ವಿದೇಶ ಪ್ರವಾಸ ರದ್ದುಗೊಳಿಸಬೇಡಿ : ಮೋದಿಗೆ ಜೇಟ್ಲಿ ಕುಟುಂಬ ಮನವಿ

ನವದೆಹಲಿ, ಆಗಸ್ಟ್ 24: ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಶನಿವಾರ ನಿಧನರಾಗಿದ್ದು, ವಿದೇಶದಲ್ಲಿರುವ ಪ್ರಧಾನಿಗೆ ವಿದೇಶ ಪ್ರವಾಸ ರದ್ದುಗೊಳಿಸಿ ಬರುವುದು ಬೇಡ ಎಂದು ಜೇಟ್ಲಿ ಕುಟುಂಬಸ್ಥರು ಮೋದಿಗೆ ಮನವಿ ಮಾಡಿದ್ದಾರೆ.

ಈಗ ಅಬುಧಾಬಿಯಲ್ಲಿರುವ ಪ್ರಧಾನಿ ಮೋದಿ ಜೈಟ್ಲಿಯವರ ಪತ್ನಿ ಸಂಗೀತಾ ಮತ್ತು ಪುತ್ರ ರೋಹನ್ ಅವರೊಂದಿಗೆ ಮಾತನಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜೇಟ್ಲಿ ನಿಧನದ ನಂತರ ಟ್ವೀಟ್ ಮಾಡಿದ ಪ್ರಧಾನಿ ಮೋದಿ ' ಅರುಣ್ ಜೇಟ್ಲಿ ಜಿ ಅವರ ನಿಧನದೊಂದಿಗೆ, ನಾನು ಮೌಲ್ಯಯುತ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ, ಅವರಲ್ಲಿ ನಾನು ದಶಕಗಳಿಂದಲೂಅವರ ಬಗ್ಗೆ ಗೌರವವನ್ನು ಹೊಂದಿದ್ದೇನೆ.

Narendra Modi

ಸಮಸ್ಯೆಗಳ ಬಗೆಗಿನ ಅವರ ಒಳನೋಟ ಮತ್ತು ವಿಷಯಗಳ ಸೂಕ್ಷ್ಮ ತಿಳುವಳಿಕೆ ಬಹಳ ಕಡಿಮೆ ಸಾಮ್ಯತೆ ಯನ್ನು ಹೊಂದಿದೆ. ಅವರು ಉತ್ತಮವಾಗಿ ಬದುಕಿದರು, ನಮ್ಮೆಲ್ಲರ ನಡುವೆ ಅನಂತ್ ಸಂತಸದ ನೆನಪುಗಳನ್ನು ಬಿಟ್ಟುಹೋಗಿದ್ದಾರೆ" ಎಂದು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದರು.

ಪ್ರಧಾನಿ ಮೋದಿಯವರಿಗೆ ತಮ್ಮ ಅಧಿಕೃತ ಪ್ರವಾಸವನ್ನು ರದ್ದುಗೊಳಿಸಕೂಡದು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.ಪ್ರಧಾನಿ ಈಗ ಫ್ರಾನ್ಸ್, ಯುಎಇ, ಬಹರೇನ್ ಪ್ರವಾಸದಲ್ಲಿದ್ದಾರೆ. ಇದಾದ ನಂತರ ಅವರು ಮಂಗಳವಾರದಂದು ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಅವರು ಜಿ-7 ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+