Apple iPhone Duo: ₹3 ಲಕ್ಷದ ಮಡಚುವ ಐಫೋನ್‌ನಲ್ಲಿ ಪರದೆ ಬಿರುಕು; ಹೊಸ ಫೋನ್ ಖರೀದಿಸಲ್ಲ ಎಂದ ವಿಜಯ್ ದೇವರಕೊಂಡ!

Apple iPhone Duo: ಆಪಲ್‌ನ ಮೊಟ್ಟ ಮೊದಲ ಮಡಚುವ ಐಫೋನ್ / iPhone Duo ಖರೀದಿ ಮಾಡಿರುವವರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಪಲ್‌ನ ₹3 ಲಕ್ಷದ ಮಡಚುವ ಫೋನ್‌ನಲ್ಲಿ ಯಾರೂ ನಿರೀಕ್ಷಿಸದ ಸಮಸ್ಯೆ ಎದುರಾಗಿದೆ. ಫೋನ್‌ನಲ್ಲಿ ಇದೀಗ ಹೊಸದೊಂದು ಸಮಸ್ಯೆ ಎದುರಾಗಿದೆ. ಇದು ಆಪಲ್‌ನ ಮೊದಲ ಮಡಚುವ ಫೋನ್ ಆಗಿದೆ. ಗ್ರಾಹಕರು iPhone Duo ಖರೀದಿಸಿದ ಕೆಲವೇ ದಿನಗಳಲ್ಲಿ ಈ ಫೋನ್‌ನ ಪರದೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಇದೇ ಸಂದರ್ಭದಲ್ಲಿ ನಟ ವಿಜಯ್ ದೇವರಕೊಂಡ ಅವರು ಹೊಸ ಮಾಡೆಲ್‌ನ ಐಫೋನ್ ಖರೀದಿ ಮಾಡುವುದಿಲ್ಲ ಎನ್ನುವ ವಿಚಾರವು ಸಹ ಇದೀಗ ವೈರಲ್ ಆಗುತ್ತಿದೆ.

ಆಪಲ್‌ನ ಮೊಟ್ಟ ಮೊದಲ ಮಡಚುವ ಐಫೋನ್ iPhone Duo ಖರೀದಿ ಮಾಡಿದ ಹಲವು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಫೋನ್‌ನ ಒಳಗಿನ ಪರದೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಗ್ರಾಹಕರು ಫೋನ್‌ನ ಮಡಚುವ ಭಾಗದ ಬಳಿ ಪರದೆ ಒಡೆದಿರುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡ ಬೆನ್ನಲ್ಲೇ ಆಪಲ್ ಈ ಸಮಸ್ಯೆ ಇರುವುದು ನಿಜ ಎಂದು ಒಪ್ಪಿಕೊಂಡಿದೆ.

Apple iPhone Duo Screen Crack Complaints Emerge 3 Lakh Foldable iPhone Vijay Deverakonda Says Won t Buy New Models

ಈ ಸಮಸ್ಯೆ ಕೆಲವು iPhone Duo ಫೋನ್‌ಗಳಲ್ಲಿ ಮಾತ್ರ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ. ಮುಂದುವರಿದು ಇಂತಹ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ಬದಲಿ ಫೋನ್ ಪಡೆಯಲು AppleCare ಸೇವಾ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದೆ. ಅಕ್ಟೋಬರ್ 23ರಂದು ಆಪಲ್‌ನ ಮೊದಲ ಮಡಚುವ ಫೋನ್ ಮಾರಾಟ ಆರಂಭವಾದ ಕೆಲವೇ ಸಮಯದಲ್ಲಿ ರೆಡಿಟ್‌ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಫೋನ್‌ನಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದೂರುಗಳು ಬರುವುದು ಹೆಚ್ಚಾಗ ತೊಡಗಿವೆ.

ಹಲವು ಫೋನ್‌ಗಳಲ್ಲಿನ ಹಾನಿ ಒಂದೇ ಮಾದರಿಯಲ್ಲಿವೆ. ಪರದೆಯ ಮಡಚುವ ಭಾಗದಲ್ಲಿ ಉದ್ದನೆಯ ಬಿರುಕು ಕಾಣಿಸಿಕೊಂಡಿದೆ. ಅಲ್ಲದೆ ಫೋನ್‌ನ ಬಲಭಾಗದ ಪರದೆಯಲ್ಲಿ ಬಿಳಿ ಗೆರೆ ಕಾಣಿಸಿಕೊಂಡಿದ್ದು, ಆ ಭಾಗದ ಕೆಲವು ಪಿಕ್ಸೆಲ್‌ಗಳು ಕೆಲಸ ಮಾಡುತ್ತಿಲ್ಲ ಎಂದೂ ಗ್ರಾಹಕರು ದೂರಿದ್ದಾರೆ. ಭಾರತದಲ್ಲಿ ₹2,99,900 ಬೆಲೆಯ ಫೋನ್‌ಗೆ ಇಂತಹ ಸಮಸ್ಯೆ ಎದುರಾಗಿರುವುದು ಆರಂಭದಲ್ಲೇ ಭಾರೀ ಹಿನ್ನಡೆಯಾಗಿದೆ.

