ಉಗ್ರರ ಹೆಣ ಬೀಳಿಸಲು ಡ್ರೋನ್, ಹೆಲಿಕಾಪ್ಟರ್ ಸಹಾಯ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿ ಹಿನ್ನೆಲೆ ಹೈಅಲರ್ಟ್ ಘೋಷಿಸಿ ಅಖಾಡಕ್ಕೆ ಇಳಿದಿದೆ ಸೇನೆ. ಭಯೋತ್ಪಾದಕರ ಹುಡುಕಾಟಕ್ಕೆ ಕಾರ್ಯಾಚರಣೆ ತೀವ್ರಗೊಂಡಿದ್ದು, ಉಗ್ರರ ಬೇಟೆಗೆ ಡ್ರೋನ್, ಹೆಲಿಕಾಪ್ಟರ್ ಮೊರೆ ಹೋಗಿದೆ ಭಾರತೀಯ ಸೇನೆ (indian army). ಸೇನಾ ವಾಹನದ ಮೇಲೆ ದಾಳಿ ನಡೆದಿರುವ ಪ್ರದೇಶದಲ್ಲಿ ಇಂಚಿಂಚು ಜಾಗ ಹುಡುಕಲಾಗುತ್ತಿದೆ.

ಸೂಕ್ಷ್ಮ ಪ್ರದೇಶವಾಗಿರುವ ಪೂಂಚ್ ಜಿಲ್ಲೆಯಲ್ಲಿ ಭಾರತ ಹಾಗೂ ಪಾಕ್ ಗಡಿ ಕೂಡುತ್ತದೆ. ರಜೌರಿ ಸೆಕ್ಟರ್ ಸದಾ ಆತಂಕದಲ್ಲೇ ಮುಳುಗಿರುತ್ತದೆ. ಇಂತಹದ್ದೇ ಜಾಗದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ನಿನ್ನೆ ಭೀಕರ ದಾಳಿ ನಡೆದಿತ್ತು. ಈ ದಾಳಿಯಲ್ಲಿ 5 ಸೈನಿಕರು ಹುತಾತ್ಮರಾಗಿದ್ದರು. ಉಗ್ರರು ನಡೆಸಿದ ದಾಳಿಯಲ್ಲಿ ಸೇನಾ ವಾಹನಕ್ಕೆ ಬೆಂಕಿ ಬಿದ್ದು ಐವರು ಯೋಧರು ಸಜೀವ ದಹನವಾಗಿದ್ದರು. ಹೀಗಾಗಿ ಉಗ್ರರ ಹೆಡೆಮುರಿ ಕಟ್ಟಲು ಭಾರತೀಯ ಸೇನೆ ತಂತ್ರಜ್ಞಾನದ ಮೊರೆ ಹೋಗಿದೆ. ಡ್ರೋನ್, ಹೆಲಿಕಾಪ್ಟರ್ ಬಳಸಿ ಉಗ್ರರು ಅಡಗಿರುವ ಪ್ರದೇಶದ ಹುಡುಕಾಟ ಮುಂದುವರಿದಿದೆ.

jammu and kashmir terrorist attack

ಘಟನಾ ಸ್ಥಳದಲ್ಲಿ ಸೈನಿಕರ ಕಾವಲು

ಮತ್ತೊಂದು ಕಡೆ ಭಾರತೀಯ ಸೇನೆ ಮೇಲೆ ದಾಳಿ ನಡೆದ ಸ್ಥಳದಲ್ಲಿ ಸೈನಿಕರನ್ನ ನಿಯೋಜಿಸಿ, ಪರಿಸ್ಥಿತಿ ನಿಯಂತ್ರಿಸಲಾಗುತ್ತಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯ ಪರಿಣಾಮ ಸೇನಾ ವಾಹನದಲ್ಲಿ ಸ್ಪೋಟ ಸಂಭವಿಸಿದೆ. ಈ ಘಟನೆ ಬಳಿಕ ಬೆಂಕಿ ಹೊತ್ತುಕೊಂಡು ಐವರು ಯೋಧರು ಹುತಾತ್ಮರಾಗಿದ್ದಾರೆ. ಭೀಕರ ಘಟನೆ ಕಣಿವೆ ರಾಜ್ಯದಲ್ಲಿ ಮತ್ತೆ ಸಂಚಲನ ಸೃಷ್ಟಿಮಾಡಿದೆ. ರಜೌರಿ ವಲಯದ ಭಿಂಬರ್ ಗಲ್ಲಿಯಿಂದ ಪೂಂಚ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ.

ಉಗ್ರರಿಂದಲೇ ನಡೆಯಿತಾ ಭೀಕರ ದಾಳಿ?

