ದುಬಾರಿ ಬೆಲೆಯೇ ಮುಳುವಾಯ್ತಾ?: ಐಫೋನ್ 18 ಪ್ರೊ ಬೇಡಿಕೆ ಕುಸಿತ, ಉತ್ಪಾದನೆ ಕಡಿತಗೊಳಿಸಿದ ಆಪಲ್

ಜಾಗತಿಕ ತಂತ್ರಜ್ಞಾನ ದೈತ್ಯ ಆಪಲ್ ಸಂಸ್ಥೆಯ ಇತ್ತೀಚಿನ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾದ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರುಕಟ್ಟೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿವೆ. ಹೊಸ ಮಾದರಿ ಪೋನ್‌ಗಳ ಗಗನಕ್ಕೇರಿದ ಬೆಲೆಯಿಂದಾಗಿ ಗ್ರಾಹಕರಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ, ಕಂಪನಿಯು ತನ್ನ ಬಿಡಿಭಾಗಗಳ ಪೂರೈಕೆದಾರರಿಗೆ ಉತ್ಪಾದನೆಯನ್ನ ಶೇಕಡಾ 15 ರಿಂದ 20ರಷ್ಟು ಕಡಿತಗೊಳಿಸುವಂತೆ ಸೂಚಿಸಿದೆ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ.

Apple Cuts iPhone 18 Pro Production As Demand Drops Due To High Price Full Market Analysis

ಭಾರತದಲ್ಲಿ ಐಫೋನ್ 18 ಪ್ರೊ ಬೆಲೆ ಏರಿಕೆ

ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ 18 ಪ್ರೊ ಆರಂಭಿಕ ಬೆಲೆ ಬರೋಬ್ಬರಿ 1,64,900 ರೂಪಾಯಿಗಳಾಗಿದ್ದರೆ, ಐಫೋನ್ 18 ಪ್ರೊ ಮ್ಯಾಕ್ಸ್ ಬೆಲೆ 1,79,900 ರೂಪಾಯಿಗಳಿಂದ ಶುರುವಾಗುತ್ತದೆ. ಹಿಂದಿನ ಮಾದರಿ ಫೋನ್‌ಗಳಿಗೆ ಹೋಲಿಸಿದರೆ ಜಾಗತಿಕವಾಗಿ ಬೆಲೆಯಲ್ಲಿ 100 ಡಾಲರ್‌ಗಳಷ್ಟು ಹೆಚ್ಚಳವಾಗಿದೆ.

ಪ್ರತಿಯೊಂದು ಅಪ್‌ಗ್ರೇಡ್‌ಗೂ ಇಷ್ಟೊಂದು ಭಾರಿ ಮೊತ್ತವನ್ನ ಖರ್ಜು ಮಾಡಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಯುಬಿಎಸ್ ವಿಶ್ಲೇಷಕರ ಪ್ರಕಾರ, ವಿಶ್ವದ ಸುಮಾರು 30ಕ್ಕೂ ಹೆಚ್ಚು ಪ್ರಮುಖ ಮಾರುಕಟ್ಟೆಗಳಲ್ಲಿ ಐಫೋನ್ 18 ಪ್ರೊ ವಿತರಣೆ ಗಣನೀಯವಾಗಿ ಇಳಿಕೆಯಾಗಿದೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆ ತಣ್ಣಗಾಗಿರುವುದರ ಸ್ಪಷ್ಟ ಸೂಚನೆಯಾಗಿದೆ.

3 ಲಕ್ಷ ರೂ. ಬೆಲೆಯ ಫೋಲ್ಡೇಬಲ್ ಐಫೋನ್ ಡ್ಯುಯೊಗೆ ಎದುರಾಗಲಿದೆಯೇ ಸಂಕಷ್ಟ?

