Five states Election: ಐದು ರಾಜ್ಯಗಳ ವಿಧಾನಸಭಾ ಚುನಾವಣೆ: ಸಮೀಕ್ಷೆಗಳಿಗೆ ನಿರ್ಬಂಧ
ದೆಹಲಿ ನವೆಂಬರ್ 1: ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯ ಮತದಾನ ನವೆಂಬರ್ 7ರಿಂದ ಶುರುವಾಗಲಿದೆ. ಹೀಗಾಗಿ ನವೆಂಬರ್ 7 ರ ಬೆಳಿಗ್ಗೆ 7.00 ಮತ್ತು ನವೆಂಬರ್ 30 ರ ಸಂಜೆ 6.30 ರಿಂದ ನಿರ್ಗಮನ ಸಮೀಕ್ಷೆಗಳ ಪ್ರಕಟಣೆ ಮತ್ತು ಪ್ರಚಾರವನ್ನು ನಿಷೇಧಿಸಿ ಚುನಾವಣಾ ಆಯೋಗ ಮಂಗಳವಾರ ಅಧಿಸೂಚನೆ ಹೊರಡಿಸಿದೆ.
ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಿಜೋರಾಂ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ನವೆಂಬರ್ 7, ನವೆಂಬರ್ 17, ನವೆಂಬರ್ 25 ಮತ್ತು ನವೆಂಬರ್ 30 ರಂದು ಮತದಾನ ನಡೆಯಲಿದೆ.

ಹೀಗಾಗಿ ಸಮೀಕ್ಷೆಗಳಿಗೆ ನಿರ್ಬಂಧ ಹೇರಲಾಗಿದೆ. ಚುನಾವಣಾ ಕಾನೂನಿನ ನಿಬಂಧನೆಗಳನ್ನು ಉಲ್ಲೇಖಿಸಿ, "ಈ ಸೆಕ್ಷನ್‌ನ ನಿಬಂಧನೆಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು" ಎಂದು ಚುನಾವಣಾ ಆಯೋಗ ಹೇಳಿದೆ.
ಹೀಗಾಗಿ ನವೆಂಬರ್ 7 ರಂದು ಬೆಳಿಗ್ಗೆ 7:00 (ಮಂಗಳವಾರ) ಮತ್ತು ನವೆಂಬರ್ 30ರಂದು (ಗುರುವಾರ) ಸಂಜೆ 6.30 ರ ನಡುವಿನ ಅವಧಿಯಲ್ಲಿ ಯಾವುದೇ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮ ಅಥವಾ ಪ್ರಸಾರದ ಮೂಲಕ ನಿರ್ಗಮನ ಸಮೀಕ್ಷೆಯನ್ನು ನಡೆಸುವ ಮತ್ತು ಪ್ರಕಟಿಸುವ ಅಥವಾ ಪ್ರಚಾರ ಮಾಡುವಂತಿಲ್ಲ. ಬೇರೆ ಯಾವುದೇ ರೀತಿಯಲ್ಲಿ ಯಾವುದೇ ಎಕ್ಸಿಟ್ ಪೋಲ್‌ನ ಫಲಿತಾಂಶವನ್ನು ಪ್ರಕಟಿಸುವಂತಿಲ್ಲ.
ಐದು ರಾಜ್ಯಗಳಲ್ಲಿ ಸುಮಾರು 60 ಲಕ್ಷ ಜನರು (18-19 ವರ್ಷದೊಳಗಿನವರು) ಮೊದಲ ಬಾರಿಗೆ ಮತದಾನ ನಡೆಸಲಿದ್ದಾರೆ. 15.39 ಯುವ ಮತದಾರರಿಗೆ ಅವಕಾಶ ಸಿಗಲಿದೆ. ಯುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ 2900 ಮತಗಟ್ಟೆಗಳಲ್ಲಿ ಯುವಕರು ನಿರ್ವಹಣೆ ನಡೆಸಲಿದ್ದಾರೆ ರಾಜೀವ್ ಕುಮಾರ್ ತಿಳಿಸಿದರು.

ಮಿಸೋರಾಂನಲ್ಲಿ ಒಂದೇ ಹಂತದಲ್ಲಿ ನವೆಂಬರ್ 7ರಂದು ಮತದಾನ ನಡೆದರೆ, ಛತ್ತೀಸ್‌ಗಡದಲ್ಲಿ ಎರಡು ಹಂತಗಳಲ್ಲಿ ಮತದಾನ ನಿಗದಿಯಾಗಿದೆ. ನವೆಂಬರ್ 7 ಮತ್ತು ನವೆಂಬರ್ 17ರಂದು ಚುನಾವಣೆ ನಡೆಯಲಿದೆ. ಉಳಿದಂತೆ, ಮಧ್ಯ ಪ್ರದೇಶದಲ್ಲಿ ನವೆಂಬರ್ 17, ರಾಜಸ್ಥಾನದಲ್ಲಿ ನವೆಂಬರ್ 23, ತೆಲಂಗಾಣದಲ್ಲಿ ನವೆಂಬರ್ 30ರಂದು ಮತದಾನ ನಿಗದಿಯಾಗಿದೆ.
ಐದೂ ರಾಜ್ಯಗಳ 679 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1.77 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. 17,734 ಮಾದರಿ ಮತಗಟ್ಟೆ ಕೇಂದ್ರಗಳು ಇರಲಿವೆ. 621 ಮತಗಟ್ಟೆಗಳನ್ನು ಅಂಗವಿಕಲ ಸಿಬ್ಬಂದಿಯು ನಿರ್ವಹಿಸಲಿದ್ದಾರೆ. 8,192 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಲಿದ್ದಾರೆ.
ರಾಜ್ಯ ಮತ್ತು ಮತದಾರರ ಸಂಖ್ಯೆ
* ಮಿಜೋರಾಂ - 8.52 ಲಕ್ಷ
* ಛತ್ತೀಸ್‌ಗಢ- 2.03 ಕೋಟಿ
* ಮಧ್ಯ ಪ್ರದೇಶ- 5.6 ಕೋಟಿ
* ರಾಜಸ್ಥಾನ- 5.25 ಕೋಟಿ
* ತೆಲಂಗಾಣ- 3.17 ಕೋಟಿ












Click it and Unblock the Notifications