Get Updates
Get notified of breaking news, exclusive insights, and must-see stories!

ನಾಲ್ಕು ರಾಜ್ಯಗಳಲ್ಲಿ ಸೋತ-ಗೆದ್ದ ಪ್ರಮುಖರು!

ನವದೆಹಲಿ, ಡಿ. 9 : ದೆಹಲಿಯಲ್ಲಿ ಸಿಎಂಗೆ ಸೋಲುಣಿಸಿದ ಕೇಜ್ರಿವಾಲ್, ರಾಜಸ್ಥಾನದಲ್ಲಿ ವಸುಂಧರೆ ರಾಜೇಗೆ ಗೆಲುವು, ಗೆಹ್ಲೋಟ್ ಸಂಪುಟದ 16 ಸಚಿವರಿಗೆ ಸೋಲಿನ ರುಚಿ, ಚಿದಂಬರಂಗೆ ಶೂ ಎಸೆದಿದ್ದವನಿಗೆ ಒಲಿದು ಬಂದ ವಿಜಯಲಕ್ಷ್ಮೀ, ಛತ್ತೀಸ್ ಗಢ್ ನಲ್ಲಿ ತಿಣುಕಾಡಿ ಗೆದ್ದ ರಮಣ್‌ ಸಿಂಗ್‌ ಇವು ಭಾನುವಾರ ಪ್ರಕಟಗೊಂಡ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಹೈಲೈಟ್ಸ್.

ಮುಂಬರುವ ಲೋಕಸಭೆ ಚುನಾವಣೆಗೆ ಸೆಮಿ ಫೈನಲ್ ಎಂದೇ ಬಣ್ಣಿಸಲಾಗುತ್ತಿರುವ ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟಗೊಂಡಿದ್ದು, ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ 15 ವರ್ಷಗಳ ಕಾಂಗ್ರೆಸ್ ಆಳ್ವಿಕೆಯನ್ನಯ ಗುಡಿಸಿ ಹಾಕುವಲ್ಲಿ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ.

ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಘಟಾನುಘಟಿ ನಾಯಕರು ಸೋಲಿನ ರುಚಿ ಕಂಡಿದ್ದಾರೆ. ಮೂರು ಬಾರಿ ದೆಹಲಿ ಗದ್ದುಗೆ ಏರಿದ್ದ ಶೀಲಾ ದೀಕ್ಷಿತ್ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಪತಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಶೂ ಎಸೆದಿದ್ದ ಆಮ್ ಆದ್ಮಿ ಅಭ್ಯರ್ಥಿ ಜರ್ನೈಲ್ ಸಿಂಗ್ ಗೆ ಗೆಲುವು ಸಾಧಿಸಿದ್ದಾರೆ.

ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ. ಛತ್ತೀಸ್ ಗಢ್ ದಲ್ಲಿ ಸಿಎಂ ರಮಣ್ ಸಿಂಗ್ ಗೆಲುವು ಸಾಧಿಸಿದ್ದರೆ, ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿ ಹರ್ಷವರ್ಧನ್ ಅವರಿಗೂ ಗೆಲುವು ದೊರಕಿದೆ. ಮಧ್ಯಪ್ರದೇಶದಲ್ಲಿ 10, ಛತ್ತೀಸ್ ಗಢ್ ದಲ್ಲಿ 6, ರಾಜಸ್ಥಾನದಲ್ಲಿ 19 ಸಚಿವರಿಗೆ ಸೋಲಿನ ಬಿಸಿ ತಟ್ಟಿದೆ. ನಾಲ್ಕು ರಾಜ್ಯಗಳಲ್ಲಿ ಸೋತು-ಗೆದ್ದ ಪ್ರಮುಖರ ಚಿತ್ರಣವಿಲ್ಲಿದೆ.

ಶೀಲಾಗೆ ನೀರು ಕುಡಿಸಿದ ಕೇಜ್ರಿ

ಶೀಲಾಗೆ ನೀರು ಕುಡಿಸಿದ ಕೇಜ್ರಿ

15 ವರ್ಷ ದೆಹಲಿಯನ್ನು ಆಳಿದ ಶೀಲಾ ದೀಕ್ಷಿತ್ ಅವರಿಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅರವಿಂದ್ ಕೇಜ್ರಿವಾಲ್ ಸೋಲಿನ ರುಚಿ ತೋರಿಸಿದ್ದಾರೆ. ನವದೆಹಲಿ ಕ್ಷೇತ್ರದಲ್ಲಿ 39,883ಕ್ಕೂ ಅಧಿಕ ಮತಗಳ ಅಂತರದಿಂದ ಶೀಲಾ ದೀಕ್ಷಿತ್ ಸೋಲು ಅನುಭವಿಸಿದ್ದಾರೆ. ಕೆಲವು ದಿನಗಳ ಹಿಂದೆ ರಾಜಕೀಯಕ್ಕೆ ಬಂದ ವ್ಯಕ್ತಿಯ ವಿರುದ್ಧ ಶೀಲಾ ಹೀನಾಯ ಸೋಲು ಅನುಭವಿಸಿದ್ದಾರೆ.