iPhone Duoಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆಪಲ್ ತಿಳಿಸಿದೆ ಎಂದು ದಿ ವರ್ಜ್ ವರದಿ ಮಾಡಿದೆ. ಫೋನ್‌ನ ಮಡಚುವ ವಿನ್ಯಾಸಕ್ಕೆ ಅನುಗುಣವಾಗಿ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ಡೆವಲಪರ್‌ಗಳು ತ್ವರಿತವಾಗಿ ಕೆಲಸ ಮಾಡುತ್ತಿದೆ ಎಂದೂ ಹೇಳಿದೆ. ಆದರೆ, ಪರದೆಯಲ್ಲಿ ಬಿರುಕು ಕಾಣಿಸಿಕೊಳ್ಳಲು ಕಾರಣವೇನು ಮತ್ತು ಎಷ್ಟು ಫೋನ್‌ಗಳಲ್ಲಿ ಈ ಮಾದರಿಯ ಸಮಸ್ಯೆ ಎದುರಾಗಿದೆ ಎನ್ನುವುದನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ.

ಫೋನ್ ಖರೀದಿ ಮಾಡಿದ ಆರು ಗಂಟೆಗಳಲ್ಲೇ ಪರದೆಗೆ ಹಾನಿ

ಇನ್ನು ಹೊಸ ಐಫೋನ್ ಖರೀದಿ ಮಾಡಿದ ಕೆಲವೇ ಗಂಟೆಗಳಲ್ಲಿ ಫೋನ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಗ್ರಾಹಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಫೋನ್ ಖರೀದಿಸಿದ ಸುಮಾರು ಆರು ಗಂಟೆಗಳಷ್ಟೇ ಆಗಿತ್ತು. ಅದನ್ನು 20 ಬಾರಿಯೂ ತೆರೆದು ಮುಚ್ಚಿರಲಿಲ್ಲ. ಸ್ನೇಹಿತರೊಬ್ಬರಿಗೆ ಫೋನ್ ತೋರಿಸುತ್ತಿದ್ದಾಗ, ಪರದೆಯ ಕೆಳಗೆ ಮಡಚುವ ಭಾಗದ ಬಳಿ ಏನೋ ವಿಚಿತ್ರ ಅನುಭವ ಆಯ್ತು ತೆಗೆದು ನೋಡುವಾಗ ಬಿರುಕು ಬಿಟ್ಟ ಶಬ್ದ ಕೇಳಿಸಿತು ಎಂದಿದ್ದಾರೆ.

ಹೊಸ ಐ -ಫೋನ್ ಖರೀದಿಸಲ್ಲ: ವಿಜಯ್ ದೇವರಕೊಂಡ

ಐಫೋನ್‌ನಲ್ಲಿ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿಯೇ ನಾನು ಹೊಸ ಐಫೋನ್‌ಗಳನ್ನು ಖರೀದಿ ಮಾಡಲ್ಲ ಎನ್ನುವ ನಟ ವಿಜಯ್ ದೇವರಕೊಂಡ ಅವರ ಸಂದರ್ಶನವೊಂದರ ವಿಡಿಯೋ ವೈರಲ್ ಆಗಿದೆ. ಮಾರುಕಟ್ಟೆಗೆ ಬರುವ ಎಲ್ಲ ಹೊಸ ಫೋನ್‌ಗಳನ್ನು ಖರೀದಿ ಮಾಡುವ ಅವಶ್ಯಕತೆ ಇಲ್ಲ. ಈಗಾಗಲೇ ನನ್ನ ಬಳಿ ಇರುವ ಹಳೆಯ ಮಾಡೆಲ್‌ನ ಐಫೋನ್ ಚೆನ್ನಾಗಿದೆ ಎಂದಿದ್ದಾರೆ. ಜನ ವಿವೇಚನೆ ಬಳಸಿ ಹೊಸದನ್ನು ಖರೀದಿ ಮಾಡಬೇಕು. ಮಾರುಕಟ್ಟೆಗೆ ಬಂದ ಕೂಡಲೇ ಆ ವಸ್ತು ನಮ್ಮ ಬಳಿ ಇರಬೇಕು ಅಂತ ನಿರೀಕ್ಷಿಸುವು ತಪ್ಪು ಅಂತಲೂ ನಟ ವಿಜಯ್ ದೇವರಕೊಂಡ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+