ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್ಮಾರ್ ದೇಶದೊಳಗೆ ಭಾರತೀಯ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಭಾರತಕ್ಕೆ ತಲೆನೋವಾಗಿದ್ದ ನಾಗಾ ಬಂಡುಕೋರರ ಹುಟ್ಟಗಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಬುಧವಾರ ಬೆಳಗಿನ ಜಾವ 4:45 ರ ಸುಮಾರಿಗೆ ಮ್ಯಾನ್ಮಾರ್ ದೇಶದ ಗಡಿಯೊಳಗೆ ಹೋಗಿ ನಾಗಾ ಬಂಡುಕೋರರ ಅಡಗುದಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು ತಡವಾಗಿ ವರದಿಯಾಗಿದೆ.

ಸರ್ಜಿಕಲ್ ಸ್ಟ್ರೈಕಿಗಿಂತಲೂ ಉತ್ತಮ ಆಯ್ಕೆ ನಮ್ಮಲ್ಲಿದೆ: ಪಾಕಿಸ್ತಾನಕ್ಕೆ ಎಚ್ಚರಿಕೆಸರ್ಜಿಕಲ್ ಸ್ಟ್ರೈಕಿಗಿಂತಲೂ ಉತ್ತಮ ಆಯ್ಕೆ ನಮ್ಮಲ್ಲಿದೆ: ಪಾಕಿಸ್ತಾನಕ್ಕೆ ಎಚ್ಚರಿಕೆ

ಬುಧವಾರ ಮಧ್ಯಾಹ್ನದ ವೇಳೆಗೆ ಭಾರತೀಯ ಸೇನೆಯೇ ಖುದ್ದಾಗಿ ಈ ವಿಚಾರವನ್ನು ಪ್ರಕಟಿಸಿದೆ.

ಈ ಘಟನೆಯಲ್ಲಿ ಬಂಡುಕೋರರ ಸಂಘಟನೆಯಾದ ಎನ್ಎಸ್ ಸಿಎನ್ ಗೆ ಸೇರಿದ ಹಲವಾರು ಉಗ್ರರು ಗಾಯಗೊಂಡಿದ್ದಾರೆ ಅಥವಾ ಅಸುನೀಗಿದ್ದು ಭಾರತೀಯ ಪಾಳಯದಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಸೇನೆಯು ಸ್ಪಷ್ಟಪಡಸಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Another surgical strike by Indian Army; this time its inside Mymnar

ಬೆಳಗಿನ ಜಾವ ಅರುಣಾಚಲ ಪ್ರದೇಶದಿಂದ ಹೊರಟ ಸೈನ್ಯ, ಮ್ಯಾನ್ಮಾರ್ ಗಡಿಯೊಳಗೆ ಪ್ರವೇಶ ಪಡೆಯಿತು. ಗಡಿಯಿಂದ ಸುಮಾರು 10-15 ಕಿ.ಮೀ ದೂರದಲ್ಲಿರುವ, ನಾಗಾ ಉಗ್ರರ ಹಿಡಿತದಲ್ಲಿರುವ ಲಂಗ್ಖು ಎಂಬ ಹಳ್ಳಿಯಲ್ಲಿ ಇದ್ದ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಆದರೆ, ಅಷ್ಟರಲ್ಲಿ ಎಚ್ಚೆತ್ತ ನಾಗಾ ಬಂಡುಕೋರರ ಗುಂಪೊಂದು ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಲು ಮುಂದಾದಾಗ, ಪ್ರತ್ಯುತ್ತವಾಗಿ ಭಾರತೀಯ ಸೈನಿಕರೂ ಗುಂಡಿನ ದಾಳಿ ನಡೆಸಿದರು.

'ಕೆಲ್ಸಕ್ಕೆ ಮುಂಚೆ ಮಾತು ಬೇಡ, ಪಾಕ್ ಗೆ ಪೆಟ್ಟು ಕೊಟ್ಟು, ಸುದ್ದಿ ಹೇಳ್ತೀವಿ''ಕೆಲ್ಸಕ್ಕೆ ಮುಂಚೆ ಮಾತು ಬೇಡ, ಪಾಕ್ ಗೆ ಪೆಟ್ಟು ಕೊಟ್ಟು, ಸುದ್ದಿ ಹೇಳ್ತೀವಿ'

ಹೀಗಾಗಿ, ಸರ್ಜಿಕಲ್ ಸ್ಟ್ರೈಕ್ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸಾಗಿಲ್ಲವಾದರೂ, ನಾಗಾ ಬಂಡುಕೋರರ ನೆಲದಲ್ಲಿ ಕಾಲಿರಿಸಿ ಅವರಿಗೆ ಬಿಸಿ ಮುಟ್ಟಿಸಿ ಬಂದಿರುವುದಾಗಿ ಭಾರತೀಯ ಸೇನೆಯು ಹೇಳಿದೆ. ಈ ಘಟನೆಯಲ್ಲಿ ಮೂವರು ಭಾರತೀಯ ಯೋಧರು ಸಾವನ್ನಪ್ಪಿರುವುದಾಗಿ ಬಂದಿರುವ ಕೆಲ ಮಾಧ್ಯಮಗಳ ವರದಿಗಳನ್ನು ಸೇನೆ ತಳ್ಳಿಹಾಕಿದೆ.

English summary
Firefight occurred along Indo-Myanmar border between Indian Army and Naga activists inside the Myanmar. Heavy casualties reportedly inflicted on NSCN(K) cadre. No casualties suffered by Indian Security Force, says the Army sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X