ಇದೇ ವೇಳೆ, ಆಪಲ್ ಪರಿಚಯಿಸಲು ಸಜ್ಜಾಗಿರುವ ಮೊಟ್ಟಮೊದಲ ಫೋಲ್ಡೇಬಲ್ ಸ್ಮಾರ್ಟ್‌ಫೋನ್ ಐಫೋನ್ ಡ್ಯುಯೊ ಭವಿಷ್ಯದ ಮೇಲೂ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. 256 ಜಿಬಿ ಸಾಮರ್ಥ್ಯದ ಈ ಫೋಲ್ಡೇಬಲ್ ಫೋನ್‌ನ ಭಾರತೀಯ ಬೆಲೆ ಅಂದಾಜು 2,99,900 ರೂಪಾಯಿಗಳಾಗಲಿದೆ.

ದೊಡ್ಡ ಪರದೆಯನ್ನ ಇಷ್ಟಪಡುವ ಗ್ರಾಹಕರಿಗೆ ಇದು ಆಕರ್ಷಕ ಎನಿಸಿದರೂ, ಸುಮಾರು 3 ಲಕ್ಷ ರೂಪಾಯಿಗಳ ಬೆಲೆ ಸಾಮಾನ್ಯ ಪ್ರೀಮಿಯಂ ಗ್ರಾಹಕರ ಕೈಗೆಟುಕದ ಮಟ್ಟದಲ್ಲಿದೆ. ಇದರ ಜತೆಗೆ ಫೋಲ್ಡಿಂಗ್ ಡಿಸ್ಪ್ಲೇ ತಯಾರಿಕೆಯ ಸಂಕೀರ್ಣತೆಯೂ ಆಪಲ್ ಎದುರಿಗಿರುವ ಮತ್ತೊಂದು ದೊಡ್ಡ ಸವಾಲಾಗಿದೆ.

ಸ್ಮಾರ್ಟ್‌ಫೋನ್ ಬೆಲೆ ಏರಿಕೆ: ಕಾರಣಗಳೇನು?

ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಡೇಟಾ ಸೆಂಟರ್‌ಗಳ ವಿಸ್ತರಣೆಯಿಂದಾಗಿ ಜಾಗತಿಕವಾಗಿ ಮೆಮೊರಿ ಚಿಪ್‌ಗಳ ಬೆಲೆ ತೀವ್ರವಾಗಿ ಏರಿಕೆಯಾಗುತ್ತಿದೆ. ಇದರ ನೇರ ಪರಿಣಾಮ ಸ್ಮಾರ್ಟ್‌ಫೋನ್ ತಯಾರಕರ ಮೇಲೆ ಬಿದ್ದಿದೆ. ಐಡಿಸಿ ವರದಿಯ ಪ್ರಕಾರ, ಜಾಗತಿಕ ಸ್ಮಾರ್ಟ್‌ಫೋನ್ ರವಾನೆ ಶೇಕಡಾ 16.7 ರಷ್ಟು ಕುಸಿಯುವ ಸಾಧ್ಯತೆಯಿದ್ದು, ಸರಾಸರಿ ಮಾರಾಟ ಬೆಲೆ ಶೇಕಡಾ 27.6 ರಷ್ಟು ಹೆಚ್ಚಾಗಲಿದೆ.

ಭಾರತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಹೊಸ ಐಫೋನ್ ಖರೀದಿಗೆ ಇದು ಸಕಾಲವೇ?

ಆಪಲ್ ಸಂಸ್ಥೆ ಉತ್ಪಾದನೆ ಕಡಿತಗೊಳಿಸಿದ ತಕ್ಷಣ ಫೋನ್‌ ಬೆಲೆಗಳು ಕಡಿಮೆಯಾಗುತ್ತವೆ ಎಂದು ಭಾವಿಸುವುದು ತಪ್ಪು. ಪ್ರಸ್ತುತ ಫೋನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ ತಕ್ಷಣವೇ ಅಪ್‌ಗ್ರೇಡ್ ಮಾಡುವ ಬದಲು, ಮುಂಬರುವ ಹಬ್ಬದ ರಿಯಾಯಿತಿಗಳು ಅಥವಾ ಬೆಲೆ ಇಳಿಕೆಯನ್ನ ಕಾದು ನೋಡುವುದು ಜಾಣತನದ ಕ್ರಮವಾಗಿದೆ ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+