ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3626 ರಾಮನ ಹೆಸರಲ್ಲಿ 3309 ಕೃಷ್ಣ ಹೆಸರಿನಲ್ಲಿ!

By Srinath
|
Google Oneindia Kannada News

ನವದೆಹಲಿ, ಜುಲೈ 4- ದೇವರೊಬ್ಬನೇ ನಾಮ ಹಲವು! ಭಾರತ ಹಳ್ಳಿಗಳ ದೇಶ. ಭಾರತದ ಮಟ್ಟಿಗೆ ಇವೆರಡೂ ವಾಸ್ತವ! ನಮ್ಮ ಜನಜೀವನದಲ್ಲಿ ದೇವರನ್ನು ನಾವೇ ಸರ್ವಾಂತರ್ಯಾಮಿಯಾಗಿಸಿಕೊಂಡಿದ್ದೇವೆ.

The Indian Express ಇತ್ತೀಚೆಗೆ ಒಂದು ಅಧ್ಯಯನವೊಂದನ್ನು ನಡೆಸಿದೆ. ಏನಪ್ಪಾ ಅಂದರೆ 2011ರ ಗಣತಿಯ ಪ್ರಕಾರ ದೇಶದಲ್ಲಿ ಒಟ್ಟು 6,77,459 ಗ್ರಾಮಗಳಿವೆ. ಈ ಗ್ರಾಮಗಳು ದೇವರ ಹೆಸರನ್ನು ಧರಿಸಿವೆ. ರಾಮ- ಕೃಷ್ಣ ಅಂತೆಲ್ಲಾ ಗ್ರಾಮಗಳು ದೇವರ ಹೆಸರನ್ನು ಹೊತ್ತಿವೆ. ಇವುಗಳ ಪೈಕಿ ರಾಮನ ಹೆಸರಿನಲ್ಲಿ ಅತ್ಯಧಿಕ ಸಂಖ್ಯೆಯ ಗ್ರಾಮಗಳಿದ್ದರೆ ಕೃಷ್ಣನ ಹೆಸರಿನಲ್ಲಿರುವ ಗ್ರಾಮಗಳ ಸಂಖ್ಯೆ ದ್ವಿತೀಯ ಸ್ಥಾನದಲ್ಲಿದೆ.

ಗ್ರಾಮ/ಊರುಗಳಿಗೆ ಇಟ್ಟಿರುವ ಹೆಸರುಗಳ ಅಧ್ಯಯನಕ್ಕೆ Onomastics ಮತ್ತು Toponymy ಅನ್ನುತ್ತಾರೆ. ಒರಿಸ್ಸಾ ಕೇಡರಿನ ಐಎಎಸ್ ಅಧಿಕಾರಿ ಆರ್ ಬಾಲಕೃಷ್ಣನ್ ಅವರು ಕಳೆದ 25 ವರ್ಷಗಳಿಂದ ಇಂತಹ ಅಧ್ಯಯನವನ್ನೇ ಅನ್ನಾಹಾರ ಮಾಡಿಕೊಂಡಿದ್ದಾರೆ.

ರಾಮ- ಕೃಷ್ಣ ನಾಮಧಾರಿ ಊರುಗಳು

ರಾಮ- ಕೃಷ್ಣ ನಾಮಧಾರಿ ಊರುಗಳು

3,626 ಗ್ರಾಮಗಳು ರಾಮನ ಹೆಸರಿನಲ್ಲಿವೆ. 3,309 ಹಳ್ಳಿಗಳು ಕೃಷ್ಣ ನಾಮಧಾರಿಯಾಗಿವೆ. ಆದರೆ ರಾಮನ ಹೆಸರಿನ ಊರುಗಳು ಕೇರಳದಲ್ಲಿ ಒಂದೂ ಇಲ್ಲ.

ಕೇರಳ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ

ಕೇರಳ ಹೆಸರಿನ ಗ್ರಾಮಗಳು ಉತ್ತರ ಭಾರತದಲ್ಲಿ

ಬೆಂಗಾಲ್ ಅಥವಾ ಬಾಂಗ್ಲಾ ಹೆಸರಿನ 92 ಗ್ರಾಮಗಳು ಮಹಾರಾಷ್ಟ್ರ, ಪಂಜಾಬ್, ಆಂಧ್ರ ಪ್ರದೇಶ ಸೇರಿದಂತೆ ಪಶ್ಚಿಮ ಬಂಗಾಳ ರಾಜ್ಯಗಳ ಹೊರಗಡೆ ಇವೆ. ಕೇರಳ ಹೆಸರಿನ ಗ್ರಾಮಗಳೂ ಇವೆ. ಅದೂ ಉತ್ತರ ಭಾರತದಲ್ಲಿ. ಅವುಗಳ ಸಂಖ್ಯೆ 33.
ಅಂದಹಾಗೆ ಚೋಳರ ಕೇರಳ ಹೆಸರಿನ ಮೂಲ ಹೀಗಿದೆ ಚೇರ್ ಅಂದರೆ ಸಮುದ್ರದ ಸಮೀಪ ಇರುವುದರಿಂದ ಚೇರ್ ಅಂದರೆ ಮರಳು/ಮಣ್ಣಿನ ಬುರುದೆ ಅನ್ನುತ್ತಾರೆ. ಅದು ಮುಂದೆ ಚೇರಳಂ ಆಗಿ ಕಾಲಾಂತರದಲ್ಲಿ ಕೇರಳ ಆಗಿದೆ. ಮತ್ತೊಂದು ಮಾಹಿತಿಯ ಪ್ರಕಾರ ತೆಂಗಿನ ನಾಡು ಕೇರಳವಾಗಿದೆ.

ಕೇದಾರ ಹೆಸರಿನಲ್ಲಿ 75 ಗ್ರಾಮಗಳು

ಕೇದಾರ ಹೆಸರಿನಲ್ಲಿ 75 ಗ್ರಾಮಗಳು

ಅಲಹಾಬಾದಿನ ಹಳೆಯ ಹೆಸರಾದ ಪ್ರಯಾಗ್ ಹೆಸರಿನಲ್ಲಿ 17 ಗ್ರಾಮಗಳು, ವಾರಣಾಸಿಯ ಹಳೆಯ ಹೆಸರಾದ ಕಾಶಿ ಹೆಸರಿನಲ್ಲಿ 41 ಗ್ರಾಮಗಳು ಇವೆ. ಇನ್ನು ಉತ್ತರ ಪ್ರದೇಶದ ಹೊರಗೆ 28 ಆಗ್ರಾ ಹೆಸರಿನ ಹಳ್ಳಿಗಳಿವೆ.
189 ಗ್ರಾಮಗಳ ಹೆಸರು ಬಿಹಾರ ಹೆಸರಿನಿಂದ ಆರಂಭವಾಗುತ್ತವೆ. ಅವುಗಳಲ್ಲಿ 171 ಗ್ರಾಮಗಳು ಬಿಹಾರದ ಹೊರಗಡೆ ಇವೆ. ಬದರಿ ಹೆಸರಿನಲ್ಲಿ 47 ಗ್ರಾಮಗಳು ಇವೆ. ಕೇದಾರ ಹೆಸರಿನಲ್ಲಿ 75 ಗ್ರಾಮಗಳಿವೆ. ಈ ಹೆಸರಿನ ಹಳ್ಳಿಗಳು ಉತ್ತರಾಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರದಲ್ಲಿವೆ.

ರಾವಣ ಹೆಸರಿನಲ್ಲಿ ಇನ್ನೂ 6 ಗ್ರಾಮಗಳು ಭಾರತದಲ್ಲಿವೆ

ರಾವಣ ಹೆಸರಿನಲ್ಲಿ ಇನ್ನೂ 6 ಗ್ರಾಮಗಳು ಭಾರತದಲ್ಲಿವೆ

ರಾಮಾಯಣದ ಭರತನ ಹೆಸರಿನಲ್ಲಿ 187 ಗ್ರಾಮಗಳು, ಲಕ್ಷ್ಮಣನ ಹೆಸರಿನಲ್ಲಿ 160, ಹನುಮಂತನ ಹೆಸರಿನಲ್ಲಿ 367 ಗ್ರಾಮಗಳು ಇದ್ದರೆ ಸೀತೆಯ ಹೆಸರಿನಲ್ಲಿ 75 ಗ್ರಾಮಗಳು ಇವೆ.
ರಾವಣ ಹೆಸರಿನಲ್ಲಿ ಇನ್ನೂ 6 ಗ್ರಾಮಗಳು ಭಾರತದಲ್ಲಿವೆ, ಸ್ವಾಮಿ! ಇನ್ನು, ಆತನ ತಂದೆ ಅಹಿರ್ವಣ ಹೆಸರಿನಲ್ಲಿ 3 ಹಳ್ಳಿಗಳು ಬಿಹಾರದಲ್ಲಿವೆ. ಆದರೆ ರಾಮ ಕಡೆಗೆ ಪಕ್ಷಾಂತರ ಮಾಡಿದ ರಾವಣನ ತಮ್ಮ ವಿಭೀಷಣನ ಹೆಸರಿನಲ್ಲಿ ಒಂದೂ ಗ್ರಾಮ ಇಲ್ಲ. ಅಯೋಧ್ಯ ಹೆಸರಿನ ಹಳ್ಳಿಗಳಿ ಅಲ್ಲಲ್ಲಿ ಕಂಡುಬರುತ್ತವೆ.

