Get Updates
Get notified of breaking news, exclusive insights, and must-see stories!

TTD Chairman: ಕ್ರೈಸ್ತ ಧರ್ಮ ನಂಬಿಕೆಯ ವ್ಯಕ್ತಿ ತಿರುಪತಿ ಬಾಲಾಜಿ ದೇವಾಲಯದ ಅಧ್ಯಕ್ಷ? Fact Check

ಅಮರಾವತಿ, ಆಗಸ್ಟ್ 13: ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರು ಹಿಂದೂ ವಿರೋಧಿ ಎಂದು ಅಲ್ಲಿನ ವಿರೋಧ ಪಕ್ಷಗಳು ಆವಾಗಾವಾಗ ಸಿಎಂ ವಿರುದ್ದ ಟೀಕಾ ಪ್ರಹಾರ ನಡೆಸುತ್ತಲೇ ಬರುತ್ತಿದ್ದಾರೆ. ಈಗ, ಮತ್ತೊಂದು ಪ್ರಮುಖ ನಿರ್ಧಾರವೊಂದು ಜಗನ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ವಿಶ್ವದ ಶ್ರೀಮಂತ ದೇವಾಲಯ, ಕೋಟ್ಯಾಂತರ ಹಿಂದೂಗಳ ಆರಾಧ್ಯ ದೈವ ತಿರುಪತಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರ ನೇಮಕ ವಿಚಾರ ವಿಪಕ್ಷಗಳ ಮತ್ತು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ. ಟಿಟಿಡಿ ( Tirumala Tirupati Devasthanams) ಅಧ್ಯಕ್ಷರಾಗಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕರುಣಾಕರ ರೆಡ್ಡಿ ಭುಮನ ಅಧಿಕಾರ ಸ್ವೀಕರಿಸಿದ್ದಾರೆ.

AP Opposition Parties Criticised Appointment of TTD Chairman Who Had Christian leanings

ಚಿತ್ತೂರು ಜಿಲ್ಲೆ, ತಿರುಪತಿಯ ಶಾಸಕರಾಗಿರುವ ಕರುಣಾಕರ ರೆಡ್ಡಿಯವರು ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆಯನ್ನು ಹೊಂದಿದವರು. ಹಿಂದೂಗಳ ಧಾರ್ಮಿಕ ಭಾವನೆಯನ್ನು ಯಾಕೆ ಜಗನ್ ಸರ್ಕಾರ ಅವಮಾನಿಸುತ್ತಿದೆ ಎಂದು ತೆಲುಗುದೇಶಂ ಪಕ್ಷದ ನಾಯಕರು ಸಿಎಂ ವಿರುದ್ದ ತಿರುಗಿ ಬಿದ್ದಿದ್ದಾರೆ.

ವೈ.ವಿ.ಸುಬ್ಬಾರೆಡ್ಡಿಯವರ ಅಧಿಕಾರದ ಅವಧಿ ಮುಗಿದ ಹಿನ್ನಲೆಯಲ್ಲಿ ದೇಶದ ಅತ್ಯಂತ ಆಯಕಟ್ಟಿನ ಆಡಳಿತ ಮಂಡಳಿ ಎಂದೇ ಬಿಂಬಿತವಾಗಿರುವ ಟಿಟಿಡಿಗೆ ಕರುಣಾಕರ ರೆಡ್ಡಿಯವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೇ ಕಳೆದ ಗುರುವಾರ (ಆ 10) ಕರುಣಾಕರ ರೆಡ್ಡಿಯವರು ಅಧಿಕಾರ ಸ್ವೀಕರಿಸಿದ್ದರು. ದೇವಾಲಯದ ಅರ್ಚಕರು ರೆಡ್ಡಿ ಮತ್ತವರ ಕುಟುಂಬದವರಿಗೆ ವೇದ ಶಿರ್ವಾಚನಂ ಪ್ರೋಕ್ಷಿಸಿ ಸ್ವಾಗತಿಸಿದ್ದರು.

