ಆಗಸದ ರಂಗೇರಿಸಿದ ಸೂರ್ಯಗ್ರಹಣದ ಸುಂದರ ಛಾಯೆಗಳು

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,09: ಪ್ರಪಂಚದಾದ್ಯಂತ ಬುಧವಾರ ಬೆಳಿಗ್ಗೆ 5.46 ರಿಂದ 6.45 ವರೆಗೆ ಕಾಣಿಸಿರುವ ಸೂರ್ಯ ಗ್ರಹಣ ಕೆಲವೆಡೆ ಸಂಪೂರ್ಣ ಸೂರ್ಯ ಗ್ರಹಣ ಕಾಣಿಸಿಕೊಂಡರೆ, ಕೆಲವೆಡೆ ಭಾಗಶಃ, ಇನ್ನೂ ಹಲವೆಡೆ ಭಾಗಶಃಕ್ಕಿಂತಲೂ ಕಡಿಮೆ ಗೋಚರವಾಗಿದೆ.

ಸೂರ್ಯಗ್ರಹಣದ ಛಾಯೆಗಳು ಒಂದೊಂದು ಕಡೆ ಒಂದೊಂದು ತೆರನಾಗಿ ಕಾಣಸಿಕೊಂಡಿದೆ. ನಾನಾ ದೇಶಗಳಲ್ಲಿ ಬಹಳ ವೈವಿಧ್ಯಪೂರ್ಣವಾಗಿ ಕಂಡಿರುವ ಸೂರ್ಯಗ್ರಹಣವನ್ನು ವೀಕ್ಷಿಸಿದರೆ ಕೆಂಪು, ಹಳದಿ, ಕಪ್ಪು ಬಣ್ಣದೊಂದಿಗೆ ಸೂರ್ಯನು ಆಕಾಶದಲ್ಲಿ ಆಟವಾಡಿದ್ದಾನೆನೋ ಎನಿಸುತ್ತದೆ. ಅಷ್ಟೊಂದು ಮನಮೋಹಕವಾಗಿದೆ ಸೂರ್ಯ ಗ್ರಹಣದ ಛಾಯೆಗಳು.

ಸೂರ್ಯಗ್ರಹಣವನ್ನು ವೀಕ್ಷಿಸಲು ಇರುವ ಪ್ರಾಶಸ್ತ್ಯ ಕಾಲವೆಂದರೆ, ಸೂರ್ಯ ಗ್ರಹಣ ಆರಂಭವಾಗುವ ಅವಧಿ. ಏಕೆಂದರೆ ಆ ಅವಧಿಯಲ್ಲಿ ಅಷ್ಟೊಂದು ಸುಂದರ, ಸೊಬಗಿನಿಂದ ಕೂಡಿರುತ್ತದೆ ನಭದ ಒಡಲು. ಸೂರ್ಯನಿಗೆ ಗ್ರಹಣ ಹಿಡಿದ ಮೇಲೆ ಆತ ಕಪ್ಪು ಉಂಡೆಯಂತೆ ಗೋಚರಿಸುತ್ತಾನೆ. ಆಗ ನಮಗೇನೂ ಅದರಲ್ಲಿ ವಿಶೇಷತೆ ಎನಿಸುವುದಿಲ್ಲ.[ಖಗ್ರಾಸ ಸೂರ್ಯಗ್ರಹಣ ಕುಳಿತಲ್ಲಿಯೆ ನೋಡ್ಕಂಡ್ ಬನ್ನಿ]

ಗ್ರಹಣ ಹಿಡಿಯುವಾಗ ನೋಡಬಾರದು, ಹೊರಗೆ ಹೋಗಬಾರದು, ಮಲಗಬಾರದು ಹೀಗೆ ಏನೇನೋ ನಂಬಿಕೆಗಳು ನಮ್ಮಲ್ಲಿವೆ. ಇವುಗಳನ್ನು ಹೊರತುಪಡಿಸಿಯೂ ಜನರು ತಮ್ಮ ತಮ್ಮ ಕ್ಯಾಮರಗಳಲ್ಲಿ ಸೂರ್ಯ ಗ್ರಹಣದ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಬನ್ನಿ ಸೂರ್ಯಗ್ರಹಣದ ಸುಂದರ ಛಾಯೆಗಳನ್ನು ನೋಡೋಣ.

