RV155677820-ಇದು ನಾಸ್ತಿಕನೊಬ್ಬನ ನಾಮಧೇಯ!
ರಾಜೀವ್ ಉಪಾಧ್ಯಾಯ್ ಎಂಬ 33 ವರ್ಷ ವಯಸ್ಸಿನ ಆಟೋರಿಕ್ಷಾ ಚಾಲಕರೊಬ್ಬರು ಗುಜರಾತ್ ಸರ್ಕಾರದ ಮುಂದೆ ವಿಶಿಷ್ಟವಾದ ಬೇಡಿಕೆ ಇಟ್ಟಿದ್ದಾರೆ. ನಾನು ನಾಸ್ತಿಕನಾಗಿದ್ದು, ನನ್ನ ಹೆಸರನ್ನು RV155677820 ಎಂದು ಬಳಸಲು ಅನುಮತಿ ನೀಡಬೇಕು ಎಂದಿದ್ದಾರೆ.
ಅಹಮದಾಬಾದ್, ಮೇ 24 : ರಾಜೀವ್ ಉಪಾಧ್ಯಾಯ್ ಎಂಬ 33 ವರ್ಷ ವಯಸ್ಸಿನ ಆಟೋರಿಕ್ಷಾ ಚಾಲಕರೊಬ್ಬರು ಗುಜರಾತ್ ಸರ್ಕಾರದ ಮುಂದೆ ವಿಶಿಷ್ಟವಾದ ಬೇಡಿಕೆ ಇಟ್ಟಿದ್ದಾರೆ. ನಾನು ನಾಸ್ತಿಕನಾಗಿದ್ದು, ನನ್ನ ಹೆಸರನ್ನು RV155677820 ಎಂದು ಬಳಸಲು ಅನುಮತಿ ನೀಡಬೇಕು ಎಂದು ಕೋರಿದ್ದಾರೆ.
ಸರ್ಕಾರದ ಅಧೀನದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ನನ್ನ ಹೆಸರನ್ನು ಇನ್ಮುಂದೆ RV155677820 ಎಂದೆ ಪರಿಗಣಿಸುವಂತೆ ಅನುಮತಿ ನೀಡಿ, ಆದೇಶ ಹೊರಡಿಸುವಂತೆ ಗುಜರಾತಿನ ವಿಜಯ್ ರೂಪಾನಿ ಸರ್ಕಾರಕ್ಕೆ ರಾಜೀವ್ ಉಪಾಧ್ಯಾಯ್ ಅವರು ಮನವಿ ಸಲ್ಲಿಸಿದ್ದಾರೆ.[ಮಗುವಿಗೆ ಹೆಸರಿಡುವಾಗ ಭವಿಷ್ಯದ ಅರಿವಿರಲಿ!]

ತನ್ನ ಜನ್ಮಜಾತ ಹೆಸರು, ಮನೆಯವರು, ಗೆಳೆಯರು ಕರೆಯುವ ಹೆಸರು ಎಲ್ಲವೂ ಯಾವುದಾದರೂ ಧರ್ಮ, ಮತ, ಪಂಥಕ್ಕೆ ಸೇರಿದ್ದಾಗಿದೆ. ನನಗೆ ಯಾವುದೇ ಧರ್ಮದ ಜತೆಗೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಇದಕ್ಕಾಗಿ ನನ್ನ ಹೆಸರು ಬದಲಾಯಿಸಿಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ. [3626 ರಾಮನ ಹೆಸರಲ್ಲಿ 3309 ಕೃಷ್ಣ ಹೆಸರಿನಲ್ಲಿ!]
RV155677820 -ಇದೇ ಅಂಕಿ ಸಂಖ್ಯೆ ಏಕೆ ಎಂದು ಪ್ರಶ್ನಿಸಿದರೆ ಇದರಲ್ಲಿ ಹೆಸರಿನ ಇನಿಶಿಯಲ್ಸ್ ಹಾಗೂ ಶಾಲೆಯ ನೋಂದಣಿ ಸಂಖ್ಯೆ ಇದೆ ಎಂದು ರಾಜೀವ್ ತಿಳಿಸಿದ್ದಾರೆ. ಹೆಸರು ಬದಲಾವಣೆಗೆ ಅನೇಕ ವರ್ಷಗಳ ಹಿಂದೆ ಅರ್ಜಿ ಹಾಕಿದ್ದರೂ ಪ್ರಯೋಜನವಾಗದ ಕಾರಣ, ಆರ್ ಟಿಐ ಅರ್ಜಿ ಹಾಕಿ, ಹೆಸರು ಬದಲಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ಕೇಳಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.












Click it and Unblock the Notifications