G20 Summit: ಬಡತನ ಮುಚ್ಚಿಡಲು ಪರದೆ ಹಾಕಿದ ಮೋದಿ ಸರ್ಕಾರ?
ಇಡೀ ಜಗತ್ತಿನ ಗಮನ ಈಗ ರಾಷ್ಟ್ರ ರಾಜಧಾನಿ ದೆಹಲಿ ಕಡೆಗೆ ನೆಟ್ಟಿದೆ. ಭಾರತದ ನೇತೃತ್ವ ಜಿ20 ಶೃಂಗಸಭೆಗೆ ಮಹತ್ವದ ಮೆರಗು ನೀಡಿದೆ. ಆದರೆ ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ಇರುವ ಬಡತನ ಮರೆಮಾಚಲು ಕೇಂದ್ರ ಸರ್ಕಾರ, ಕೊಳೆಗೇರಿಗಳಿಗೆ ಪರದೆ ಹಾಕಿದೆಯಾ? ಎಂಬ ಪ್ರಶ್ನೆ ಕೇಳಿಬಂದಿದೆ. ಈ ಕುರಿತು ಕಾಂಗ್ರೆಸ್ ವಿಡಿಯೋ ಒಂದನ್ನು ಶೇರ್ ಮಾಡಿದೆ. ಹಾಗಾದರೆ ವಿಡಿಯೋದಲ್ಲಿ ಇರುವ ಆರೋಪ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶ್ರೀಮಂತರು ಮಾತ್ರ ವಾಸ ಮಾಡುತ್ತಿಲ್ಲ. ಲಕ್ಷಾಂತರ ಬಡವರು ಕೂಡ ದೆಹಲಿಯಲ್ಲಿ ಬದುಕುತ್ತಿದ್ದಾರೆ. ಅದರಲ್ಲೂ ದಕ್ಷಿಣ ದೆಹಲಿಯ ವಸಂತ ವಿಹಾರದಲ್ಲಿ ಇರುವ ಕೂಲಿ ಕ್ಯಾಂಪ್ ಸಾವಿರಾರು ಬಡ ಕುಟುಂಬಗಳಿಗೆ ನೆರಳು ನೀಡಿದೆ. ಕೂಲಿ ಕ್ಯಾಂಪ್ ಪ್ರದೇಶದಿಂದ ಕೂಗಳತೆ ದೂರದಲ್ಲಿ ಐಶಾರಾಮಿ ಜೀವನ ನಡೆಸುವ ಮನೆ, ಹೋಟೆಲ್‌ಗಳು ಇವೆ. ಆದರೆ ಜಿ20 ಶೃಂಗಸಭೆ ಕಾರಣಕ್ಕೆ ಕೂಲಿ ಕ್ಯಾಂಪ್ ಜಾಗದ ಬಡತನ ಮರೆಮಾಚಲು ಪರದೆ ಹಾಕಿದ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ತನ್ನ ಟ್ವಿಟ್ಟರ್ ಅಥವಾ ಎಕ್ಸ್ ಖಾತೆ ಮೂಲಕ ಈ ಬಗ್ಗೆ ವಿಡಿಯೋ ಶೇರ್ ಮಾಡಿ ಆರೋಪ ಮಾಡಿದೆ.
PM Modi dislikes poor people. pic.twitter.com/gbvBAIVtpD
— Congress (@INCIndia) September 9, 2023
ಬಡತನ ಮರೆಮಾಚಲು ಸರ್ಕಾರದ ಯತ್ನ?
ಕಾಂಗ್ರೆಸ್ ಟ್ಟಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ ವಿಡಿಯೋ ಕೂಲಿ ಕ್ಯಾಂಪ್ ಪ್ರದೇಶದ್ದು ಅಂತಾ ಹೇಳಲಾಗಿದೆ. ವಿಡಿಯೋದಲ್ಲಿ ಸ್ಥಳೀಯ ನಿವಾಸಿಗಳು ತಮ್ಮನ್ನು ಪರದೆ ಹಾಕಿ, ಈ ರೀತಿ ಮುಚ್ಚಿಡಲು ಯತ್ನಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಅಲ್ಲದೆ ಜಿ20 ಶೃಂಗಸಭೆ ಕಾರಣಕ್ಕೆ ಕೂಲಿ ಕ್ಯಾಂಪ್ ಪ್ರದೇಶಕ್ಕೆ ಪರದೆ ಹಾಕಿರುವ ಹಿನ್ನೆಲೆ ಉಸಿರಾಟಕ್ಕೂ ಸಮಸ್ಯೆ ಆಗುತ್ತಿದೆ ಎಂದು ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಕಾಂಗ್ರೆಸ್ ಶೇರ್ ಮಾಡಿರುವ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

सरकार हमें कीड़ा-मकोड़ा समझती है। हम इंसान नहीं हैं क्या?
— Congress (@INCIndia) September 9, 2023
- दिल्ली की रहने वाली रानी ये बात कहती हैं।
G20 से पहले मोदी सरकार ने अपनी नाकामी छिपाने के लिए इनके घरों को पर्दे से ढकवा दिया है।
क्योंकि राजा को गरीब से नफरत है। pic.twitter.com/kIKB2WP835
ವಿದೇಶಿ ಪ್ರತಿನಿಧಿಗಳಿಗೆ ಸಕಲ ವ್ಯವಸ್ಥೆ
ಜಿ20 ಶೃಂಗಸಭೆ ಹಿನ್ನೆಲೆ ರಾಷ್ಟ್ರ ರಾಜಧಾನಿ ದೆಹಲಿ ಇದೀಗ ಏಳು ಸುತ್ತಿನ ಕೋಟೆಯಂತೆ ಬದಲಾಗಿದೆ. ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಜನಪ್ರತಿನಿಧಿಗಳು ಜಿ20 ಶೃಂಗಸಭೆಗೆ ಆಗಮಿಸಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹದ್