ಬಿಜೆಪಿ ನೆರಳಲ್ಲಿ ನಾಯ್ಡು, ನಿತೀಶ್ 'ಹಿಂದೂ' ಅಸ್ತ್ರ?
ಹಿಂದುತ್ವವನ್ನು ಪ್ರಧಾನ ತಮ್ಮ ಮತಸೆಳೆತಕ್ಕೆ ಬಳಸುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಮೂರನೇ ಅವಧಿಗೆ ಅಧಿಕಾರಕ್ಕೇರಿದೆ. ಈ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಲು ಬಿಜೆಪಿಗೆ ಭದ್ರ ಬುನಾದಿಯಾಗಿರುವುದು ತೆಲುಗು ದೇಶಂ ಪಾರ್ಟಿಯ (ಟಿಡಿಪಿ) ಚಂದ್ರಬಾಬು ನಾಯ್ಡು ಹಾಗೂ ಬಿಹಾರದ ಸಿಎಂ ನಿತೀಶ್ ಕುಮಾರ್ ಎನ್ನುವುದು ಗೊತ್ತೇ ಇದೆ.
ಇನ್ನು ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ, ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರ ಕೂಡ ಬಿಜೆಪಿಯು ನೆರಳಿನಲ್ಲಿ ತಮ್ಮ ರಾಜಕೀಯ ಲಾಭಕ್ಕೆ ಮುಂದಾಗಿವೆ. ಹಾಗಾಗಿ ಹಿಂದುತ್ವ ಸಿದ್ಧಾಂತವನ್ನು ಮುನ್ನಡೆಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಮ್ಮ ವಿರೋಧಿಯಾದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಸರ್ಕಾರ ಅಧಿಕಾರದಲ್ಲಿದ್ದಾಗ ತಿರುಪತಿ ದೇವಸ್ಥಾನದಲ್ಲಿ ವಿತರಿಸಲಾದ ಲಡ್ಡೂಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಹಾಗೂ ಇನ್ನಿತರ ಕಲಬೆರಕೆ ವಸ್ತುಗಳನ್ನು ಸೇರಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಇದು ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.
ಮತ್ತೊಂದೆಡೆ ಅಯೋಧ್ಯೆ ರಾಮ ಮಂದಿರದ ಪ್ರತಿಷ್ಠಾಪನೆಯ ಸುಮಾರು ಎಂಟು ತಿಂಗಳ ನಂತರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ದೇವಾಲಯದ ನಿರ್ಮಾಣಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ. ಸೀತಾ ಜನ್ಮಸ್ಥಳ ಎಂದು ಪೂಜಿಸಲ್ಪಡುವ ಸೀತಾಮರ್ಹಿಯಲ್ಲಿ ಪುನೌರಾ ಧಾಮವನ್ನು ಅಭಿವೃದ್ಧಿಪಡಿಸುವ ತಮ್ಮ ಸರ್ಕಾರದ ಯೋಜನೆಯನ್ನು ನಿತೀಶ್ ಮುಂದಿಟ್ಟಿದ್ದಾರೆ.

ಬಿಜೆಪಿಯ ಈ ಎರಡೂ ಮಿತ್ರಪಕ್ಷಗಳ ಈ ನಡೆಗಳು ಸದ್ಯ ಬಿಜೆಪಿಯ ಹಿಂದುತ್ವ ಸಿದ್ಧಾಂತಕ್ಕೆ ಒಗ್ಗಿ, ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳುತ್ತಿವೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಇದು ತಮ್ಮ ಹಿಂದೂಗಳ ಬೆಂಬಲವನ್ನು ಮತ್ತಷ್ಟು ಉಳಿಸಿಕೊಳ್ಳುವ ಯತ್ನ ಎಂದು ಹೇಳಲಾಗುತ್ತಿದೆ. ನಾಯ್ಡು ಅವರ ತೆಲುಗು ದೇಶಂ ಪಕ್ಷದ (ಟಿಡಿಪಿ) ತಿರುಪತಿ ಲಡ್ಡು ವಿವಾದವು ಮೇಲ್ನೋಟಕ್ಕೆ ಜಗನ್ ಮೋಹನ್ ರೆಡ್ಡಿ ಅವರನ್ನು ಗುರಿಯಾಗಿಸಿಕೊಂಡಿದ್ದರೂ, ಇದರ ದೀರ್ಘಾವಧಿಯ ಲಾಭವು ಹಿಂದೂಗಳ ಬೆಂಬಲ ಉಳಿಸಿಕೊಳ್ಳಲು ನೆರವಾಗಲಿದೆ ಎಂಬ ಗುಸುಗುಸು ಇದೆ.
