ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂವರು ಕೇಂದ್ರ ಸಚಿವರ ಆಸ್ತಿಯಲ್ಲಿ ದಿಢೀರ್ ಏರಿಕೆ

|
Google Oneindia Kannada News

ನವದೆಹಲಿ, ಅ.25: ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿ ಐದು ತಿಂಗಳು ಕಳೆಯುವುದರೊಳಗೆ ರೈಲ್ವೆ ಸಚಿವ ಸದಾನಂದ ಗೌಡ ಸೇರಿ ಮೂವರು ಕೇಂದ್ರ ಸಚಿವರ ಆಸ್ತಿಯಲ್ಲಿ ಗಣನೀಯ ಹೆಚ್ಚಳವಾಗಿದೆ.

ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ 9.88 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದ ಸದಾನಂದ ಗೌಡರ ಆಸ್ತಿ ಈಗ 20.35 ಕೋಟಿ ರೂ.ಗೆ ಏರಿದೆ. ಉಳಿದಂತೆ ರಾಜ್ಯ ಖಾತೆ ಸಚಿವ ಪಿ.ರಾಧಾಕೃಷ್ಣನ್ ಆಸ್ತಿಯಲ್ಲಿ 2.98 ಕೋಟಿ ರೂ. ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಆಸ್ತಿಯಲ್ಲಿ 1.01 ಕೋಟಿ ರೂ. ಹೆಚ್ಚಳವಾಗಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.[ಸದಾನಂದ ಗೌಡ ಕುಟುಂಬದವರ ದೂರವಾಣಿ ಕದ್ದಾಲಿಕೆ]

sadanda gowda

ಆದರೆ ಕೇಂದ್ರದ 16 ಸಚಿವರು ಕಳೆದ ಐದು ತಿಂಗಳ ಅವಧಿಯಲ್ಲಿ ತಮ್ಮ ಆಸ್ತಿ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ ಎಂದು ನ್ಯಾಷನಲ್ ಇಲೆಕ್ಷನ್ ವಾಚ್ ಹೇಳಿದೆ.ಸುಷ್ಮಾ ಸ್ವರಾಜ್ ತಮ್ಮ ಆಸ್ತಿಯಲ್ಲಿ 3.89 ಕೋಟಿ ರೂ. ಕಡಿಮೆಯಾಗಿದೆ ಎಂದು ಹೇಳಿದ್ದಾರೆ

ಲೋಕಸಭಾ ಚುನಾವಣೆ ಮುನ್ನ ಇದ್ದ ಆಸ್ತಿಗೂ, ಈಗ ಐದು ತಿಂಗಳ ನಂತರ ಇರುವ ಆಸ್ತಿಗೂ ಅಜಗಜಾಂತರ ವ್ಯತ್ಯಾಸ ಕಂಡುಬಂದಿರುವುದು ಸತ್ಯ. 114 ಕೋಟಿ ರೂ. ಆಸ್ತಿ ಹೊಂದಿರುವ ಅರುಣ್ ಜೇಟ್ಲಿ ಶ್ರೀಮಂತರ ಕೇಂದ್ರ ಸಚಿವರ ಪೈಕಿ ಅತಿ ಹೆಚ್ಚು ಆಸ್ತಿ ಹೊಂದಿದವರಾಗಿದ್ದಾರೆ.[ಅರುಣ್ ಜೇಟ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ಸಿಗರು]

ಆದರೆ ಈ ಆಸ್ತಿಯನ್ನು ಲೋಕಸಭಾ ಚುನಾವಣೆ ಮುನ್ನವೇ ಸಾಲ ಮಾಡಿ ಖರೀದಿಸಿದ್ದು ಅದಕ್ಕೆಲ್ಲ ಸೂಕ್ತ ದಾಖಲೆಗಳಿವೆ ಎಂದು ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.

English summary
The average assets of three Union Ministers — DV Sadananda Gowda, P Radhakrishnan and Arun Jaitley — have shown an increase in the past five months, according to an analysis of their recent declarations made to the Prime Minister’s Office (PMO).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X