ಅರುಣ್ ಜೇಟ್ಲಿ VS ಕೇಜ್ರಿವಾಲ್, ಸೇರಿಗೆ ಸವ್ವಾಸೇರು
ನವದೆಹಲಿ, ಡಿಸೆಂಬರ್, 17: ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿ ಮೇಲಿನ ಸಿಬಿಐ ದಾಳಿ ಪ್ರಕರಣ ದೆಹಲಿ ಮುಖ್ಯಮಂತ್ರಿ ಅವರವಿಂದ್ ಕೇಜ್ರಿವಾಲ್ ಮತ್ತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಪ್ರಕರಣ ಇದೀಗ ಸೇರಿಗೆ ಸವ್ವಾಸೇರರು ಎಂಬಂತೆ ಆಗಿದೆ. ದೆಹಲಿ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅರುಣ್ ಜೇಟ್ಲಿ, ಕೇಜ್ರಿವಾಲ್ ಅವರು ಮರೆತಿದ್ದಾರೋ ಮರೆಮಾಚುತ್ತಿದ್ದಾರೋ ಗೊತ್ತಿಲ್ಲ. ಸುಳ್ಳು ಹೇಳುವುದರಲ್ಲೇ ಅವರಿಗೆ ಸಂತಸ ಸಿಗುತ್ತದೆ ಎಂದು ಕಾಣುತ್ತಿದೆ ಎಂದು ತಿರುಗುಬಾಣ ಬಿಟ್ಟಿದ್ದಾರೆ.[ಎಎಪಿ ಸಂಸದನಿಗೆ ನೀರು ಕುಡಿಸಿದ ಮೋದಿ, ಕಿಲಕಿಲ ನಕ್ಕ ಸೋನಿಯಾ]
ಇನ್ನು ಜೇಟ್ಲಿ ವಿರುದ್ಧ ಮತ್ತೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿರುವ, ನಿಷ್ಪಕ್ಷಪಾತ ತನಿಖೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಜೇಟ್ಲಿ ಅವರು ತನಿಖೆ ತಪ್ಪಿಸಿಕೊಳ್ಳಲು ಯತ್ನ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ?

ಜೇಟ್ಲಿ ಹೇಳಿದ್ದೇನು?
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ಕೇಜ್ರಿವಾಲ್ ಬೆಂಬಲಕ್ಕೆ ನಿಂತಿದ್ದಾರೆ.

ಕ್ರಿಕೆಟ್ ಆಡಳಿತ ಪಾರದರ್ಶಕ
ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಎಲ್ಲವೂ ಪಾರದರ್ಶಕವಾಗಿದೆ. ಅದರ ಬಗೆಗಿನ ದಾಖಲೆಗಳು ಪರಿಶುದ್ಧವಾಗಿವೆ.

ಪ್ರಧಾನಿ ವಿರುದ್ಧ ಬಳಸಿದ ಪದಗಳು ಸರಿ ಇಲ್ಲ
ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಕೆ ಮಾಡಿದ ಪದಗಳು ಎಲ್ಲರಿಗೂ ಅಸಹ್ಯ ಹುಟ್ಟಿಸುವಂತಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥ ಗೊತ್ತೆ?
ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೇ ಮನಸಿಗೆ ಬಂದಿದ್ದನ್ನು ಹೇಳುವುದೆ? ಇದನ್ನು ಕೇಜ್ರಿವಾಲ್ ಅರ್ಥ ಮಾಡಿಕೊಳ್ಳಬೇಕು ಎಂದು ಜೇಟ್ಲಿ ಹೇಳಿದ್ದಾರೆ.

ಕೇಜ್ರಿವಾಲ್ ಹೇಳಿರುವುದೇನು?
ಟ್ವೀಟ್ ಮಾಡಿರುವ ಕೇಜ್ರಿವಾಲ್ ಬಿಜೆಪಿ ಪ್ರಾಮಾಣಿಕವಾಗಿ ಜೇಟ್ಲಿ ಅಕ್ರಮಗಳ ವಿರುದ್ಧ ತನಿಖೆ ಮಾಡಲಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
|
ಜೇಟ್ಲಿ ರಾಜೀನಾಮೆಗೆ ಒತ್ತಾಯ
ಅರುಣ್ ಜೇಟ್ಲಿ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿರುವ ಆಮ್ ಆದ್ಮಿ ಪಕ್ಷ ಜೇಟ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯ ಮಾಡಿದೆ.












Click it and Unblock the Notifications