ಯೋಧನ ಲಗೇಜ್ ಬ್ಯಾಗ್ ನಲ್ಲಿ ಜೀವಂತ ಗುಂಡು ಪತ್ತೆ
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪಾಂಡಿಯಾ ರಾಜ್ ಅವರು ಲಗೇಜ್ ಜೋಡಿಸಿಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಈ ಗುಂಡು ಅವರ ಬ್ಯಾಗಿನಲ್ಲಿ ಸೇರಿಕೊಂಡಿರಬಹುದೆಂದು ಊಹಿಸಲಾಗಿದೆ.
ಶ್ರೀನಗರ, ಏಪ್ರಿಲ್ 4: ಸೋಮವಾರಷ್ಟೇ (ಏಪ್ರಿಲ್ 3) ಯೋಧನೊಬ್ಬ ತನ್ನ ಲಗೇಜಿನಲ್ಲಿ ಗ್ರೆನೇಡ್ ಇಟ್ಟುಕೊಂಡಿದ್ದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ, ಮಂಗಳವಾರ ಪಾಂಡಿಯಾ ರಾಜ್ ಎಂಬ ಯೋಧನ ಲಗೇಜ್ ಬ್ಯಾಗ್ ನಲ್ಲಿ ಜೀವಂತ ಗುಂಡುಗಳನ್ನು ಪತ್ತೆ ಹಚ್ಚಿದೆ.
ಈ ಹಿನ್ನೆಲೆಯಲ್ಲಿ ಪಾಂಡಿಯಾ ರಾಜ್ ಅವರನ್ನು ಮೊದಲು ವಿಚಾರಣೆಗೊಳಿಸಿದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಹೆಚ್ಚಿನ ತನಿಖೆಗಾಗಿ ಅವರನ್ನು ಸೇನೆಯ ವಶಕ್ಕೆ ನೀಡಿದೆ. ಪಾಂಡಿಯಾ ರಾಜ್ ಅವರು ಶ್ರೀನಗರದಿಂದ ದೆಹಲಿಗೆ ತೆರಳಬೇಕಿತ್ತು.

ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪಾಂಡಿಯಾ ರಾಜ್ ಅವರು ಲಗೇಜ್ ಜೋಡಿಸಿಕೊಳ್ಳುತ್ತಿದ್ದಾಗ ಆಕಸ್ಮಿಕವಾಗಿ ಈ ಗುಂಡು ಅವರ ಬ್ಯಾಗಿನಲ್ಲಿ ಸೇರಿಕೊಂಡಿರಬಹುದೆಂದು ಊಹಿಸಲಾಗಿದೆ.
ಸೋಮವಾರದಂದು, ಇಲ್ಲಿ ವಿಮಾನ ನಿಲ್ದಾಣದಲ್ಲಿ ಯೋಧನ ಬ್ಯಾಗಿನಲ್ಲಿ ಎರಡು ಗ್ರೆನೇಡ್ ಹಾಗೂ ಬಂದೂಕಿನ ಬಿಡಿ ಭಾಗಗಳು ಪತ್ತೆಯಾಗಿದ್ದವು. ಆ ಬಗ್ಗೆ ವಿಚಾರಿಸಲಾಗಿ, ಸೇನೆಯಲ್ಲಿನ ಆತನ ಮೇಲ್ವಿಚಾರಕರೊಬ್ಬರು ಆ ವಸ್ತುಗಳನ್ನು ದೆಹಲಿಯಲ್ಲಿನ ಅಧಿಕಾರಿಯೊಬ್ಬರಿಗೆ ಹಸ್ತಾಂತರಿಸುವಂತೆ ತಮಗೆ ನೀಡಿದ್ದಾಗಿ ಆತ ಹೇಳಿದ್ದ.












Click it and Unblock the Notifications