Monsoon Enter Kerala: ಕೇರಳ ಪ್ರವೇಶಿಸಿದ ನೈಋತ್ಯ ಮಾನ್ಸೂನ್: ಕರ್ನಾಟಕ, ಈಶಾನ್ಯ ರಾಜ್ಯಗಳಿಗೆ ವಿಸ್ತರಣೆ ಯಾವಾಗ?
ಬೆಂಗಳೂರು, ಮೇ 30: ವರ್ಷದ್ಲಲಿ ಬಹುಪಾಲು ಮಳೆಯನ್ನು ಸುರಿಯುವ 'ನೈರುತ್ಯ ಮುಂಗಾರು ಮಾರುತ'ಗಳು () ಇಂದು ಗುರುವಾರ (ಮೇ 30) ಭಾರತಕ್ಕೆ ಲಗ್ಗೆ ಇಡುತ್ತಿವೆ. ನಿರೀಕ್ಷೆಗೂ ಮೊದಲೇ ಭಾರತದ ದಕ್ಷಿಣ ರಾಜ್ಯವಾದ ಕೇರಳವನ್ನು ಪ್ರವೇಶಿಸಲಿವೆ. ಮುಂಗಾರು ಮಳೆ ದೇಶದ ಆರ್ಥಿಕ ಮತ್ತು ಕೃಷಿ ಚಟುವಟಿಕೆಯ ಶಕ್ತಿಯಾಗಿದೆ.
ಸಾಮಾನ್ಯವಾಗಿ ಮುಂಗಾರು ಮಳೆ ಜೂನ್ ಮೊದಲ ವಾರ ದೇಶ ಪ್ರವೇಶಿಸಿ ನಂತರ ಒಂದರಿಂದ ಎರಡು ವಾರದಲ್ಲಿ ಇಡಿ ದೇಶವನ್ನು ಆವರಿಸುತ್ತದೆ. ಆದರೆ ಈ ಭಾರಿ ಮೇ ತಿಂಗಳ ಕೊನೆಯಲ್ಲಿ ಭಾರತ ಪ್ರವೇಶಿಸುತ್ತಿರುವ ಬಗ್ಗೆ ಹವಾಮಾನ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಮುಂಗಾರು ಆರಂಭದಲ್ಲೇ ಆರ್ಭಟ?
ಮುಂದಿನ 24 ಗಂಟೆಗಳಲ್ಲಿ ಕೇರಳ ಮೂಲಕ ಮುಂಗಾರು ಮಳೆ ಭಾರತದ ಪ್ರವೇಶಿಸಿರಲಿದೆ. ಈಗಾಗಲೇ ಕೇರಳ ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ. ಭಾರೀ ಮಳೆಗೆ ಸುಮಾರು 20 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿ ಆಗಿದೆ. ಇನ್ನೂ ಈ ಮುಂಗಾರು ಆರಂಭದ ವೇಳೆ ಮತ್ತೆ ಆರ್ಭಟಿಸುವ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುವ ಸಾಧ್ಯತೆ ಇವೆ.
ದೇಶದ ದಕ್ಷಿಣದ ರಾಜ್ಯಗಳ ಮೂಲಕ ಉತ್ತರದತ್ತ ಮುಂಗಾರು ಮಳೆಯ ಮಾರುತುಗಳ ಸಾಗಲಿವೆ. ಇದರಿಂದ ಶಾಖದ ಅಲೆಗೆ ಸಿಲುಕಿರುವ ಅಸ್ಸಾಂ, ದೆಹಲಿ, ಬಿಹಾರದಂತಹ ಕೆಲವು ರಾಜ್ಯಗಳಿಗೆ ಜೂನ್ ಮೊದಲ ವಾರದ ಮುಕ್ತಿ ಸಿಗುವ ಸಾಧ್ಯತೆ ಇದೆ.

ವಾಡಿಕೆಗಿಂತ ಹೆಚ್ಚು ಮಳೆ ಸಂಭವ
ಒಂದು ತಿಂಗಳ ಹಿಂದೆ ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕರು ಹೇಳಿದ್ದರು. ಸದ್ಯದ ಮಾಹಿತಿ ಪ್ರಕಾರ, ಈ ವರ್ಷ ದಕ್ಷಿಣ ರಾಜ್ಯಗಳಿಗೆ ಮಾತ್ರ ಹೆಚ್ಚು ಮಳೆ ಆಗುವ ಮುನ್ಸೂಚನೆ ಇದೆ ಲಭಿಸಿದೆ. ಉತ್ತರದ ರಾಜ್ಯಗಳಿಗೆ ವಾಡಿಕೆಯಷ್ಟು ಮಳೆ ಆಗಬಹುದು ಎನ್ನಲಾಗಿದೆ.
