ಮೋದಿ ಪರ VS ವಿರೋಧಿ ಸಮರ: ನಾಗರಿಕ ಸೇವಾ ಅಧಿಕಾರಿಗಳ ವಾಕ್ಸಮರ

ನವದೆಹಲಿ, ಮೇ 1: ದೇಶದಲ್ಲಿ ಒಂದೆಡೆ ಪ್ರಧಾನ ಮಂತ್ರಿ ಮೋದಿ ವಿರುದ್ಧವಾದ ಅಲೆ ಇದ್ದರೆ, ಇನ್ನೊಂದೆಡೆ ಪ್ರಧಾನಿ ಮೋದಿ ಪರವಾದ ಗುಂಪು ಸರ್ಕಾರವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಖಂಡನೆ ಮಾಡಿ ಮಾಜಿ ನಾಗರಿಕ ಸೇವಾ ಅಧಿಕಾರಿಗಳ ಗುಂಪು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರೆ, ಇನ್ನೊಂದೆಡೆ ಮಾಜಿ ನಾಗರಿಕ ಸೇವಾ ಅಧಿಕಾರಿಗಳ ಮತ್ತೊಂದು ಗುಂಪು ಪ್ರಧಾನಿ ಮೋದಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

108 ಮಾಜಿ ಅಧಿಕಾರಶಾಹಿಗಳ ಗುಂಪು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪುಟಗಳ ಪತ್ರವನ್ನು ಬರೆದಿದ್ದಾರೆ. ಹಲವಾರು "ಬಿಜೆಪಿ ಆಡಳಿತದ ರಾಜ್ಯಗಳಲ್ಲಿ" ಅಲ್ಪಸಂಖ್ಯಾತ ಸಮುದಾಯಗಳ ಮೇಲೆ, ವಿಶೇಷವಾಗಿ ಮುಸ್ಲಿಮರ ವಿರುದ್ಧದ ಹಿಂಸಾಚಾರ ಹೆಚ್ಚಾಗುತ್ತಿದೆ ಎಂದು ಈ ಮಾಜಿ ನಾಗರಿಕ ಸೇವಾ ಅಧಿಕಾರಿಗಳ ಗುಂಪು ಕಳವಳ ವ್ಯಕ್ತಪಡಿಸಿದ್ದಾರೆ. ಎಂಟು ಮಾಜಿ ನ್ಯಾಯಾಧೀಶರು, 97 ಮಾಜಿ ಅಧಿಕಾರಿಗಳು ಮತ್ತು ಸಶಸ್ತ್ರ ಪಡೆಗಳ 92 ನಿವೃತ್ತ ಅಧಿಕಾರಿಗಳನ್ನು ಒಳಗೊಂಡ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರ ಬರೆದಿದ್ದಾರೆ.

ಇದು ಸಾಂವಿಧಾನಿಕ ರಚನೆಗೆ ಅಪಾಯಕಾರಿ. ಈ "ಬಿಜೆಪಿ ಆಡಳಿತದ ರಾಜ್ಯಗಳಲ್ಲಿ" ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯದಲ್ಲಿ ರಾಜ್ಯ ಸರ್ಕಾರಗಳು ಕೂಡಾ ಸಂಪೂರ್ಣ ಭಾಗಿದಾರರಾಗಿರುವಂತೆ ತೋರುತ್ತಿದೆ. ಇದು ಬಹಳ ಆತಂಕಕಾರಿ ಬೆಳವಣಿಗೆ ಎಂದು ಪ್ರಧಾನಿ ಮೋದಿಗೆ ಬರೆದ ಬಹಿರಂಗ ಪತ್ರದಲ್ಲಿ 108 ಮಾಜಿ ಅಧಿಕಾರಶಾಹಿಗಳ ಗುಂಪು ಹೇಳಿದೆ.

 ಮೋದಿ ವಿರೋಧಿ ಅಲೆ: ಪತ್ರದಲ್ಲಿ ಏನಿದೆ, ಯಾರು ಸಹಿ?

ಮೋದಿ ವಿರೋಧಿ ಅಲೆ: ಪತ್ರದಲ್ಲಿ ಏನಿದೆ, ಯಾರು ಸಹಿ?

