ಅಸಾರಾಮ್ ಪ್ರಕರಣದ ಪ್ರಮುಖ ಸಾಕ್ಷಿಗೆ ಕೊಲೆ ಬೆದರಿಕೆ

ಪಾಣಿಪತ್, ಏಪ್ರಿಲ್ 25: ಬಹುನಿರೀಕ್ಷಿತ ಅಸಾರಾಮ್ ಬಾಪು ಪ್ರಕರಣದ ತೀರ್ಪು ಇಂದು ಪ್ರಕಟವಾಗಿದೆ. ಅಸಾರಾಮ್ ನನ್ನು ದೋಷಿ ಎಂದು ಜೋಧಪುರ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಈ ಪ್ರಕರಣದ ಪ್ರಮುಖ ಸಾಕ್ಷಿ ಮಹೇಂದ್ರ ಚಾವ್ಲಾ ಎಂಬುವವರಿಗೆ ನಿರಂತರವಾಗಿ ಕೊಲೆ ಬೆದರಿಕೆ ಶುರುವಾಗಿದೆ!

ಹಾಗೆಂದು ಸ್ವತಃ ಚಾವ್ಲಾ ಅವರೇ ಆತಂಕ ವ್ಯಕ್ತಪಡಿಸಿದ್ದು, ತಮಗೆ ಹೆಚ್ಚಿನ ಭದ್ರತೆ ನೀಡುವಂತೆ ಕೋರಿದ್ದಾರೆ. 'ನನಗೆ ಈಗಾಗಲೇ ಭದ್ರತೆ ಕಲ್ಪಿಸಿದ್ದರೂ, ಇತರ ಸಾಕ್ಷಿದಾರರಂತೆ ನನಗೂ ಕೊಲೆ ಬೆದರಿಕೆ ಇದೆ. ಆದ್ದರಿಂದ ನಾನು ಹೆಚ್ಚಿನ ಭದ್ರತೆ ಕೋರುತ್ತೇನೆ' ಎಂದು ಅವರು ಹೇಳಿದ್ದಾರೆ.

"ನನಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇತ್ತು. ಇಂಥ ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕೆಂದು ನಾನು ಕೋರುತ್ತೇನೆ" ಎಂದು ಅವರು ಮನವಿ ಮಾಡಿದ್ದಾರೆ.

Asaram Case Verdict: My life under threat, says key witness

2013 ರಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಾರಾಮ್ ಬಾಪುನನ್ನು ರಾಜಸ್ಥಾನದ ಜೋಧಪುರ ಎಸ್ ಸಿ ಎಸ್ ಟಿ ನ್ಯಾಯಾಲಯ ದೋಷಿ ಎಂದು ಇಂದು(ಏ.25) ಬೆಳಿಗ್ಗೆ ತೀರ್ಪು ನೀಡಿತ್ತು. ಶಿಕ್ಷೆಯ ಪ್ರಮಾಣವನ್ನು ಇನ್ನೂ ಘೋಷಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+