ಜೈಪುರ, ಭೋಪಾಲ್ ನಲ್ಲಿ ಕೇಸರಿ ರಂಗು ಚೆಲ್ಲಿದೆ
ಜೈಪುರ, ಡಿ.8: ಭಾರಿ ಕುತೂಹಲ ಕೆರಳಿಸಿರುವ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಡಿ.8 ರಂದು ಹೊರ ಬೀಳಲಿದ್ದು, ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನಿರ್ಧರಿಸಲಿದೆ. ಮುಂಬರುವ ಲೋಕಸಭೆಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ ಎನ್ನಲಾಗಿದೆ. ಈ ನಡುವೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಭರ್ಜರಿ ಸಂಭ್ರಮಾಚರಣೆ ನಡೆದಿದೆ.
ನಾಲ್ಕು ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ ನರೇಂದ್ರ ಮೋದಿ ಮತ್ತು ಸುಮಾರು 20 ಸಮಾವೇಶಗಳಿಗೆ ಸೀಮಿತವಾದ ರಾಹುಲ್ ಗಾಂಧಿ ಅವರು ಮತದಾರ ಪ್ರಭುವಿಗೆ ಏನು ಮೋಡಿ ಮಾಡಿದ್ದಾರೆ ಎಂಬುದರ ಉತ್ತರ ಇನ್ನೇನು ಸಿಗಲಿದೆ.
ದೆಹಲಿಯಲ್ಲಿ ಶೇ 65, ರಾಜಸ್ಥಾನದಲ್ಲಿ ಶೇ.74, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ತಲಾ ಶೇ.70ರಷ್ಟು ಮತದಾನ ನಡೆದಿತ್ತು. ಭಾನುವಾರ ಬೆಳಗ್ಗಿನಿಂದಲೇ ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ಸಾಧಿಸಿತ್ತು.
ಮಧ್ಯಪ್ರದೇಶದಲ್ಲಿ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಭಾರತೀಯ ಜನತಾ ಪಕ್ಷ ಮಧ್ಯಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದ್ದಾರೆ. ಅತ್ತ ಜೈಪುರದಲ್ಲಿ ವಸುಂಧರಾ ರಾಜೇ ಸಿಂಧಿಯಾ ಅವರು ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಮಗ್ರ ಫಲಿತಾಂಶ ಹೊರ ಬೀಳುವುದಕ್ಕೂ ಮುನ್ನ ಬಿಜೆಪಿ ಸಂಭ್ರಮಾಚರಣೆ, ಮೋದಿ ಹವೆ ಎಲ್ಲೆಡೆ ಬೀಸುತ್ತಿದೆ. ಕೆಲ ಚಿತ್ರಗಳು ಇಲ್ಲಿವೆ ನೋಡಿ...

ಮೋದಿ ಮೋಡಿ ಕಾರಣ
ನಮ್ಮ ಗೆಲುವಿಗೆ, ಜನತೆ ಬಿಜೆಪಿ ಪರ ವಾಲುವುದಕ್ಕೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರೇ ನೇರ ಕಾರಣ ಎಂದ ವಸುಂಧರಾ ರಾಜೇ ಸಿಂಧಿಯಾ

ಜೈಪುರದಲ್ಲಿ
ಟ್ರೆಂಡಿಂಗ್ ನಲ್ಲಿ ಪಕ್ಷದ ಗೆಲುವು ಖಚಿತವಾಗುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದ ಬಿಜೆಪಿ ಕಾರ್ಯಕರ್ತರು

ಜನ ನಾಯಕಿ ರಾಜೇ
ಬಿಕಾನೇರ್ ನಲ್ಲಿ ರಾಜಸ್ಥಾನ ಬಿಜೆಪಿ ಅಧ್ಯಕ್ಷೆ ವಸುಂಧರಾ ರಾಜೇ ಜನ ಸಂಪರ್ಕ ಸಮಾವೇಶ ಸಂದರ್ಭದಲ್ಲಿ

ಪಟಾಕಿ ಸದ್ದು
ಟ್ರೆಂಡಿಂಗ್ ನಲ್ಲಿ ಪಕ್ಷದ ಗೆಲುವು ಖಚಿತವಾಗುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದ ರಾಜಸ್ಥಾನದ ಬಿಜೆಪಿ ಕಾರ್ಯಕರ್ತರು

ಜೈಪುರದಲ್ಲಿ
ಟ್ರೆಂಡಿಂಗ್ ನಲ್ಲಿ ಪಕ್ಷದ ಗೆಲುವು ಖಚಿತವಾಗುತ್ತಿದ್ದಂತೆ ಸಂಭ್ರಮಾಚರಣೆಯಲ್ಲಿ ತೊಡಗಿದ ಜೈಪುರದ ಬಿಜೆಪಿ ಕಾರ್ಯಕರ್ತರು

ರಂಗು ರಂಗು
ಭೋಪಾಲ್ ಹಾಗೂ ಜೈಪುರದಲ್ಲಿ ಎಲ್ಲೆಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ರಂಗು ಚೆಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆ ಮಾಡಲಾಗಿದೆ

ಜನ ನಾಯಕಿ ರಾಜೇ
ಬಿಜೆಪಿ ಸಂಭ್ರಮಾಚರಣೆ

ಜನ ನಾಯಕಿ ರಾಜೇ
ಬಿಜೆಪಿ ಸಂಭ್ರಮಾಚರಣೆ

ಸಂಭ್ರಮಾಚರಣೆ
ಬಿಜೆಪಿ ಸಂಭ್ರಮಾಚರಣೆ

ಸಂಭ್ರಮಾಚರಣೆ
ಬಿಜೆಪಿ ಸಂಭ್ರಮಾಚರಣೆ

ಮಧ್ಯಪ್ರದೇಶದಲ್ಲಿ
ಭೋಪಾಲ್ ನಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಭಿನಂದಿಸಿ ಅಪ್ಪಿಕೊಂಡ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್

ದೆಹಲಿಯಲ್ಲಿ ಸಂಭ್ರಮ
ದೆಹಲಿ ಬಿಜೆಪಿ ಕಚೇರಿ ಎದುರು ಸಾಂಪ್ರದಾಯಿಕ ನೃತ್ಯದ ಮೂಲಕ ಅಸೆಂಬ್ಲಿ ಚುನಾವಣೆ ವಿಜಯೋತ್ಸವ ಆಚರಿಸಲಾಗಿದೆ.

ದೆಹಲಿಯಲ್ಲಿ ಸಂಭ್ರಮ
ಬಿಜೆಪಿ ಸಂಭ್ರಮಾಚರಣೆ

ದೆಹಲಿಯಲ್ಲಿ ಸಂಭ್ರಮ
ಬಿಜೆಪಿ ಸಂಭ್ರಮಾಚರಣೆ












Click it and Unblock the Notifications