ಭವಿಷ್ಯ: ಭೂಮಂಡಲಕ್ಕೆ ಎದುರಾಗಲಿದೆ 68 ದಿನಗಳ ಗಂಡಾಂತರ!

Posted By:
Subscribe to Oneindia Kannada

ಜ್ಯೋತಿಷ್ಯ, ಭವಿಷ್ಯ, ಜಾತಕ ಎಲ್ಲಾ ಬರೀ ಪೊಳ್ಳು, ಜನರನ್ನು ಯಾಮಾರಿಸುವ ಹೊಸ ವ್ಯಾಪಾರ ಎನ್ನುವವರ ಸಂಖ್ಯೆ ಹೆಚ್ಚಿದ್ದರೂ, ಇದನ್ನು ನಂಬುವವರಿಗೇನೂ ಕೊರತೆಯಿಲ್ಲ.

ಏಪ್ರಿಲ್ ತಿಂಗಳಿನಿಂದ 68 ದಿನಗಳ ಕಾಲ ಜಗತ್ತಿಗೆ ಭಾರೀ ಗಂಡಾಂತರ ಕಾದಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಹಾಗಂತ, ಇದು ಕೋಡಿಮಠದ ಶ್ರೀಗಳು ತಾಳೇಗರಿಯ ಮೂಲಕ ನುಡಿದ ಭವಿಷ್ಯವಲ್ಲ, ಅಥವಾ ಬ್ರಹ್ಮಾಂಡ ಸ್ವಾಮಿ ಟಿವಿಯಲ್ಲಿ ನುಡಿದ ಅಂಬೋಣವೂ ಅಲ್ಲ. (2016 ವರ್ಷ ಭವಿಷ್ಯ, ನಿಮ್ಮ ರಾಶಿಗೆ ಏನಿದೆ)

ಶನಿ ಮತ್ತು ಮಂಗಳ ಗ್ರಹಗಳು ವೃಶ್ಚಿಕ ರಾಶಿಯನ್ನು ಹಾದು ಹೋಗುವ ಸಮಯದಲ್ಲಿ ವಿಶ್ವಕ್ಕೆ ಗಂಡಾಂತರ ಕಾದಿದೆ ಎಂದು ಜ್ಯೋತಿಷಿಗಳು ನುಡಿದಿರುವ ಭವಿಷ್ಯವನ್ನು ಉಲ್ಲೇಖಿಸಿ ಜೀನ್ಯೂಸ್ ಅಂತರ್ಜಾಲ ವರದಿ ಮಾಡಿದೆ.

ಇನ್ನೆರಡು ದಿನದಲ್ಲಿ ಆರಂಭವಾಗಲಿರುವ ಅಶುಭಕರ ಅವಧಿಯ ವೇಳೆ, ಸಾಕಷ್ಟು ನೈಸರ್ಗಿಕ ಪ್ರಕೋಪಗಳನ್ನು ಜಗತ್ತು ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. (ಯುಗಾದಿಗೆ ಮುನ್ನ ಕೋಡಿ ಶ್ರೀಗಳ ಭವಿಷ್ಯ)

ಕೋಡಿಮಠದ ಶ್ರೀಗಳು ಕೂಡಾ ಯುಗಾದಿಯ ನಂತರ ದಕ್ಷಿಣದ ರಾಜ್ಯದಲ್ಲಿ ಬೆಂಕಿ ಅವಘಡ ಸಂಭವಿಸಲಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಗುರು ಚಾಂಡಾಲ ಯೋಗ

ಗುರು ಚಾಂಡಾಲ ಯೋಗ

ಶನಿ ಮತ್ತು ಮಂಗಳ ಗ್ರಹಗಳು ಏಕಕಾಲದಲ್ಲಿ ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ, ಇದಕ್ಕೆ ಜ್ಯೋತಿಷ್ಯ ಭಾಷೆಯಲ್ಲಿ ಗುರು ಚಾಂಡಾಲ ಯೋಗ ಎಂದು ಕರೆಯಲ್ಪಡುತ್ತದೆ. ಈ ಅವಧಿ ಜಗತ್ತಿಗೆ ಅನಿಷ್ಟಕರ ಎಂದು ಜ್ಯೋತಿಷಿಗಳು ಅಭಿಪ್ರಾಯ ಪಟ್ಟಿದ್ದಾರೆ.

