆಐ ರಂಜನ್ ಗೊಗೊಯ್ ಅವರೇ ಅನುಮತಿ ನೀಡಿದ್ದರು ಎಂದು ರಾಜೀವ್ ಧವನ್ ನಂತರ ಸಮಜಾಯಿಷಿ ನೀಡಿದರು. ಅದನ್ನು ರಂಜನ್ ಗೊಗೊಯ್ ಒಪ್ಪಿಕೊಂಡರು.

ಸ್ವಾಮಿ ಅರ್ಜಿ ವಿಚಾರಣೆಗೆ ಒಲ್ಲೆ ಎಂದ ಕೋರ್ಟ್

ಸ್ವಾಮಿ ಅರ್ಜಿ ವಿಚಾರಣೆಗೆ ಒಲ್ಲೆ ಎಂದ ಕೋರ್ಟ್

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೂಡಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ ಸಿಜೆಐ. ದಶಕಗಳ ಹಳೆಯ ಪ್ರಕರಣ ಇದಾಗಿದ್ದು, ಇಂದೇ ವಿಚಾರಣೆ ಮುಗಿಯಬೇಕು ಎಂದಿರುವ ಗೊಗೊಯ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+