ಹೆಸರಾಂತ ಲೇಖಕ ಚೇತನ್ ಭಗತ್ ತಪ್ಪಿಗೆ ಕ್ಷಮೆ ಕೇಳಿದರೂ ಚರ್ಚೆ ನಿಂತಿಲ್ಲ

ಲೇಖಕ-ಅಂಕಣಕಾರ ಚೇತನ್ ಭಗತ್ ಶನಿವಾರ ವಿವಾದವೊಂದರಲ್ಲಿ ಕಾಣಿಸಿಕೊಂಡು, ಮಹಿಳೆಯೊಂದಿಗೆ ನಡೆಸಿದ್ದ ವರ್ಷಗಳ ಹಿಂದಿನ ವಾಟ್ಸ್ ಆಪ್ ಸಂಭಾಷಣೆ ಚರ್ಚೆಗೆ ಕಾರಣವಾಯಿತು. ಕೆಲ ವರ್ಷಗಳ ಹಿಂದೆ ನಾನಾ ಪಾಟೇಕರ್ ರಿಂದ ತನಶ್ರೀ ದತ್ತಾಗೆ ಸಿನಿಮಾ ಸೆಟ್ ನಲ್ಲಿ ಲೈಂಗಿಕ ಶೋಷಣೆ ಆಗಿತ್ತು ಎಂಬ ವಿವಾದ ಮತ್ತೆ ತಲೆ ಎತ್ತಿರುವ ಹಿನ್ನೆಲೆಯಲ್ಲಿ ಚೇತನ್ ಭಗತ್ ವಿವಾದವೂ ಕಾಣಿಸಿಕೊಂಡಿದೆ.

ಆಸಕ್ತಿಕರ ವಿಷಯ ಏನೆಂದರೆ, ತನುಶ್ರೀ ದತ್ತಾ ಮಾಡಿದ ಆರೋಪದ ಬಗ್ಗೆ ಕೇಳಿಸಿಕೊಳ್ಳಬೇಕು ಎಂದು ಚೇತನ್ ಭಗತ್ ಹೇಳಿದ್ದರು. ಮಹಿಳೆಯೊಬ್ಬರು ಆ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಚೇತನ್ ಭಗತ್ ಮಾಡಿದ್ದಾರೆ ಎನ್ನಲಾದ ವಾಟ್ಸ್ ಆಪ್ ಮೆಸೇಜ್ ಪೋಸ್ಟ್ ಮಾಡಿದ್ದರು.

ಅವುಗಳನ್ನು ಕಳಿಸಿದ್ದು ನಾನೇ. ಅದಕ್ಕಾಗಿ ನನ್ನ ಪತ್ನಿಯ ಬಳಿ ಕ್ಷಮೆ ಕೇಳುತ್ತೇನೆ ಎಂದು ಚೇತನ್ ಭಗತ್ ಹೇಳಿದ್ದಾರೆ. ಕೆಲ ವರ್ಷಗಳ ಹಿಂದಿನ ಆ ಸಂಭಾಷಣೆಯ ಸ್ಕ್ರೀನ್ ಶಾಟ್ ನಲ್ಲಿ ಕಂಡುಬರುವಂತೆ ಪ್ರೀತಿಯನ್ನು ಗಳಿಸುವ ಪ್ರಯತ್ನದಂತೆ ಕಂಡುಬರುತ್ತದೆ. ಮತ್ತು ಆ ಮಹಿಳೆ ಪತ್ರಕರ್ತೆಯಾಗಿ, ಚೇತನ್ ಭಗತ್ ಗೆ ಪರಿಚಿತರು ಎಂದು ತಿಳಿಯುತ್ತದೆ.

Author Chetan Bhagat’s apology in Facebook post

ಇಲ್ಲಿ ಇನ್ನೊಂದು ವಿಚಾರ ಸ್ಪಷ್ಟಪಡಿಸುತ್ತೀನಿ. ಅಲ್ಲಿ ಯಾವುದೇ ದೈಹಿಕವಾದ ವಿಚಾರವಲ್ಲ. ಆಕ್ಷೇಪಾರ್ಹವಾದ ಚಿತ್ರ ಅಥವಾ ಮಾತುಗಳನ್ನು ವಿನಿಮಯ ಮಾಡಿಕೊಂಡಿಲ್ಲ. ನಂತರ ಆ ವ್ಯಕ್ತಿಯ ಫೋನ್ ನಂಬರ್ ಡಿಲೀಟ್ ಮಾಡಿದ್ದೇನೆ. ಅವರ ಜತೆಗೆ ಯಾವುದೇ ಸಂಪರ್ಕ ಕೂಡ ಇಲ್ಲ ಎಂದು ಚೇತನ್ ಭಗತ್ ಹೇಳಿದ್ದಾರೆ.

ನಾನಾ ಪಾಟೇಕರ್ ಬಗ್ಗೆ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ ತನುಶ್ರೀ ದತ್ತಾ.!

ಸಾಮಾಜಿಕ ಮಾಧ್ಯಮದಲ್ಲಿ ಸಂಭಾಷಣೆಯ ಸ್ಕ್ರೀನ್ ಶಾಟ್ ಹರಿದಾಡುತ್ತಿದ್ದು, ಚೇತನ್ ಭಗತ್ ಪರ ಹಾಗೂ ವಿರುದ್ಧವಾದ ಚರ್ಚೆಗಳು ನಡೆಯುತ್ತಿವೆ. ಲೇಖಕ ಚೇತನ್ ಭಗತ್ ಭಾರತದ ಬೆಸ್ಟ್ ಸೆಲ್ಲರ್ ಗಳಲ್ಲಿ ಒಬ್ಬರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+