ಉಗ್ರರು ಗ್ರೆನೆಡ್ ದಾಳಿ ನಡೆಸಿದ ಕಾರಣಕ್ಕೆ ಸೇನಾ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಐವರು ಯೋಧರು ಸಜೀವ ದಹನರಾಗಿದ್ದಾರೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೆ ನೇಮಕವಾಗಿದ್ದ ರಾಷ್ಟ್ರೀಯ ರೈಫಲ್ ಯುನಿಟ್‌ನ ಐವರು ಯೋಧರು ಮೃತಪಟ್ಟಿದ್ದಾರೆ. ನಿನ್ನೆ ಸ್ಥಳಕ್ಕೆ ಆಗಮಿಸಿದ ಸೇನೆ, ಪೊಲೀಸ್ ಸಿಬ್ಬಂದಿ ಭಯೋತ್ಪಾದಕರಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದರು. ಮತ್ತೊಂದು ಕಡೆ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಯೋಧನನ್ನು ರಜೌರಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯೋಧ ಒಂದಷ್ಟು ಚೇತರಿಸಿಕೊಂಡ ಬಳಿಕ ಉಗ್ರರ ಅಸಲಿಯತ್ತು ತಿಳಿಯಲಿದೆ.

jammu and kashmir terrorist attack

ಪುಲ್ವಾಮಾ ದಾಳಿಯ ಭೀಕರತೆ

4 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ದಾಳಿ ಕೂಡ ಉಗ್ರರ ಇಂತಹದ್ದೇ ಭೀಕರ ಕೃತ್ಯಗಳಿಗೆ ಸಾಕ್ಷಿಯಾಗಿತ್ತು. ಫೆಬ್ರವರಿ 14, 2019ರಂದು ಭಾರತೀಯ ಸೇನಾ ವಾಹನದ ಮೇಲೆ ದಾಳಿ ನಡೆದ ಪರಿಣಾಮ 40 ಭಾರತೀಯ ಯೋಧರು ಹುತಾತ್ಮರಾಗಿದ್ದರು. ಜೊತೆಗೆ ಪದೇಪದೆ ಕಣಿವೆ ರಾಜ್ಯದಲ್ಲಿ ಭಾರತೀಯ ಸೇನೆಯನ್ನೇ ಗುರಿಯಾಗಿಸಿಕೊಂಡು ಉಗ್ರರು ಅಟ್ಯಾಕ್ ಮಾಡುತ್ತಿದ್ಧಾರೆ. ಈಗಲೂ ಅಂತಹದ್ದೇ ಕೃತ್ಯ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ತಪಾಸಣೆ ತೀವ್ರಗೊಂಡಿದೆ. ಘಟನೆ ನಡೆದ ಪ್ರದೇಶದ ಸಮೀಪದಲ್ಲೇ ಉಗ್ರರು ಅಡಗಿರುವ ಸಾಧ್ಯತೆ ಇದೆ.

jammu and kashmir terrorist attack

ಪಾಪಿ ಪಾಕಿಸ್ತಾನದ ಬೆಂಬಲ

ಕಣಿವೆ ರಾಜ್ಯದಲ್ಲಿ ಉಗ್ರರು ಇಷ್ಟೊಂದು ಗಾಢವಾಗಿ ಬೇರೂರಲು ಪಾಪಿ ಪಾಕಿಸ್ತಾನದ ಕೈವಾಡ ಕೂಡ ಇದೆ. ಅದರಲ್ಲೂ ಭಾರತಕ್ಕೆ ಉಪಟಳ ನೀಡಲೆಂದೇ ಉಗ್ರರನ್ನ ಪಾಕಿಸ್ತಾನ ಬೆಳೆಸುತ್ತಿದೆ. ಪಾಕ್ ಆಕ್ರಮಿತ ಕಾಶ್ಮೀರ ಉಗ್ರರ ಸ್ವರ್ಗವಾಗುತ್ತಿದೆ. ಇಲ್ಲಿ ತರಬೇತಿ ಪಡೆಯುವ ಉಗ್ರರ ಪಡೆ ಭಾರತದ ಗಡಿಯೊಳಗೆ ನುಸುಳಿ, ಭಾರತೀಯ ಸೇನೆ ಹಾಗೂ ಸೈನಿಕರ ಮೇಲೆ ದಾಳಿ ಮಾಡುತ್ತಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಕೂಡ ಸರಿಯಾಗೇ ಪಾಠ ಕಲಿಸಿದೆ. ಆದರೂ ಉಗ್ರರು ಮಾತ್ರ ತಮ್ಮ ಬುದ್ಧಿ ಬಿಡುತ್ತಿಲ್ಲ. ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಹಾಳಾಗಿ ಹೋಗಿರುವುದು ಉಗ್ರರಿಗೆ ಮತ್ತಷ್ಟು ಬಲ ನೀಡಿದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+