ಜೂನ್ ನಿಂದ ಸೆಪ್ಟಂಬರ್ ವರೆಗಿನ ಮುಂಗಾರು ಋತುವಿನಲ್ಲಿ ಬರುವ ಮಳೆಯು ದೇಶದ ಆರ್ಥಿಕತೆಯನ್ನು ನಿರ್ಧರಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಚಂಡಮಾರುತದಿಂದಾಗಿ ಮುಂಗಾರು ಬೇಗ ಪ್ರವೇಶಿಸುತ್ತಿದ್ದು, ಪೂರ್ವ ಮುಂಗಾರು ಸಹ ಉತ್ತಮ ಮಳೆ ದಾಖಲಿಸಿದೆ.
ಹೀಗಾಗಿ ಈ ಬಾರಿ ಕೃಷಿ ಚುವಟಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ರೈತರು ಬಿತ್ತನೆಗೆ ಸಜ್ಜಾಗಿದ್ದು, ವ್ಯವಸಾಯದ ಕಾರ್ಯಗಳು ಗರಿಗೆದರಿವೆ. ಪ್ರಸಕ್ತ ಮುಂಗಾರು ರೈತರಿಗೆ ಸಿಹಿ ಸುದ್ದಿ ನೀಡಿದೆ.
As per IMD, South West Monsoon has official
ಕರ್ನಾಟಕದಲ್ಲಿ ಹೇಗಿರಲಿದೆ ಮುಂಗಾರು?ತಮಿಳುನಾಡಿಗೆ ಹತ್ತಿರ ವಿರುದ್ಧ ಕರ್ನಾಟಕದ ದಕ್ಷಿಣ ಒಳನಾಡು ಭಾಗದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ, ಮೈಸೂರು ಸೇರಿದಂತೆ ಮಲೆನಾಡಿನ ಒಂದಷ್ಟು ಭಾಗಗಳು ಹಾಗೂ ಕರಾವಳಿ ಜಿಲ್ಲೆಗಳಿಗೆ ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ.
ಉತ್ತರ ಒಳನಾಡು ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ವಾಡಿಕೆಷ್ಟು ಅಗತ್ಯ ಮಳೆ ಆಗಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ. ಒಟ್ಟಾರೆ ಕರ್ನಾಟಕಕ್ಕೆ ಈ ಭಾರಿ ಮುಂಗಾರು ಕೊರತೆ ಆಗದು ಎಂದು ಊಹಿಸಲಾಗಿದೆ. ಕಳೆದ ವರ್ಷ ಒಂದು ವಾರಗಳ ಕಾಲ ತಡವಾಗಿ ಬಂದಿದ್ದ ಮುಂಗಾರು ನಿರೀಕ್ಷೆಯಷ್ಟು ದಾಖಲಾಗಿರಲಿಲ್ಲ. ಕೊರತೆ ಉಂಟು ಮಾಡಿತ್ತು. ಇದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತ್ತು.
ಮುಂದಿನ ಒಂದು ದಿನ ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಭಾಗದಲ್ಲಿ ಜೋರು ಮಳೆ ಬರಲಿದೆ. ಮಲೆನಾಡಿನ ಒಂದೆರಡು ಕಡೆಗಳಲ್ಲಿ ವ್ಯಾಪಕ ಮಳೆ ಆಗಲಿದೆ. ಮುಂಗಾರು ಆರಂಭದಲ್ಲಿ ಅಷ್ಟಾಗಿ ಚುರುಕು ಇಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕಾದು ನೋಡಬೇಕಿದೆ.
ನೆನ್ನೆ ಗುರುವಾರ ಕೇರಳಕ್ಕೆ ಆಗಮಿಸುವ ಜೊತೆಗೆ ಮುಂಗಾರು ಭರ್ಜರಿ ಮಳೆ ಸುರಿಸಿದೆ. ಇಂದು ಅಲ್ಲಿಂದ ವಿವಿಧ ರಾಜ್ಯಗಳಿಗೆ ಮುಂಗಾರು ಮಾರುತಗಳು ಎಂಟ್ರಿಕೊಟ್ಟಿವೆ. ಅಸ್ಸಾಂನಲ್ಲಿ ಭಾರೀ ಮಳೆ ಗಾಳಿಯಿಂದ ಸಾವುಗಳು ಸಂಭವಿಸಿವೆ ಎಂದು ವರದಿ ಆಗಿದೆ. ಮುಂಗಾರು ಆರಂಭದಲ್ಲಿ ಆರ್ಭಟಿಸುವ ಮುನ್ಸೂಚನೆ ಶುಕ್ರವಾರದ ದೊರೆತಿದೆ.
ಸದ್ಯ ದಕ್ಷಿಣ ರಾಜ್ಯಗಳಿಗೆ ಮುಂಗಾರು ಎಂಟ್ರಿ ಕೊಟ್ಟಿದ್ದು, ರಾಜ್ಯ ಕೆಲವು ಜಿಲ್ಲೆಗಳಲ್ಲಿ ಜೋರಾರು ಅಬ್ಬರು ಶುರುವಿಟ್ಟುಕೊಂಡಿದೆ. ಜೂನ್ ಮೊದಲ ವಾರ ಹೆಚ್ಚು ಮಳ ಆಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.












Click it and Unblock the Notifications