ಆತ್ಮಹತ್ಯೆ ಯತ್ನ ಇನ್ನು ಮುಂದೆ ಅಪರಾಧವಲ್ಲ
ನವ ದೆಹಲಿ, ಜೂನ್ 02: ಆತ್ಮಹತ್ಯೆ ಪ್ರಯತ್ನ ಇನ್ನು ಮುಂದೆ ಭಾರತದಲ್ಲಿ ಅಪರಾಧವಲ್ಲ. ಮಾನಸಿಕ ಆರೂಗ್ಯ ಕಾಯ್ದೆ 2017ಯ ಪ್ರಕಾರ ಕೇಂದ್ರ ಆರೋಗ್ಯ ಇಲಾಖೆ ಮೇ 29ರಂದು ಈ ಅಧಿಸೂಚನೆ ಹೊರಡಿಸಿದೆ.
ಆತ್ಮಹತ್ಯೆ ಯತ್ನಕ್ಕೆ ಮಾನಸಿಕ ಒತ್ತಡ ಕಾರಣ ಹಾಗಾಗಿ ಆತ್ಮಹತ್ಯೆ ಯತ್ನವನ್ನು ಮಾನಸಿಕ ಖಾಯಿಲೆಯ ರೂಪದಲ್ಲಿ ಕಾಣಬೇಕೆ ವಿನಃ ಅಪರಾಧವಾಗಿ ಅಲ್ಲ ಎಂದು ಹೊಸ ಕಾಯ್ದೆ ಹೇಳುತ್ತಿದೆ.
ಕಳೆದ ವರ್ಷ ಲೋಕಸಭೆಯಲ್ಲಿ ಮಂಡಿಸಲಾಗಿದ್ದ 'ಮೆಂಟಲ್ ಹೆಲ್ತ್ ಕೇರ್ ಬಿಲ್ 2017' (ಮಾನಸಿಕ ಆರೂಗ್ಯ ಕಾಯ್ದೆ 2017) ಕಾಯ್ದೆಯು ಈ ವರ್ಷ ಜಾರಿಯಾಗಿದ್ದು, ಇನ್ನು ಮುಂದೆ ಆತ್ಮಹತ್ಯೆ ಯತ್ನವನ್ನು ಐಪಿಸಿ ಅಡಿಯಲ್ಲಿ ಪರಿಶೀಲನೆ ಮಾಡಲಾಗದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಇದೇ ಕಾಯ್ದೆಯು ಮಾನಸಿಕ ಅಸ್ವಸ್ಥ ಮಕ್ಕಳಿಗೆ ವಿದ್ಯುತ್ ಶಾಕ್ ಟ್ರೀಟ್‌ಮೆಂಟ್‌ನಿಂದಲೂ ಮುಕ್ತಿ ದೊರಕಿಸಿದೆ. ಅಷ್ಟೆ ಅಲ್ಲದೆ ಹಿರಿಯ ಮಾನಸಿಕ ರೋಗಿಗಳಿಗೆ ಸಹ ಅರಿವಳಿಕೆ ನೀಡಿದ ತರುವಾಯವೇ ವಿದ್ಯುತ್ ಶಾಕ್ ಚಿಕಿತ್ಸೆ ನೀಡಬೇಕು ಎಂದು ಸೂಚಿಸಲಾಗಿದೆ.












Click it and Unblock the Notifications