ಅಮೆರಿಕಕ್ಕೆ ಹೊರಟಿದ್ದೀರಾ? ಈಗಲೇ ವೀಸಾಗೆ ಅಪ್ಲೈ ಮಾಡಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 17: ಬೇಸಿಗೆ ಬರುತ್ತಿದ್ದಂತೆಯೇ ಅಮೆರಿಕಕ್ಕೆ ಹೊರಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅಮೆರಿಕ ರಾಯಭಾರ ಕಚೇರಿಯ ಮುಂದೆ ವೀಸಾ ಆಕಾಂಕ್ಷಿಗಳ ದೊಡ್ಡ ಸಾಲು ಕಾಣಿಸುತ್ತಿದೆ. ವೀಸಾಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಹೀಗಾಗಿ, ಅಮೆರಿಕಕ್ಕೆ ಹೊರಡಲು ಬಯಸಿರುವ ಪ್ರವಾಸಿಗರು ಕೂಡಲೇ ವೀಸಾಗೆ ಅರ್ಜಿ ಸಲ್ಲಿಸಬೇಕು ಎಂದು ನವದೆಹಲಿಯಲ್ಲಿನ ಅಮೆರಿಕದ ರಾಯಭಾರ ಕಚೇರಿ ತಿಳಿಸಿದೆ.

ಎಚ್1 ಬಿ ಪ್ರೀಮಿಯಂ ವೀಸಾ ವಿತರಣೆ ತಾತ್ಕಾಲಿಕ ತಡೆ

ಪ್ರವಾಸಿಗರ ದಂಡು ದೊಡ್ಡದಾಗಿರುವ ಕಾರಣ ವೀಸಾ ಆಕಾಂಕ್ಷಿಗಳು ಸಂದರ್ಶನದ ಸಮಯ ಪಡೆಯಲು ಒಂದು ತಿಂಗಳಿಗೂ ಅಧಿಕ ಕಾಲ ಕಾಯಬೇಕಾಗಬಹುದು. ಈ ಪರಿಸ್ಥಿತಿ ಇನ್ನೂ ಕೆಲವು ತಿಂಗಳು ಮುಂದುವರಿಯುವ ಸಾಧ್ಯತೆ ಇದೆ.

Apply for visa early: US Embassy recommends travelers

ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ವೀಸಾಗಳಲ್ಲಿ ಭಾರತದಲ್ಲಿನ ವಲಸೆಯೇತರ ವೀಸಾ ಕೂಡ ಒಂದು. ವರ್ಷಕ್ಕೆ ಒಂದು ಮಿಲಿಯನ್‌ಗೂ ಅಧಿಕ ವಲಸಯೇತರ ವೀಸಾಗಳು ಅನುಮೋದನೆ ಪಡೆದುಕೊಳ್ಳುತ್ತವೆ. ಕಳೆದ ಐದು ವರ್ಷಗಳಲ್ಲಿ ಅಮೆರಿಕಕ್ಕೆ ಪ್ರವಾಸ ಮಾಡಲು ವೀಸಾಕ್ಕೆ ಸಲ್ಲಿಕೆಯಾದ ಬೇಡಿಕೆ ಶೇ 60ರಷ್ಟು ಹೆಚ್ಚಿದೆ.

ಬೇಡಿಕೆಗೆ ಅನುಗುಣವಾಗಿ ಸೇವೆಯನ್ನು ಸುಧಾರಿಸಲು ಅಮೆರಿಕ ರಾಯಭಾರ ಕಚೇರಿ ಮತ್ತು ಅದರ ನಾಲ್ಕು ಕಾನ್ಸುಲೇಟ್‌ಗಳಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಬೇಸಿಗೆ ಕಾಲದಲ್ಲಿ ಪ್ರವಾಸಿಗರು ಅಮೆರಿಕ್ಕೆ ತೆರಳಲು ಮುಗಿಬೀಳುವುದು ಸಹಜ. ಇದರಿಂದ ವೀಸಾ ಸಂದರ್ಶನದ ಸಮಯ ಪಡೆದುಕೊಳ್ಳುವುದು ವಿಳಂಬವಾಗಬಹುದು. ತಡವಾಗಿ ಸಲ್ಲಿಸಿ ಪರದಾಡುವ ಬದಲು ಕೂಡಲೇ ವೀಸಾ ಅರ್ಜಿ ಸಲ್ಲಿಸಿದರೆ ಅನುಕೂಲವಾಗಲಿದೆ ಎಂದು ರಾಯಭಾರ ಕಚೇರಿ ಹೇಳಿದೆ.

ಅರ್ಜಿದಾರರು ಹಗರಣಗಳು ಮತ್ತು ವಂಚನೆಯ ಕುರಿತು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಮೆರಿಕಕ್ಕೆ ವೀಸಾ ಪಡೆಯಲು ಅಧಿಕೃತ ಮಾರ್ಗಗಳಿಂದ ಮಾತ್ರ ಸಾಧ್ಯ. ಪ್ರವಾಸಿಗರು ವೀಸಾ ಅರ್ಜಿ ಸಲ್ಲಿಸಿ ಯು.ಎಸ್. ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್‌ನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಅಥವಾ ಮೊದಲೇ ವೀಸಾ ಹೊಂದಿರುವವರು ಕೆಲವು ನಿರ್ದಿಷ್ಟ ಪ್ರಕ್ರಿಯೆಗಳಿಗೆ ಒಳಪಡಬೇಕು. ವೀಸಾ ಪರಿಷ್ಕರಣೆಯಾದ ಬಳಿಕ ಅವರು ಪ್ರವಾಸ ಕೈಗೊಳ್ಳಲು ಅರ್ಹರಾಗಿರುತ್ತಾರೆ.

ದುಡ್ಡು ನೀಡಿ ವೀಸಾ ವಿನಿಮಯ ಮಾಡಿಕೊಳ್ಳಬಹುದು ಎಂದು ಆಮಿಷವೊಡ್ಡುವವರ ಬಗ್ಗೆ ಜಾಗ್ರತೆ ವಹಿಸಬೇಕು. ಅವರು ವಂಚಿಸಬಹುದು. ಅರ್ಜಿದಾರರು ಜಾಣ್ಮೆ ಪ್ರದರ್ಶಿಸಬೇಕು ಮತ್ತು ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕಚೇರಿ ಸಲಹೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The U.S. Embassy in New Delhi recommends travelers across India apply early for U.S. visas due to heavy demand.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