ಗಂಜಾಂ ಜಿಲ್ಲೆಯಲ್ಲಿ ಭೀಷ್ಮನ ಊರು

ಗಂಜಾಂ ಜಿಲ್ಲೆಯಲ್ಲಿ ಭೀಷ್ಮನ ಊರು

ರಾಮಾಯಣ ಆದ ಮೇಲೆ ಬಂದ ಮಹಾಭಾರತದಲ್ಲಿ ವಿಜೃಂಭಿಸಿದ ಕೃಷ್ಣ ಅತ್ಯಂತ ಜನಪ್ರಿಯ. ಕೃಷ್ಣನ ಹೆಸರಿನಲ್ಲಿ ಅನೇಕ ಹಳ್ಳಿಗಳಿವೆ. ಸೌಭಾಗ್ಯವೆಂದರೆ ಕುರುಕ್ಷೇತ್ರ ಹೆಸರನ್ನು ಯಾವ ಊರಿಗೂ ಇಟ್ಟಿಲ್ಲ. ಹರಿಯಾಣದ ಕುರುಕ್ಷೇತ್ರಕ್ಕೆ ಅದುಹೇಗೋ ಆ ಹೆಸರು ತಗಲುಹಾಕಿಕೊಂಡಿದೆ.
ಇಂದು ಸತ್ಯ ನಶಿಸುತ್ತಾ ಸಾಗಿರಬಹುದು ಆದರೆ ಸತ್ಯದ ಸಂಕೇತವಾಗಿ ಯುಧಿಷ್ಠರ ಹೆಸರಿನ ಗ್ರಾಮಗಳು ಇಂದಿಗೂ ಇವೆ. ಭೀಮನ ಹೆಸರಿನಲ್ಲಿ 385 ಗ್ರಾಮಗಳಿವೆ. ಅರ್ಜುನ ಹೆಸರಿನಲ್ಲಿ 259 ಗ್ರಾಮಗಳಿವೆ. ಒರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಭೀಷ್ಮ ಹೆಸರಿನಲ್ಲೂ ಒಂದು ಊರು ಇದೆ.

ಮಹಾತ್ಮ ಗಾಂಧಿ ಹೆಸರಿನಲ್ಲಿಯೂ 117 ಗ್ರಾಮಗಳು

ಮಹಾತ್ಮ ಗಾಂಧಿ ಹೆಸರಿನಲ್ಲಿಯೂ 117 ಗ್ರಾಮಗಳು

ಗತಿಸಿದ ಚಕ್ರವರ್ತಿಗಳು, ರಾಜಾ, ರಾಣಿ ಹೆಸರಿನಲ್ಲೂ ಅನೇಕಾನೇಕ ಊರುಗಳಿವೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಹೆಸರಿನಲ್ಲಿಯೂ 117 ಗ್ರಾಮಗಳಿವೆ. ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ 72 ಗ್ರಾಮಗಳಿವೆ. ಲಾಲ ಬಹಾದೂರ್ ಶಾಸ್ತ್ರಿ ಅವರ ಹೆಸರಿನಲ್ಲಿ ಯಾವುದೇ ಊರಿಲ್ಲ. ಅಂಬೇಡ್ಕರ್ ಹೆಸರಿನಲ್ಲಿ 13, ಇಂದಿರಾ ಗಾಂಧಿ ಹೆಸರಿನಲ್ಲಿ 36 ಇದ್ದರೆ ರಾಜೀವ್ ಗಾಂಧಿ ಹೆಸರಿನಲ್ಲಿ 19 ಗ್ರಾಮಗಳಿವೆ.

ಜಾತ್ಯಾತೀತ ಭಾರತ, ವಿವಿಧತೆಯಲ್ಲಿ ಏಕತೆ

ಜಾತ್ಯಾತೀತ ಭಾರತ, ವಿವಿಧತೆಯಲ್ಲಿ ಏಕತೆ

ಮೊಘಲರ ದೊರೆ ಅಕ್ಬರ್ ಹೆಸರಿನಲ್ಲಿ 234 ಊರುಗಳಿವೆ. ಆತನ ತಾತ ಬಾಬರ್ ಹೆಸರಿನಲ್ಲಿ 62 ಗ್ರಾಮಗಳಿವೆ. ತಂದೆ ಹುಮಾಯೂನ್ ಹೆಸರಿನಲ್ಲಿ 30 ಊರುಗಳಿವೆ. ಶಾಹಜಹಾನ್ ಹೆಸರಿನಲ್ಲಿ 51 ಗ್ರಾಮಗಳಿದ್ದರೆ ಔರಂಗಜೇಬ್ ಹೆಸರಿನಲ್ಲಿ ಉತ್ತರಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 8 ಗ್ರಾಮಗಳಿವೆ.
ರಾಮಘಡಗಳು 163 ಇವೆ. (ಅಮೀರ್ ಖಾನ್ ಚಿತ್ರದ) ಪೀಪ್ಲಿ ಹೆಸರಿನ ಗ್ರಾಮಗಳು 27 ಇವೆ.

English summary
Onomastics Toponymy in India - Villages Name game. An IAS officer of Orissa cadre, R Balakrishnan, is involved in place name studies for 25 years. The Indian Express went through the names of all 6,77,459, inhabited and uninhabited, villages in India, as listed in Census 2011. Lord Ram ranks way up there, with 3,626 villages named after him, in almost all parts of the country except Kerala, while Lord Krishna is a close second at 3,309.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X