Delhi: ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೋಲು
ದೆಹಲಿ ಜನವರಿ 8: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಸೋಲು ಅನುಭವಿಸಿದ್ದಾರೆ. ಇದರಿಂದಾಗಿ ಎಎಪಿಗೆ ಭಾರೀ ಮುಖಭಂಗವಾಗಿದೆ. ಅರವಿಂದ್ ಕೇಜ್ರಿವಾಲ್ ವಿರುದ್ಧ ಪರ್ವೇಶ್ ವರ್ಮಾ ಗೆಲುವು ಸಾಧಿಸಿದ್ದಾರೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಯಾವುದೇ ಸ್ಥಾನ ಬಂದಿಲ್ಲ. ಅಂದರೆ ಮೂರು ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದೆ. ಎರಡು ಬಾರಿ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಬಹುಮತ ಪಡೆದು ದೆಹಲಿ ದೊರೆಯಾಗಿದ್ದರು. ಆದರೀಗ ಬಿಜೆಪಿ ತುಂಬಾ ವರ್ಷಗಳ ಬಳಿಕ ದೆಹಲಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಮನೀಶ್ ಸಿಸೋಡಿಯಾ ಸೋಲು
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಮುಖ ನಾಯಕ ಮನೀಶ್ ಸಿಸೋಡಿಯಾ, ಜಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಪೂರ್ವ ದೆಹಲಿಯ ಪತ್ಪರ್‌ಗಂಜ್‌ನಿಂದ ಈ ಹಿಂದೆ ಸತತ ಮೂರು ಗೆಲುವುಗಳನ್ನು ಗಳಿಸಿದ್ದ ಅವರು, ಈ ಚುನಾವಣೆಯಲ್ಲಿ ಜಂಗ್‌ಪುರದಿಂದ ಸ್ಪರ್ಧಿಸಿದ್ದರು.
ಜಂಗ್‌ಪುರದಲ್ಲಿ ಬಿಜೆಪಿಯ ತರವಿಂದರ್ ಸಿಂಗ್ ಮಾರ್ವಾ ಅವರು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಮನೀಶ್ ಸಿಸೋಡಿಯಾ ಅವರಿಗೆ ಅವರ ಸೋಲಿಗೆ ಕಾರಣಗಳ ಬಗ್ಗೆ ಕೇಳಿದಾಗ, ಯಾವುದೇ ಹೇಳಿಕೆಯನ್ನು ನೀಡುವ ಮೊದಲು ಫಲಿತಾಂಶಗಳನ್ನು ವಿಶ್ಲೇಷಿಸುವುದಾಗಿ ಹೇಳಿದ್ದಾರೆ.
ಪರ್ವೇಶ್ ವರ್ಮಾ ವಿರುದ್ಧ ಅರವಿಂದ್ ಸೋಲು
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ)ಕ್ಕೆ ಭಾರಿ ಹಿನ್ನಡೆಯಾಗಿದೆ. ನವದೆಹಲಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಪರ್ವೇಶ್ ವರ್ಮಾ ವಿರುದ್ಧ ಅರವಿಂದ್ ಕೇಜ್ರಿವಾಲ್ ಸೋಲನ್ನು ಅನುಭವಿಸಿದ್ದಾರೆ.
ನಾಲ್ಕನೇ ಬಾರಿಗೆ ಮರುಚುನಾವಣೆ ಬಯಸಿದ್ದ ಕೇಜ್ರಿವಾಲ್, ಕಳೆದ ಮೂರು ಚುನಾವಣೆಗಳಿಂದ ಅವರ ಭದ್ರಕೋಟೆಯಾಗಿರುವ ನವದೆಹಲಿ ವಿಧಾನಸಭಾ ಸ್ಥಾನವನ್ನು ಗೆಲ್ಲುವ ಭರವಸೆ ಹೊಂದಿದ್ದರು. ಆದರೆ ಬಿಜೆಪಿ ಮುಂದೆ ಪೊರಕೆ ಕೆಲಸ ಮಾಡಲಿಲ್ಲ. ಈ ಬಾರಿ ಪರ್ವೇಶ್ ವರ್ಮಾ ಗೆಲುವು ಸಾಧಿಸಿದ್ದು, ಇವರು ದೆಹಲಿ ಸಿಎಂ ರೇಸ್‌ನಲ್ಲೂ ಮುಂಚುಣಿಯಲ್ಲಿದ್ದಾರೆ. ಹೀಗಾಗಿ ಪರ್ವೇಶ್ ವರ್ಮಾ ಅವರು ದೆಹಲಿಯ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸೋಲು ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ಜೈಲಿಗೆ ಹೋಗಿ ಬಂದು, ಸಿಎಂ ಸ್ಥಾನದಿಂದ ಕೆಳಗಿಳಿದಿದ್ದ ಅರವಿಂದ್ ಕೇಜ್ರಿವಾಲ್ ಅವರ ನಿರೀಕ್ಷೆ ಸುಳ್ಳಾಗಿದೆ. ಸಿಎಂ ಅತಿಶಿ ಕೂಡ ಕೂದಳೆಯ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಭ್ರಷ್ಟಾಚಾರ ಆರೋಪದಿಂದಾಗಿ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೋಡಿಯಾ ಸೋಲು ಅನುಭವಿಸಿದ್ದಾರೆಂದು ಹೇಳಲಾಗುತ್ತಿದೆ.
'ಬಿಜೆಪಿ ಗೆಲುವು ಸಾಧಿಸಿಲ್ಲ' ಕಾಂಗ್ರೆಸ್
ದೆಹಲಿಯಲ್ಲಿ ಎಎಪಿ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, 'ದೆಹಲಿಯಲ್ಲಿ ಎಎಪಿ ಸೋತ್ತಿಲ್ಲ ಬದಲಾಗಿ ಕಾಂಗ್ರೆಸ್ ಬಲವಾಗಿದೆ. ಈ ಬಾರಿ ಕಾಂಗ್ರೆಸ್ ಒಟ್ಟಾಗಿ ಸ್ಪರ್ಧೆ ಮಾಡಿಲ್ಲ. ಒಟ್ಟಾಗಿ ಸ್ಪರ್ಧೆ ಮಾಡಿದ್ದರೆ, ಖಂಡಿತವಾಗಿ ಬಿಜೆಪಿ ಸೋಲು ಅನುಭವಿಸುವುದರಲ್ಲಿ ಅನುಮಾನ ಇರುತ್ತಿರಲಿಲ್ಲ. ಈ ಬಾರಿ ಕಾಂಗ್ರೆಸ್ ಸೋತಿರಬಹುದು. ಆದರೆ ಈ ಹಿಂದೆ ನಡೆದ ಚುನಾವಣೆಯ ಮತಗಳನ್ನು ಹೋಲಿಸಿದರೆ ಕಾಂಗ್ರೆಸ್ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ಹೆಚ್ಚು ಬಲಗೊಳ್ಳುತ್ತಿದೆ. ಕಾಂಗ್ರೆಸ್ ಹಾಗೂ ಎಎಪಿ ಒಟ್ಟಾಗಿ ಸ್ಪರ್ಧೆ ಮಾಡಿದ್ದರೆ ದೆಹಲಿಯಲ್ಲಿ ಬಿಜೆಪಿಯನ್ನು ಸೋಲಿಸಬಹುದಾಗಿತ್ತು; ಎಂದಿದೆ.












Click it and Unblock the Notifications