ನಾಯ್ಡು ಅವರದ್ದು ಜಗನ್ ಅವರನ್ನು ಮೂಲೆಗುಂಪು ಮಾಡುವ ತಂತ್ರಗಾರಿಕೆ ಒಂದೆಡೆಯಾದರೆ, ಸರ್ಕಾರದ ನಿಯಂತ್ರಣದಿಂದ ದೇವಸ್ಥಾನಗಳನ್ನು ಹಿಂಪಡೆಯುವ ಹಿಂದೂ ಬಲಗಳ ಬೇಡಿಕೆಗೆ ಇದು ಪೂರಕವಾಗಲಿದೆ ಎಂದು ಹೇಳಲಾಗುತ್ತಿದೆ.
ಜಗನ್ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯಲ್ಲಿ ಭ್ರಷ್ಟಾಚಾರವಾಗಿದೆ ಎಂಬ ವಿಚಾರವಾಗಿ ಚಂದ್ರಬಾಬು ನಾಯ್ಡು ವ್ಯವಸ್ಥೆಯನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಟಿಡಿಪಿ ನಾಯಕರೊಬ್ಬರು ಹೇಳಿದ್ದಾರೆ. ಟಿಡಿಪಿಯು ಈಗಾಗಲೇ ಹಿಂದೂಗಳಲ್ಲಿ ತನ್ನ ಬೆಂಬಲವನ್ನು ಉಳಿಸಿಕೊಳ್ಳುವ ಜೊತೆಗೆ ರಾಜಕೀಯವಾಗಿಯೂ ಲಾಭವಾಗಲಿದೆ ಎಂದಿದ್ದಾರೆ.
ಟಿಡಿಪಿ ಜೊತೆ ಸಮಾಗಮಗೊಂಡಿರುವ ಜನಸೇನಾ ಪಕ್ಷದ (ಜೆಎಸ್‌ಪಿ) ನಾಯಕ, ಡಿಸಿಎಂ ಪವನ್ ಕಲ್ಯಾಣ್ ಕೂಡ ಬಿಜೆಪಿಯೊಂದಿಗೆ ಬಲವಾದ ಬಾಂಧವ್ಯವನ್ನು ಹೊಂದಿದ್ದಾರೆ. ಅವರು ಕೂಡ ಸದ್ಯ ಹಿಂದೂ ಮುಖವಾಗಿ ಹೊರಹೊಮ್ಮುತ್ತಿದ್ದಾರೆ ಎನ್ನಲಾಗಿದೆ. ಲಡ್ಡು ವಿವಾದ ಭುಗಿಲೆದ್ದಾಗ ದೇವಾಲಯಗಳಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಲು ಅವರು "ಸನಾತನ ಧರ್ಮ ರಕ್ಷಣಾ ಮಂಡಳಿ" ಸ್ಥಾಪಿಸಲು ಕರೆ ನೀಡಿದ್ದಾರೆ.
ಅತ್ತ ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ರಾಮ ಮಂದಿರಕ್ಕಾಗಿ ಮೋದಿಯನ್ನು ಹೊಗಳಿರುವುದು, ಸೀತಾಮರ್ಹಿ ಮತ್ತು ಅಯೋಧ್ಯೆ ನಡುವೆ ನೇರ ರೈಲು ಸಂಪರ್ಕದ ಬೇಡಿಕೆ ಇಟ್ಟಿದೆ. ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನಿತೀಶ್ ಕುಮಾರ್ ಅವರ ಪಕ್ಷವು ತಮ್ಮ ವೋಟ್ ಬ್ಯಾಂಕ್‌ಗೆ ಕನ್ನ ಹಾಕಲಿದೆ ಎಂದು ಅಲ್ಲಿನ ಸ್ಥಳೀಯ ಬಿಜೆಪಿ ನಾಯಕರು ಆತಂಕದಲ್ಲಿದ್ದಾರೆ. ನಿತೀಶ್ ಕುಮಾರ್ ಅವರು ಈ ಹಿಂದೆ ಯಾವುದೇ ರೀತಿಯ ಟೀಕೆಗಳನ್ನು ಮಾಡಿರಲಿಲ್ಲ. ಕಳೆದ ಎಂಟು ತಿಂಗಳಿಂದ ಸಮ್ಮಿಶ್ರ ಪಕ್ಷವಾಗಿದ್ದರೂ ಅವರು ಮೌನ ವಹಿಸಿದ್ದರು. ಈಗ ಅವರು ರಾಮಮಂದಿರ ನಿರ್ಮಾಣವನ್ನು ಹೊಗಳುತ್ತಿರುವುದು ಅನುಮಾನ ಹುಟ್ಟಿಸುವಂತಿದೆ ಎನ್ನಲಾಗಿದೆ.












Click it and Unblock the Notifications