"ನಾವು ಮಾಜಿ ನಾಗರಿಕ ಸೇವಾ ಅಧಿಕಾರಿಗಳಾಗಿ ನಾವು ಸಾಮಾನ್ಯವಾಗಿ ಅಂತಹ ತೀವ್ರ ಪದಗಳಲ್ಲಿ ನಮ್ಮ ಆತಂಕವನ್ನು ವ್ಯಕ್ತಪಡಿಸುವ ರೂಢಿ ನಮಗಿಲ್ಲ. ಆದರೆ ನಮ್ಮ ಸ್ಥಾಪಕ ಪಿತಾಮಹರು ರಚಿಸಿದ ಸಾಂವಿಧಾನಿಕ ರಚನೆಯು ನಾಶವಾಗುತ್ತಿರುವ ನಮಗೆ ಆತಂಕ ಹೆಚ್ಚಾಗಿದೆ. ಅದು ಕೂಡಾ ವೇಗವಾಗಿ ಸಾಂವಿಧಾನಿಕ ಅಂಶಗಳು ನಾಶವಾಗುತ್ತಿರುವಾಗ ನಮ್ಮ ನಮ್ಮ ಕೋಪ ಮತ್ತು ದುಃಖ ನಾವು ಮಾತನಾಡುವಂತೆ ಮಾಡಿದೆ," ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ. ಜೂಲಿಯೊ ರಿಬೇರೊ, ರವಿ ಬುದ್ಧಿರಾಜ, ವಿ ಪಿ ರಾಜಾ, ಮೀರನ್ ಬೊರ್ವಾಂಕರ್ ಮತ್ತು ಅಣ್ಣಾ ದಾನಿ ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ. ಸಿಕ್ಕಿಂ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪರ್ಮೋದ್ ಕೊಹ್ಲಿ, ಮಾಜಿ ವಿದೇಶಾಂಗ ಕಾರ್ಯದರ್ಶಿಗಳಾದ ಕನ್ವಾಲ್ ಸಿಬಲ್ ಮತ್ತು ಶಶಾಂಕ್, 2014 ರಲ್ಲಿ ಬಿಜೆಪಿಗೆ ಸೇರಿದ್ದ ಮಾಜಿ ಆರ್ & ಎಡಬ್ಲ್ಯು ಮುಖ್ಯಸ್ಥ ಸಂಜೀವ್ ತ್ರಿಪಾಠಿ, ಮಹಾರಾಷ್ಟ್ರದ ಮಾಜಿ ಡಿಜಿಪಿ ಪ್ರವೀಣ್ ದೀಕ್ಷಿತ್, ದೆಹಲಿಯ ಮಾಜಿ ಪೊಲೀಸ್ ಕಮಿಷನರ್ ಬಿಎಸ್ ಬಸ್ಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.

 ಯಾವೆಲ್ಲಾ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ?

ಯಾವೆಲ್ಲಾ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ?

ಇನ್ನು ಈ ಪತ್ರದಲ್ಲಿ ಅಧಿಕಾರಿಗಳು ಯಾವೆಲ್ಲಾ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಹೆಚ್ಚಾಗಿದೆ ಎಂಬುವುದನ್ನು ಉಲ್ಲೇಖ ಮಾಡಿದ್ದಾರೆ. "ಅಸ್ಸಾಂ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್, ಭಾರತೀಯ ಜನತಾ ಪಾರ್ಟಿಯ ಎಲ್ಲಾ ರಾಜ್ಯಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಅಲ್ಪಸಂಖ್ಯಾತರ ಮೇಲೆ ದಾಳಿಯು ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಮುಸ್ಲಿಮರ ವಿರುದ್ಧ ದ್ವೇಷ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ರಾಜ್ಯಗಳ ಪೈಕಿ ದೆಹಲಿ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು ಬಿಜೆಪಿ ಆಡಳಿತವಿರುವ ರಾಜ್ಯಗಳು ಆಗಿದೆ. ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಪೊಲೀಸರನ್ನು ನಿಯಂತ್ರಿಸುತ್ತದೆ. ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವು ಹೊಸ ಭಯಾನಕ ಆಯಾಮವನ್ನು ಪಡೆದುಕೊಂಡಿದೆ," ಎಂದು ಮಂಗಳವಾರ ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

