ವಾಯುಪಡೆ ಮುಖ್ಯಸ್ಥ ಅರ್ಜಾನ್ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ ಶೋಕ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 16: ಭಾರತೀಯ ವಾಯುಸೇನಾ ಮುಖ್ಯಸ್ಥರಾದ ಅರ್ಜಾನ್ ಸಿಂಗ್ (98) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶೋಕ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು, ಇಲ್ಲಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದರು.

Arjan Singh, Marshal of Indian Air Force, Dies At 98

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಆಸ್ಪತ್ರೆಗೆ ಭೇಟಿ ಅರ್ಜಾನ್ ಸಿಂಗ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.

ಭಾರತೀಯ ವಾಯುಪಡೆಯ 'ಮಾರ್ಷಲ್' ಅರ್ಜನ್ ಸಿಂಗ್ ನಿಧನ

ಪ್ರಧಾನಿ, ರಾಷ್ಟ್ರಪತಿ ಶೋಕ:ಸಿಂಗ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶವು ಇಂದು ಮಹಾನ್ ಯೋಧರೊಬ್ಬರನ್ನು ಕಳೆದುಕೊಂಡಿದೆ. ದೇಶಕ್ಕೆ ಅವರು ಮಾಡಿದ ಸೇವೆಯನ್ನು ಚಿರಸ್ಮರಣೀಯ ಎಂದಿದ್ದಾರೆ.

ಸಿಂಗ್ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ''ಭಾರತ ಕಂಡ ವೀರ ಸೇನಾನಿ ಹಾಗೂ ವಾಯು ಸೇನೆಯ ಮಾರ್ಷಲ್ ಆಗಿದ್ದ ಅರ್ಜಾನ್ ಸಿಂಗ್ ಅವರ ನಿಧನದ ವಾರ್ತೆ ದುಃಖವಾಗಿದೆ. ಅಂಥ ಮಹಾನ್ ಯೋಧನನ್ನು ಕಳೆದುಕೊಂಡ ಭಾರತೀಯ ವಾಯು ಸೇನೆಗೆ ಹಾಗೂ ಸಿಂಗ್ ಅವರ ಕುಟುಂಬಕ್ಕೆ ನಾನು ಸಾಂತ್ವನ ಹೇಳಬಯಸುತ್ತೇನೆ'' ಎಂದು ಅವರು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Marshal of the Indian Air Force Arjan Singh, the only officer of the Air Force to be promoted to five-star rank, has died at 98.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