ಕೆಂಪಾದ ಸೂರ್ಯ

ಕೆಂಪಾದ ಸೂರ್ಯ

ಹುಡುಗಿ ಮದುವೆಯಾಗೋ ಹುಡುಗನನ್ನು ಮೊದಲ ಬಾರಿ ನೋಡಿದಾಗ ಮುಖ ಹೇಗೆ ಕೆಂಪೇರುತ್ತದೋ ಹಾಗೆ ಸೂರ್ಯಗ್ರಹಣ ಸಂದರ್ಭದಲ್ಲಿ ಸೂರ್ಯನು ಚಂದ್ರನನ್ನು ನೋಡಿ ನಾಚಿ ಕಡು ಕೆಂಪು ಬಣ್ಣಕ್ಕೆ ತಿರುಗಿದಂತೆ ಕಾಣುತ್ತದೆ ಗುವಾಹಟಿಯಲ್ಲಿನ ಸೂರ್ಯಗ್ರಹಣದ ಸಂದರ್ಭ.

ಚೆನ್ನೈನಲ್ಲಿ ಸೂರ್ಯಗ್ರಹಣ

ಚೆನ್ನೈನಲ್ಲಿ ಸೂರ್ಯಗ್ರಹಣ

ಚೆನ್ನೈನ ಮರೀನಾ ಬೀಚಿನ ಬಳಿ ಸಾವಿರಾರು ಜನರು ಸೂರ್ಯಗ್ರಹಣಕ್ಕೆ ಸಾಕ್ಷಿಯಾದರು. ನೋಡಿ ಚೆನ್ನೈನಲ್ಲಿ ಸೂರ್ಯ ಹೇಗಿದ್ದಾನೆ.

ಭೂಪಾಲ್ ನಲ್ಲಿ ಸೂರ್ಯಗ್ರಹಣ

ಭೂಪಾಲ್ ನಲ್ಲಿ ಸೂರ್ಯಗ್ರಹಣ

ಮಧ್ಯಪ್ರದೇಶದ ಭೂಪಾಲ್ ನಲ್ಲಿ ಸೂರ್ಯಗ್ರಹಣದ ಸಂದರ್ಭದಲ್ಲಿ ಮುಕ್ಕಾಲು ಭಾಗ ತೆಳು ಹಳದಿ ಬಣ್ಣದಿಂದಲೂ, ಕೊಂಚ ಕೆಳಭಾಗ ಕೇಸರಿ ಬಣ್ಣ ತುಂಬಿಕೊಂಡ ಸೂರ್ಯ ಕಾಣಿಸಿದ್ದು ಹೀಗೆ.

ಕಂದು, ಹಳದಿ, ಕೇಸರಿ ಕಪ್ಪು

ಕಂದು, ಹಳದಿ, ಕೇಸರಿ ಕಪ್ಪು

ಕಂದು, ಹಳದಿ, ಕೇಸರಿ, ಕಪ್ಪು ಈ ನಾಲ್ಕು ಬಣ್ಣಗಳಿಂದ ಕೂಡಿದ ಸೂರ್ಯನ ನಡುವೆ ಒಂದು ಹಕ್ಕಿಯ ಹಾರಾಟ. ಇದು ಗ್ರಹಣದಿಂದ ಸೂರ್ಯ ಮುಕ್ತವಾದಾಗ ಕ್ಯಾಮಾರದ ಕಣ್ಣಿಗೆ ಕಾಣಿಸಿದ್ದು.

ಅಗರ್ತಲಾದಲ್ಲಿ ಸೂರ್ಯಗ್ರಹಣ

ಅಗರ್ತಲಾದಲ್ಲಿ ಸೂರ್ಯಗ್ರಹಣ

ಗುವಾಹಟಿಯ ಅಗರ್ತಲಾದಲ್ಲಿ ಆಗತಾನೇ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಕೊಂಚ ಬಂದಿದ್ದಾನೆ. ಆಗ ಕಂಡು ಬಂದ ದೃಶ್ಯವಿದು. ಆಗ ಕಪ್ಪು ಭರಿತ ಆಕಾಶದಲದಲಿ ಸೂರ್ಯ ಕಡು ಹಳದಿ ಬಣ್ಣದಿಂದಲೂ ಸುತ್ತಲೂ ಕೇಸರಿಯಿಂದಲೂ ಕಾಣಿಸಿದ್ದು ಹೀಗೆ.

ಕಡು ಕೇಸರಿಯ ಸೂರ್ಯ

ಕಡು ಕೇಸರಿಯ ಸೂರ್ಯ

ಸೂರ್ಯಗ್ರಹಣ ಆರಂಭವಾದ ಬಳಿಕ ಗುವಾಹಟಿಯಲ್ಲಿ ಸೂರ್ಯನು ಕಡು ಕೇಸರಿ ಬಣ್ಣದಿಂದ ಕಂಗೊಳಿಸುತ್ತಿದ್ದನು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A awesome pictures of Solar eclipse in India. Million of people across the india watched the solar eclipse on Wednesday. A partial solar eclipse is seen at Marina beach in Chennai, Guwahati, Agartala etc
Please Wait while comments are loading...