ಕೈ, ಕಮಲಕ್ಕೆ ಕೇಜ್ರಿ ಪಾಠ

ಕೈ, ಕಮಲಕ್ಕೆ ಕೇಜ್ರಿ ಪಾಠ

ನವದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪಾಠ ಕಲಿಸಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ನವದೆಹಲಿ ವಿಧಾನಸಭೆ ಕ್ಷೇತ್ರದಲ್ಲಿ 39,883 ಮತಗಳಿಂದ ಸಿಎಂ ಶೀಲಾ ದೀಕ್ಷಿತ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಲವಾರು ಕಾಂಗ್ರೆಸ್ ಸಚಿವರಿಗೂ ತಮ್ಮ ಪಕ್ಷದ ಅಭ್ಯರ್ಥಿಗಳ ಮೂಲಕ ಸೋಲುಣಿಸಿದ್ದಾರೆ.

ಮತ ಬೇಟೆಯಲ್ಲೂ ಶಿವರಾಜ

ಮತ ಬೇಟೆಯಲ್ಲೂ ಶಿವರಾಜ

ಮಧ್ಯಪ್ರದೇಶದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪಕ್ಷವನ್ನು ಮೂರನೇ ಬಾರಿ ಅಧಿಕಾರಕ್ಕೆ ತಂದಿದ್ದು ಮಾತ್ರವಲ್ಲ ತಾವು ಸಹ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಬುಧ್ನಿ ಮತ್ತು ವಿಧಿಶಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು, ಬುಧ್ನಿ ಕ್ಷೇತ್ರದಲ್ಲಿ 1,28,730 ಮತ್ತು ವಿಧಿಶಾ ಕ್ಷೇತ್ರದಲ್ಲಿ 73,783 ಮತಗಳನ್ನು ಪಡೆದು ಪ್ರತಿಸ್ಪರ್ಧಿಗೆ ಸೋಲಿನ ಬಿಸಿ ಮುಟ್ಟಿಸಿದ್ದಾರೆ.

ಬೂಟು ತಂದಿತು ವಿಜಯ

ಬೂಟು ತಂದಿತು ವಿಜಯ

ಕೇಂದ್ರ ಸಚಿವ ಪಿ.ಚಿದಂಬರಂ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಶೂ ಎಸೆದಿದ್ದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜರ್ನೈಲ್ ಸಿಂಗ್ ಜಯಗಳಿಸಿದ್ದಾರೆ. ತಿಲಕ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಗ್ ಗೆ ವಿಜಯಲಕ್ಷ್ಮೀ ಒಲಿದಿದೆ. 1984ರ ಸಿಖ್ ವಿರೋಧಿ ದಂಗೆಯ ಆರೋಪಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಚಿದಂಬರಂ ಮೇಲೆ ಸಿಂಗ್ ಶೂ ಎಸೆದು ಭಾರೀ ಸುದ್ದಿ ಮಾಡಿದ್ದರು.

ಬಂಡಾಯ ನಾಯಕಿಗೆ ಗೆಲುವಿನ ಸಿಂಚನ

ಬಂಡಾಯ ನಾಯಕಿಗೆ ಗೆಲುವಿನ ಸಿಂಚನ

ಒಂದು ಕಾಲದಲ್ಲಿ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ ರಾಜಸ್ಥಾನದ ಬಿಜೆಪಿ ನಾಯಕಿ, ಮಾಜಿ ಸಿಎಂ ವಸುಂಧರಾ ರಾಜೇ ಅವರಿಗೆ ಗೆಲುವಿನ ಸಿಂಚನವಾಗಿದೆ ಮತ್ತು ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಹೊರಟಿದೆ. ಜಹಲಾರ್ ಪಟ್ನಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜೇ 1,14,384 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಗೆಲುವಿನ ನೆಗೆ ನಕ್ಕ ಡಾಕ್ಟರ್

ಗೆಲುವಿನ ನೆಗೆ ನಕ್ಕ ಡಾಕ್ಟರ್

ನವದೆಹಲಿಯ ಬಿಜೆಪಿ ಸಿಎಂ ಅಭ್ಯರ್ಥಿ ಡಾ.ಹರ್ಷವರ್ಧನ್ ಗೆಲುವಿನ ನೆಗೆ ಬೀರಿದ್ದಾರೆ. ಕೃಷ್ಣಾ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, 66,195 ಮತಗಳನ್ನು ಪಡೆದಿದ್ದಾರೆ.

ದಿಗ್ವಿಜಯ್ ಪುತ್ರನಿಗೆ ಗೆಲುವು

ದಿಗ್ವಿಜಯ್ ಪುತ್ರನಿಗೆ ಗೆಲುವು

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಪುತ್ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್ ರಾಘೋಗಢ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಬಿಜೆಪಿ ಅಭ್ಯರ್ಥಿ ಜ್ಞಾನದೇವ ಅಹುಜಾ ಅವರಿಗೆ ಜೈವರ್ಧನ್ ಸೋಲುಣಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+