ತಿರುಪತಿ ಭಾಗದಲ್ಲಿ ಮತಾಂತರ ಪ್ರಕ್ರಿಯೆ ಜೋರಾಗಿ ನಡೆಯುತ್ತಿದೆ ಎನ್ನುವ ಆರೋಪದ ನಡುವೆ ಕರುಣಾಕರ ರೆಡ್ಡಿ ಎರಡನೇ ಬಾರಿಗೆ ಟಿಟಿಡಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ. ಈ ಹಿಂದೆ ವೈ.ಎಸ್.ರಾಜಶೇಖರ ರೆಡ್ಡಿ ಸಿಎಂ ಆಗಿದ್ದಾಗಲೂ ಇವರು ಮಂಡಳಿಯ ಅಧ್ಯಕ್ಷರಾಗಿದ್ದರು. ಇವರ ಆಯ್ಕೆ ವಿರೋಧಿಸಿ ಆನ್ಲೈನ್ ಪಿಟಿಷನ್ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. https://chng.it/XS4sKZ7K

AP Opposition Parties Criticised Appointment of TTD Chairman Who Had Christian leanings

ಹಿಂದೂ ಧರ್ಮದ ಮೇಲೆ ನಂಬಿಕೆಯಿಲ್ಲದ ವ್ಯಕ್ತಿ

"ಹಿಂದೂ ಧರ್ಮದ ಮೇಲೆ ನಂಬಿಕೆಯಿಲ್ಲದ ವ್ಯಕ್ತಿಯನ್ನು ಟಿಟಿಡಿ ಅಧ್ಯಕ್ಷರಾಗಿ ಆಯ್ಕೆ ಮಾಡುವುದು ಎಷ್ಟು ಸರಿ? ಕರುಣಾಕರ ರೆಡ್ಡಿಯವರು ಕ್ರಿಶ್ಚಿಯನ್ ಧರ್ಮದ ಮೇಲೆ ನಂಬಿಕೆಯಿಟ್ಟವರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚೆಗೆ ಅವರ ಮನೆಯಲ್ಲಿ ವಿವಾಹ ಸಮಾರಂಭವೊಂದು ಸಂಪೂರ್ಣವಾಗಿ ಕ್ರೈಸ್ತ ಧರ್ಮದಂತೆ ನಡೆದಿತ್ತು"ಎಂದು ತೆಲುಗುದೇಶಂ ಪಕ್ಷದ ರಾಜ್ಯ ಕಾರ್ಯದರ್ಶಿ ಬೂಚಿ ರಾಮಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ. ಹಾಗಾದರೆ, ಅವರ ಚುನಾವಣಾ ಅಫಿಡವಿಟ್ ನಲ್ಲಿ ಏನಿದೆ?

ಕರುಣಾಕರ ರೆಡ್ಡಿಯವರು ನಮೂದಿಸಿಲ್ಲ

ಕರುಣಾಕರ ರೆಡ್ಡಿಯವರು ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು, ಸಾಮಾನ್ಯವಾಗಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಮಾತ್ರ ಜಾತಿಪತ್ರವನ್ನು ನಾಮಿನೇಶನ್ ಅಫಿಡವಿಟ್ ನಲ್ಲಿ ಸಲ್ಲಿಸಬೇಕು. ಮೀಸಲು ಕ್ಷೇತ್ರವಲ್ಲದೇ ಇದ್ದರೆ ಅಭ್ಯರ್ಥಿಗಳು ಇದನ್ನು ಸಲ್ಲಿಸಲು ಹೋಗುವುದಿಲ್ಲ. ಹಾಗಾಗಿ, ಅಫಿಡವಿಟ್ ನಲ್ಲಿ ಜಾತಿಯನ್ನು ಕರುಣಾಕರ ರೆಡ್ಡಿಯವರು ನಮೂದಿಸಿಲ್ಲ ಎನ್ನುವುದು ಖಾತ್ರಿಯಾಗಿದೆ.

ರ‍್ಯಾಡಿಶನ್ ಸ್ಟೂಡೆಂಟ್ ಯೂನಿಯನ್ ಸಂಘಟನೆ

ಟಿಟಿಡಿಗೆ ಸಂಬಂಧಿಸಿದ ಹಲವು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಕರುಣಾಕರ ರೆಡ್ಡಿ ಪಾಲ್ಗೊಂಡ ಉದಾಹರಣೆಗಳಿವೆ ಎಂದು ಹೇಳಲಾಗುತ್ತಿದೆ. ಕಮ್ಯೂನಿಸ್ಟ್ ಹಿನ್ನಲೆಯ ಮತ್ತು ದೇವರು ದಿಂಡರನ್ನು ನಂಬದ ರ‍್ಯಾಡಿಶನ್ ಸ್ಟೂಡೆಂಟ್ ಯೂನಿಯನ್ ಸಂಘಟನೆಯ ಸದಸ್ಯರೂ ಕರುಣಾಕರ ರೆಡ್ಡಿ ಆಗಿದ್ದರು ಎನ್ನುವ ಇನ್ನೊಂದು ಆರೋಪವೂ ಇವರ ಮೇಲಿದೆ. (Photo Courtesy: The Hindu)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+