 ಪತ್ರವನ್ನು ಪ್ರಶ್ನಿಸಿದ ಇತರ ಅಧಿಕಾರಿಗಳ ಗುಂಪು

ಪತ್ರವನ್ನು ಪ್ರಶ್ನಿಸಿದ ಇತರ ಅಧಿಕಾರಿಗಳ ಗುಂಪು

ಅಲ್ಪಸಂಖ್ಯಾತರ ವಿರುದ್ಧದ ದ್ವೇಷದ ಬಗ್ಗೆ ಪ್ರಧಾನಿ ಮೋದಿಗೆ ಮಾಜಿ ಅಧಿಕಾರಿಗಳು ಬರೆದಿರುವ ಪತ್ರವನ್ನು, ಮಾಜಿ ಅಧಿಕಾರಿಗಳ ಇನ್ನೊಂದು ಗುಂಪು ವಿರೋಧ ಮಾಡಿದೆ. ಮೋದಿ ಸರ್ಕಾರದ ಪರವಾದ ಮಾಜಿ ಅಧಿಕಾರಿಗಳ ಈ ಗುಂಪು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನವನ್ನು ಸೆಳೆಯಲು ಈ ರೀತಿ ಬಹಿರಂಗ ಪತ್ರ ಬರೆಯಲಾಗಿದೆ ಎಂದು ಆರೋಪ ಮಾಡಿದ್ದಾರೆ. ನಮ್ಮ ಗೆಳೆಯರು ರಾಜಕೀಯ ಪ್ರೇರಿತವಾದ ಪತ್ರವನ್ನು ಬರೆದಿದ್ದಾರೆ ಎಂದು ದೂರಿದ್ದಾರೆ. "ಈಗ ಅವರನ್ನು ಕೆರಳಿಸುವ ಕೆಲವು ಸಮಸ್ಯೆಗಳು ನಮ್ಮ ದೇಶದಲ್ಲಿ ಇದೆ. ಅದು ವಿಭಜನೆ, ಜಿಹಾದಿ ಭಯೋತ್ಪಾದನೆ ಮತ್ತು ಜಾತ್ಯತೀತತೆ ಎಂಬ ಹೆಸರಿನಲ್ಲಿದೆ. ಈ ನಿವೃತ್ತ ಪೌರಕಾರ್ಮಿಕರು ಕಚೇರಿಯಿಂದ ಹೊರಗಿರುವಾಗ ಈಗ ಎದುರಿಸಲು ಬಯಸುವ ಈ ದುಷ್ಪರಿಣಾಮಗಳನ್ನು ಪರಿಹರಿಸುವಲ್ಲಿ ತಮ್ಮದೇ ಆದ ವೈಫಲ್ಯದ ಬಗ್ಗೆ ಸ್ವಲ್ಪ 'ಆತ್ಮಾವಲೋಕನ ಮಾಡಿಕೊಳ್ಳಬೇಕು," ಎಂದು ಈ ಸರ್ಕಾರವನ್ನು ಸಮರ್ಥಿಸಿರುವ ಗುಂಪು ಹೇಳಿದೆ.

 ಸರ್ಕಾರವನ್ನು ಸಮರ್ಥಿಸಿಕೊಂಡ ಗುಂಪು

ಸರ್ಕಾರವನ್ನು ಸಮರ್ಥಿಸಿಕೊಂಡ ಗುಂಪು

"ಇತ್ತೀಚಿನ ರಾಜ್ಯ ಚುನಾವಣೆಗಳು ತೋರಿಸಿದಂತೆ ಸಾರ್ವಜನಿಕ ಅಭಿಪ್ರಾಯವು ಪ್ರಧಾನಿ ಮೋದಿಯವರ ಪರವಾಗಿ ಈಗಲೂ ಗಟ್ಟಿಯಾಗಿ ಉಳಿದಿದೆ. ಈ ಬಗ್ಗೆ ಹತಾಶೆಯನ್ನು ಹೊರಹಾಕಲು ಈ ಅಧಿಕಾರಿಗಳಿಗೆ ಒಂದು ಮಾರ್ಗವಾಗಿದೆ. ಅವರ ಕೋಪ ಮತ್ತು ಸಂಕಟವು ಕೇವಲ ಉತ್ತಮ ಸಂಕೇತವೇನಲ್ಲ. ಸರ್ಕಾರದ ವಿರುದ್ಧ ದ್ವೇಷವನ್ನು ಹುಟ್ಟುಹಾಕಲು ಈ ಪ್ರಯತ್ನವನ್ನು ಅವರು ಮಾಡಿದ್ದಾರೆ," ಎಂದು ಇನ್ನೊಂದು ಗುಂಪು ದೂರಿದೆ. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ನಡೆದ ರಾಜಕೀಯ ಹಿಂಸಾಚಾರವನ್ನು ಉಲ್ಲೇಖ ಮಾಡಿದೆ. ಈ ವೇಳೆಯೇ ಸರ್ಕಾರದ ವಿದೇಶಾಂಗ ನೀತಿಯನ್ನು ಸಮರ್ಥನೆ ಮಾಡಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+