• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಮೇಲೆ ಮತ್ತೊಂದು ದಾಳಿಗೆ ಸಜ್ಜಾಗಿದ್ದಾರೆ ಪಾಕ್‌ ಉಗ್ರರು!

|
   Pulwama : ಮತ್ತೊಂದು ದಾಳಿಯನ್ನ ಎದುರಿಸಲು ಸಿದ್ಧವಾಗಬೇಕು ಭಾರತ ಸೇನೆ

   ನವದೆಹಲಿ, ಫೆಬ್ರವರಿ 05: ಕೆಲವು ದಿನಗಳ ಹಿಂದಷ್ಟೆ ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿ ನಲವತ್ತು ಸೈನಿಕರ ಬಲಿ ಪಡೆದಿರುವ ಉಗ್ರರು ಮತ್ತೊಂದು ದೊಡ್ಡ ಮಟ್ಟದ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ.

   ಚೀನಾ ಗಡಿಯಲ್ಲಿರುವ ಭಾರತದ 'ಟಿಬೆಟ್' ಸೇನೆ ಬಗ್ಗೆ ನಿಮಗೆಷ್ಟು ಗೊತ್ತು?

   ಪುಲ್ವಾಮಾ ದಾಳಿಗೆ ಭಾರತೀಯ ಸೇನೆಯು ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಉಗ್ರರ ವಿರುದ್ಧ ಹಾಗೂ ಉಗ್ರರಿಗೆ ಬೆಂಬಲ ನೀಡುವ ದೇಶದ ವಿರುದ್ಧ ಸರ್ಕಾರ ಹೋರಾಟ ಪ್ರಾರಂಭಿಸಿದ್ದರೂ ಸಹಿತ ಉಗ್ರರು ತಣ್ಣಗಾದಂತೆ ಕಾಣುತ್ತಿಲ್ಲ.

   ಪಾಕ್, PoK ಯಲ್ಲಿ 16 ಉಗ್ರನೆಲೆ ಇನ್ನೂ ಜೀವಂತ: ಗುಪ್ತಚರ ಇಲಾಖೆ

   ಗುಪ್ತಚರ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಮತ್ತೊಂದು ದೊಡ್ಡ ದಾಳಿಗೆ ಪಾಕಿಸ್ತಾನ ಮೂಲದ ಉಗ್ರರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

   ಪಾಕಿಸ್ತಾನವನ್ನು ಹದ ಹೊಡೆದ ಭಾರತದ ಬಳಿ ಉಗ್ರರ ಹೆಣ ಕೇಳ್ತಾರಲ್ಲ!

   ಈ ದಾಳಿಯನ್ನು ಬಾಲಾಕೋಟ್‌ ಮೇಲೆ ಭಾರತದ ವಾಯುಸೇನೆ ಮಾಡಿದ ದಾಳಿಗೆ ಪ್ರತಿಕಾರವಾಗಿ ಮಾಡಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿದ ಭಾರತದ ವಿರುದ್ಧ ಪ್ರತೀಕಾರಕ್ಕೆಂದು ಉಗ್ರರು ದೊಡ್ಡ ಮಟ್ಟದ ಯೋಜನೆ ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.

   ಭಾರತವು ರಾಜತಾಂತ್ರಿಕ ನೀತಿಗಳನ್ನು ಬಳಸಿ ಉಗ್ರರ ವಿರುದ್ಧ ಪಾಕಿಸ್ತಾನವು ಖಡ್ಡಾಯವಾಗಿ ಕ್ರಮ ತೆಗೆದುಕೊಳ್ಳುವಂತೆ ಸತತ ಒತ್ತಡ ಹೇರುತ್ತಿದೆ. ಆದರೆ ಮತ್ತೊಂದು ಉಗ್ರರ ದಾಳಿ ಭಾರತದ ಮೇಲೆ ನಡೆದರೆ ಈ ಹಿಂದಿನ ಪ್ರತ್ಯುತ್ತರಗಳಿಗಿಂತಲೂ ತೀಕ್ಷಣವಾದ ಪ್ರತ್ಯುತ್ತರವನ್ನು ಭಾರತೀಯ ಸೇನೆ ನೀಡಲು ಸಿದ್ಧವಿದೆ ಎನ್ನಲಾಗಿದೆ.

   English summary
   Pakistan origin Terrorists planing to attack bigger level says sources. India is ready to face and took take highly strict action against Pakistan terrorists.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X