Assembly Election Result 2023: ಮೂರೂ ರಾಜ್ಯಗಳಲ್ಲಿ ಆಪ್ ಸಾಧನೆ ಠುಸ್
ಈ ಪಕ್ಷಕ್ಕೆ ಇದೇ ವರ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಸಿಕ್ಕಿತ್ತು. ಕೆಲವು ವಿಧಾನಸಭೆಯಲ್ಲಿ ಮೋಡಿ ಮಾಡುವ ಆಸೆಯನ್ನು ಹೊಂದಿದ್ದ ಪಕ್ಷಕ್ಕೆ ಮತದಾರ ಪೆಟ್ಟು ನೀಡಿದ್ದಾನೆ. ಭಾನುವಾರ ಪ್ರಕಟಗೊಂಡ ವಿಧಾನಸಭೆಯ ಚುನಾವಣೆಯಲ್ಲಿ ಆಪ್ ಸಾಧನೆ ಠುಸ್ ಆಗಿದೆ. ಆಪ್ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹಲವಾರು ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದರು. ಇದರ ಹೊರತಾಗಿಯೂ ಎಎಪಿ ಈ ಚುನಾವಣೆಗಳಲ್ಲಿ ಸೋಲು ಕಂಡಿದೆ.
ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಮತದಾರ ಒಂದೇ ಪಕ್ಷದ ಕೈ ಹಿಡಿದಿದ್ದಾನೆ. ಮಧ್ಯಪ್ರದೇಶದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಹತ್ತಿರವಾಗಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಸರ್ಕಾರ ರಚಿಸಬಹುದು.

ಈ ವರ್ಷ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದ ಆಮ್ ಆದ್ಮಿ ಪಕ್ಷವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಿತು. ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹಲವಾರು ರ್ಯಾಲಿಗಳು ಮತ್ತು ರೋಡ್ ಶೋಗಳನ್ನು ನಡೆಸಿದ್ದರು. ಇದರ ಹೊರತಾಗಿಯೂ ಎಎಪಿ ಈ ಚುನಾವಣೆಗಳಲ್ಲಿ ಸೋಲನ್ನು ಎದುರಿಸಬೇಕಾಯಿತು.
ಚುನಾವಣಾ ಆಯೋಗದ ಈವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, ಆಮ್ ಆದ್ಮಿ ಪಕ್ಷವು ಚುನಾವಣೆಯಲ್ಲಿ ಯಾವುದೇ ವಿಶೇಷ ಸಾಧನೆ ಮಾಡಿಲ್ಲ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಸಿಎಂ ಅರವಿಂದ್ ಕೇಜ್ರಿವಾಲ್ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಪಕ್ಷದ ಮತ ಗಳಿಕೆಯನ್ನು ಹೆಚ್ಚಿಸುವತ್ತ ಚಿತ್ತ ನೆಟ್ಟಿದ್ದರು. ಆದರೆ ಅವರ ಆಸೆ ಕೈ ಕೊಟ್ಟಿದೆ.
ಈ ಚುನಾವಣೆಯು ಆಪ್ ಪಕ್ಷ ವಿಸ್ತರಣೆಗೆ ಪೆಟ್ಟು ನೀಡಿದೆ. ಈ ಮೂರು ರಾಜ್ಯಗಳ ಚುನಾವಣೆಗಳು ಆಮ್ ಆದ್ಮಿ ಪಕ್ಷಕ್ಕೆ ಬಹಳ ಮಹತ್ವದ್ದಾಗಿದ್ದವು. ಆದರೆ ಆಪ್ ಈ ಪ್ರಯತ್ನವನ್ನು ಬಳಸಿಕೊಳ್ಳುವಲ್ಲಿ ಎಡವಿದೆ. ಇತ್ತೀಚಿಗಿನ ಶೇಕಡಾ ವಾರು ಮತಗಳನ್ನು ನೋಡಿದರೆ, ಛತ್ತೀಸ್‌ಗಢದಲ್ಲಿ ಆಮ್ ಆದ್ಮಿ ಪಕ್ಷ ಶೇ.0.94 ಮತಗಳನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಪಕ್ಷವು 0.44 ಮತಗಳನ್ನು ಪಡೆದಿದೆ. ಇದಲ್ಲದೇ ಎಎಪಿ ರಾಜಸ್ಥಾನದಲ್ಲಿ ಶೇ.0.38 ಮತಗಳನ್ನು ಪಡೆದಿದೆ.












Click it and Unblock the Notifications