ಸಂಪ್ರದಾಯ ಮುರಿದು ಇಂಗ್ಲೀಷ್- ಹಿಂದಿಯಲ್ಲಿ ಬಜೆಟ್ ಭಾಷಣ
ನವದೆಹಲಿ, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರದಂದು ಐದನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಇಂಗ್ಲೀಷ್ ನಲ್ಲಿ ಬಜೆಟ್ ಭಾಷಣ ಆರಂಭಿಸಿದ್ದು, ಹಿಂದಿಯಲ್ಲೂ ಪ್ರಮುಖ ಅಂಶಗಳನ್ನು ಹೇಳಲಿದ್ದಾರೆ.
ಎನ್ ಡಿಎ ಸರ್ಕಾರದ ಪೂರ್ಣಪ್ರಮಾಣ ಬಜೆಟ್ ಇದಾಗಿದೆ. ಈ ಬಾರಿ ಸಂಪ್ರದಾಯ ಮೀರಿ ಜೇಟ್ಲಿ ಅವರು ಬಜೆಟ್ ಭಾಷನವನ್ನು ಹಿಂದಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಕೂಡ ಬಜೆಟ್ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿ ಎನ್ನುವುದು ಸಚಿವಾಲಯದ ಉದ್ದೇಶ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ಅವರು ಹೇಳಿದ್ದಾರೆ.
ಈ ಮೂಲಕ ಅರುಣ್ ಜೇಟ್ಲಿ ಅವರು ಸ್ವಾತಂತ್ರ್ಯ ನಂತರ ವಿತ್ತ ಸಚಿವರೊಬ್ಬರು ಮೊಟ್ಟ ಮೊದಲ ಬಾರಿಗೆ ಹಿಂದಿಯಲ್ಲಿ ಬಜೆಟ್ ಮಂಡನೆ ಮಾಡಿದ್ದಂತಾಗುತ್ತದೆ. ಇದು ಜನ ಸಾಮಾನ್ಯರಿಗಾಗಿ ಜನಸ್ನೇಹಿ ಬಜೆಟ್ ಆಗಲಿದೆ ಎಂದು ಶುಕ್ಲಾ ಹೇಳಿದರು.

ಕರ್ನಾಟಕ ಸೇರಿದಂತೆ 8 ರಾಜ್ಯಗಳ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಮಂಡಿಸಲಿರುವ 2018-19ನೆ ಸಾಲಿನ ಬಜೆಟ್ ಜನಸ್ನೇಹಿ, ಪ್ರಗತಿಪರವಾಗಿರುತ್ತದೆ ಎಂಬ ನಿರೀಕ್ಷೆಯಿದೆ.
More than 70% of GOI income comes from non Hindi states and 60% people are not from Hindi belt. What is Govt trying to convey? #HindiBudget
— DP SATISH (@dp_satish) February 1, 2018
ಕೃಷಿ, ನಿರುದ್ಯೋಗ ನಿವಾರಣೆ, ಮೂಲ ಸೌಕರ್ಯ, ಆರ್ಥಿಕ ಪ್ರಗತಿಗೆ ಬಜೆಟ್ ನಲ್ಲಿ ಮೋದಿ ಸರ್ಕಾರ ಹೆಚ್ಚಿನ ಒತ್ತು ಕೊಡುವ ಸಾಧ್ಯತೆ ಇದೆ. 8 ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯಲಿರೋ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಜನಪ್ರಿಯ ಬಜೆಟ್ ಮಂಡನೆ ಮಾಡಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.












Click it and Unblock the Notifications