ಪಂಜಾಬ್: ಮತ್ತೊಂದು ಪಾಕಿಸ್ತಾನದ ಡ್ರೋನ್ ಪತ್ತೆ, ಹೊಡೆದುರುಳಿಸಿದ ಸೇನೆ

ನವದೆಹಲಿ, ಡಿ. 22: ಪದೇ ಪದೇ ಪಾಕಿಸ್ತಾನದ ಡ್ರೋನ್‌ಗಳು ದೇಶದೊಳಗೆ ನುಗ್ಗಲು ಪ್ರಯತ್ನಿಸುತ್ತಲೇ ಇವೆ. ಇವುಗಳನ್ನು ವಿಫಲಗೊಳಿಸುವಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾರ್ಯನಿರತವಾಗಿದೆ. ಈಗ ಮತ್ತೊಮ್ಮೆ ಪಂಜಾಬ್‌ನ ತರ್ನ್ ತರನ್ ಜಿಲ್ಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಮತ್ತೊಂದು ಡ್ರೋನ್ ಒಳನುಗ್ಗುವ ಪ್ರಯತ್ನ ಮಾಡಿದ್ದು, ಆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಬಿಎಸ್‌ಎಫ್ ಹೇಳಿಕೆ ತಿಳಿಸಿದೆ.

ಫಿರೋಜ್‌ಪುರ ಸೆಕ್ಟರ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಈ ಘಟನೆ ನಡೆದಿದೆ. ತರ್ನ್ ತರನ್ ಜಿಲ್ಲೆಯ ಫಿರೋಜ್‌ಪುರ ಸೆಕ್ಟರ್‌ನ ಗಡಿ ಹೊರಠಾಣೆ ಹರ್ಭಜನ್‌ನ ವ್ಯಾಪ್ತಿ ಪ್ರದೇಶದಲ್ಲಿ ಪಾಕಿಸ್ತಾನದಿಂದ ಡ್ರೋನ್ ಒಳನುಗ್ಗುತ್ತಿರುವುದನ್ನು ಬಿಎಸ್‌ಎಫ್ ಪಡೆಗಳು ಪತ್ತೆ ಮಾಡಿದ್ದವು. ಅದಕ್ಕೆ ತಕ್ಷಣ ಗುಂಡು ಹೊಡೆದು ಉರುಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಗುರುವಾರ ಬೆಳಗ್ಗೆ 8 ಗಂಟೆಗೆ ಬಿಎಸ್‌ಎಫ್ ಪಡೆಗಳು ಹೊಲವೊಂದರಲ್ಲಿ ಡ್ರೋನ್ ಅನ್ನು ವಶಪಡಿಸಿಕೊಂಡಿವೆ. ಇತ್ತಿಚೆಗೆ, ಬಿಎಸ್ಎಫ್ ಹಲವಾರು ಪಾಕಿಸ್ತಾನದ ಡ್ರೋನ್‌ಗಳ ಒಳನುಗ್ಗುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಿದೆ.

Another Pakistan Drone In Punjabs India-Pakistan International Border

ಮಂಗಳವಾರ ಸಂಜೆ ಕೂಡ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಅಮೃತಸರ ಸೆಕ್ಟರ್‌ನಲ್ಲಿರುವ ಡಾವೊಕೆ ಬಾರ್ಡರ್ ಔಟ್‌ಪೋಸ್ಟ್ (ಬಿಒಪಿ) ನಿಂದ ದೇಶಕ್ಕೆ ಪ್ರವೇಶಿಸಿದ ಡ್ರೋನ್ ಅನ್ನು ಬಿಎಸ್‌ಎಫ್ ಪಡೆಗಳು ಹೊಡೆದುರುಳಿಸಿದವು.

ಇದಕ್ಕೂ ಮುನ್ನ ನವೆಂಬರ್ 26 ರಂದು, ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿರುವ ಅಮೃತಸರ ಸೆಕ್ಟರ್‌ನಲ್ಲಿರುವ ಡಾವೊಕೆ ಬಾರ್ಡರ್ ಔಟ್‌ಪೋಸ್ಟ್ (ಬಿಒಪಿ) ನಲ್ಲಿ ಸಂಶಯಾದಸ್ಪದವಾಗಿ ಹಾರುತ್ತಿದ್ದ ಡ್ರೋನ್ ಕಂಡು ಹಿಡಿದಿದ್ದರು. ಬಳಿಕ ಅದನ್ನು ಹೊಡೆದುರುಳಿಸಿದದ್ದರು. ಭದ್ರತಾ ಸಿಬ್ಬಂದಿ ತಮ್ಮ ರೈಫಲ್‌ಗಳಿಂದ ಆರು ಸುತ್ತು ಗುಂಡು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದ್ದರು.

Another Pakistan Drone In Punjabs India-Pakistan International Border

ನಂತರ, ಇದು ಚೀನಾ ನಿರ್ಮಿತ ಕ್ವಾಡ್‌ಕಾಪ್ಟರ್ ಡಿಜೆಐ ಮ್ಯಾಟ್ರಿಸ್ 300ಆರ್‌ಟಿಕೆ ಬ್ರಾಂಡ್ ಡ್ರೋನ್ ಎಂದು ಕಂಡುಬಂದಿತ್ತು. ಡ್ರೋನ್‌ನಲ್ಲಿ ಕೆಲವು ಕ್ಯಾಮೆರಾಗಳನ್ನು ಅಳವಡಿಸಿರುವುದು ಕಂಡುಬಂದಿತ್ತು.

ಕಳೆದ ಎರಡು ತಿಂಗಳಲ್ಲಿ ಅಮೃತಸರ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮೂರು ಡ್ರೋನ್‌ಗಳನ್ನು ಹೊಡೆದುರುಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+