ವಾಜಪೇಯಿ ಮತ್ತು ಕಂದಹಾರ್ ವಿಮಾನ ಅಪಹರಣದ ನೆನೆಪು

ನವದೆಹಲಿ, ಆಗಸ್ಟ್ 16 : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾಗಿದ್ದಾರೆ. ವಾಜಪೇಯಿ ಅವರ ಬಗ್ಗೆ ಮಾತನಾಡುವಾಗ ಕಂದಹಾರ್ ವಿಮಾನ ಹೈಜಾಕ್ ಘಟನೆಯನ್ನು ನೆನಪಿಸಿಕೊಳ್ಳಬೇಕು.

1999ರ ಡಿಸೆಂಬರ್ 24ರಂದು ನಡೆದ ಘಟನೆ ಭಾರತದ ಇತಿಹಾಸದ ಪುಟವನ್ನು ಸೇರಿದೆ. ವಿಮಾನ ಅಪಹರಣದ ಸಮಯದಲ್ಲಿ ವಾಜಪೇಯಿ ಅವರು ತೋರಿದ ದಿಟ್ಟತನ, ಗಟ್ಟಿ ನಿರ್ಧಾರವನ್ನು ಇಂದಿಗೂ ಮರೆಯಲಾಗದು.

ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಆಗಮಿಸಬೇಕಿದ್ದ 176 ಪ್ರಯಾಣಿಕರಿದ್ದ ವಿಮಾನವನ್ನು ತಾಲಿಬಾನ್ ಉಗ್ರರು ಅಪಹರಣ ಮಾಡಿದ್ದರು. ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣ ತಲುಪಬೇಕಿದ್ದ ವಿಮಾನವನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ತೆಗೆದುಕೊಂಡು ಹೋದರು.

Atal Bihari Vajpayee death

ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಉಗ್ರರ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಕ್ಕೆ ಇದು ಬಹುದೊಡ್ಡ ಸವಾಲು ಆಗಿತ್ತು.

ತಾಲಿಬಾನ್ ಉಗ್ರರು ಇಟ್ಟಿದ್ದ ಬೇಡಿಕೆಗಳಲ್ಲಿ ಉಗ್ರ ಮೌಲಾನಾ ಮಸೂದ್ ಅಝರ್ ಬಿಡುಗಡೆ ಪ್ರಮುಖವಾಗಿತ್ತು. ವಾಜಪೇಯಿ ಸರ್ಕಾರಕ್ಕೆ ಆಲೋಚನೆ ಮಾಡಲು ಸಮಯಾವಕಾಶ ಇರಲಿಲ್ಲ. ದೇಶವೇ ಪ್ರಧಾನಿಗಳ ನಿರ್ಧಾರಕ್ಕಾಗಿ ಕಾದು ನೋಡುತ್ತಿತ್ತು.

ಪ್ರಧಾನಿ ವಾಜಪೇಯಿ ಅವರು ಉಗ್ರರ ಜೊತೆ ಮಾತುಕತೆಗೆ ಮುಂದಾದರು. ಸಂಪುಟದಲ್ಲಿ ವಿದೇಶಾಂಗ ವ್ಯವಹಾರ ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರನ್ನು ಮಾತುಕತೆ ಕಳುಹಿಸಿದರು. ಉಗ್ರರ ಬೇಡಿಕೆಯಂತೆ ನಡೆದುಕೊಂಡ ಸರ್ಕಾರ 176 ಪ್ರಯಾಣಿಕರು ಪಾಣ ಉಳಿಸಿತ್ತು.

ಈ ಘಟನೆ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಆದರೆ, ಪ್ರಯಾಣಿಕರ ಸುರಕ್ಷತೆ ದೇಶದ ಪ್ರಧಾನ ಆದ್ಯತೆ ಆಗಿತ್ತು. ಇಂತಹ ಕಠಿಣ ಸಂದರ್ಭದಲ್ಲಿ ಅಟಜೀ ಅವರು ತೆಗೆದುಕೊಂಡ ನಿರ್ಧಾರ ಹಲವರ ಮುಚ್ಚುಗೆಗೂ ಕಾರಣವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+