Lok Sabha Election 2024; ಮೋದಿಗೆ 75 ವರ್ಷ ತುಂಬಿದ ಬಳಿಕ ಅಮಿತ್ ಶಾ ಪ್ರಧಾನಿ ಆಗ್ತಾರೆ ಎಂದ ಕೇಜ್ರಿವಾಲ್
ಜೈಲಿನಿಂದ ಹೊರಬಂದ ತಕ್ಷಣ ಚುನಾವಣಾ ಪ್ರಚಾರ ಆರಂಭಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಮುಂದಿನ ವರ್ಷ 75 ತುಬಲಿದ್ದು, ಅಮಿತ್ ಶಾ ಯೋಗಿ ಆದಿತ್ಯನಾಥ್ ಸೇರಿದಂತೆ ಎಲ್ಲಾ ಬಿಜೆಪಿ ನಾಯಕರನ್ನು ಬದಿಗೊತ್ತಿ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 220-230 ಸ್ಥಾನಗಳಿಗೆ ಇಳಿಯಲಿದೆ ಎಂದು ಭವಿಷ್ಯ ನುಡಿದ ಅವರು, ಅಮಿತ್ ಶಾ ಪ್ರಧಾನಿಯಾಗಿ ಅಧಿಕಾರಕ್ಕೇರುವುದನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಯೋಗಿ ಆದಿತ್ಯನಾಥ್ ಅವರನ್ನು ಎರಡು ತಿಂಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುವುದು ಎಂದರು. ಮೋದಿ ಅವರೇ ತಮ್ಮ ಪಕ್ಷದಲ್ಲಿ 75 ವರ್ಷಗಳ ಬಳಿಕ ನಿವೃತ್ತಿಯಾಗುವ ನಿಯಮ ತಂದಿದ್ದಾರೆ ಎಂದು ನೆನಪಿಸಿದರು.

ಮೋದಿ ಸರ್ವಾಧಿಕಾರಿ
ಮೋದಿ ಸರ್ವಾಧಿಕಾರಿ ಮತ್ತು 'ಒಂದು ರಾಷ್ಟ್ರ, ಒಂದು ನಾಯಕ' ಎನ್ನುವುದನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪ್ರಧಾನಿ ಮೋದಿ ತನಗಾಗಿ ಮತ ಕೇಳುತ್ತಿಲ್ಲ, ಬಿಜೆಪಿಗೆ ಹಾಕುವ ಮತ ಮೋದಿಗಲ್ಲ, ಅಮಿತ್ ಶಾ ಅವರಿಗೆ ಎಂದು ಅರಿಯಬೇಕು ಎಂದರು.
ಬಂಧನದ ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿರುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಇದು ಎಎಪಿಯನ್ನು ಮುಗಿಸಲು ಮಾಡಿರುವ ಸಂಚು ಎಂದು ಹೇಳಿದರು.
ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಎಪಿ ಬೆಂಬಲಿಗರ ಸಭೆಯನ್ನುದ್ದೇಶಿಸಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಡಬೇಕು ಎಂಬುದನ್ನು ಕೇಜ್ರಿವಾಲ್ ಅವರಿಂದ ಕಲಿಯಿರಿ" ಎಂದು ಹೇಳಿದರು.
ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇಗುಲಕ್ಕೆ ಭೇಟಿ ನೀಡಿದ ನಂತರ 20 ನಿಮಿಷಗಳ ಭಾಷಣದಲ್ಲಿ ಕೇಜ್ರಿವಾಲ್, ಎಎಪಿ ತನ್ನ ಉತ್ತಮ ಕೆಲಸದಿಂದ ಬಿಜೆಪಿಯನ್ನು ಸೋಲಿಸುತ್ತದೆ ಎಂದು ತಿಳಿದಿರುವುದರಿಂದ ಮೋದಿ ಪಕ್ಷವನ್ನು ಹತ್ತಿಕ್ಕಲು ಬಯಸುತ್ತಿದ್ದಾರೆ ಎಂದು ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುವ ಮೋದಿ ಕಳ್ಳರು ಮತ್ತು ಡಕಾಯಿತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ₹70,000 ಕೋಟಿಗಳ ಹಗರಣದಲ್ಲಿ ಭಾಗಿಯಾಗಿರುವ ಒಬ್ಬ ನಾಯಕನ ವಿರುದ್ಧ ಮೋದಿ ಆರೋಪ ಮಾಡಿದ ಹತ್ತು ದಿನಗಳ ನಂತರ ಅವರ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ನೀವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಬಯಸಿದರೆ, ಕೇಜ್ರಿವಾಲ್ ಅವರಿಂದ ಕಲಿಯಿರಿ ಎಂದರು.












Click it and Unblock the Notifications