ನೈಸರ್ಗಿಕ ವಿಕೋಪ

ನೈಸರ್ಗಿಕ ವಿಕೋಪ

ಶನಿ ಮತ್ತು ಮಂಗಳ ಗ್ರಹಗಳು ಒಟ್ಟಾಗುವುದರಿಂದ ನೈಸರ್ಗಿಕ ವಿಕೋಪಗಳು ಹೆಚ್ಚಾಗಲಿದೆ. ಸುನಾಮಿ, ಭೂಕಂಪ, ಅತಿವೃಷ್ಠಿ ಮುಂತಾದ ಅವಘಡಗಳು ಸಂಭವಿಸಲಿದೆ. ಭಾರತ ಸೇರಿದಂತೆ ಜಗತ್ತಿನ ಮೂರನೇ ಎರಡರಷ್ಟು ಭಾಗದಲ್ಲಿ ನೈಸರ್ಗಿಕ ವಿಕೋಪ ಉಂಟಾಗಲಿದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

68 ದಿನಗಳ ಗಂಡಾಂತರ

68 ದಿನಗಳ ಗಂಡಾಂತರ

ಗುರು ಚಾಂಡಾಲ ಯೋಗ ಈ ವರ್ಷ ಫೆಬ್ರವರಿ ತಿಂಗಳಿನಿಂದ ಆರಂಭವಾಗಿದ್ದರೂ, ಇದರ ಪರಿಣಾಮ ಏಪ್ರಿಲ್ 20ರಿಂದ ಭೀಕರವಾಗಲಿದೆ. ಅಲ್ಲಿಂದ ಜೂನ್ ತಿಂಗಳ 26ರ ವರೆಗಿನ ಅವಧಿಯಲ್ಲಿ ತೀವ್ರ ಸ್ವರೂಪ ಪಡೆಯಲಿದೆ ಎಂದು ಜೀನ್ಯೂಸ್ ತನ್ನ ಲೇಖನದಲ್ಲಿ ಹೇಳಿದೆ.

ವ್ಯಾಜ್ಯಗಳೂ ಹೆಚ್ಚಾಗಲಿವೆ

ವ್ಯಾಜ್ಯಗಳೂ ಹೆಚ್ಚಾಗಲಿವೆ

ಈ ಅವಧಿಯಲ್ಲಿ ನೈಸರ್ಗಿಕ ವಿಕೋಪದ ಜೊತೆಗೆ ವ್ಯಾಜ್ಯಗಳೂ ಹೆಚ್ಚಾಗಲಿವೆ. ಈ 68 ದಿನಗಳ ಅವಧಿ ಸಾವಿರ ವರ್ಷಗಳಲ್ಲೇ ಅತ್ಯಂತ ಅಶುಭಕರ ಅವಧಿ ಎಂದು ಜ್ಯೋತಿಷಿಗಳು ಹೇಳಿದ್ದಾರೆ.

ನೈಸರ್ಗಿಕ ಪ್ರಕೋಪ ಜಾಸ್ತಿ

ನೈಸರ್ಗಿಕ ಪ್ರಕೋಪ ಜಾಸ್ತಿ

ಮನ್ಮಥ ಮತ್ತು ದುರ್ಮುಖ ನಾಮ ಸಂವತ್ಸರದಲ್ಲೂ ನೈಸರ್ಗಿಕ ಪ್ರಕೋಪ ಹೆಚ್ಚಾಗಲಿದೆ. ಭೂಕಂಪ ಮತ್ತು ಜಲಪ್ರಳಯ ದೇಶದ ಪ್ರಮುಖ ಭಾಗದಲ್ಲಿ ಸಂಭವಿಸಲಿದೆ ಎಂದು ಕೋಡಿಮಠದ ಶ್ರೀಗಳು ಈ ವರ್ಷದ ಆದಿಯಲ್ಲಿ (ಮಕರ ಸಂಕ್ರಾತಿಯ ಸಂದರ್ಭದಲ್ಲಿ) ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Astrologers have predicted that the world is heading for an extremely inauspicious period which may witness natural calamities and strife. 68-day unfavorable period will start on April 20 (Wednesday) and last till June 26, 2016, Zee News report.
Please Wait while comments are loading...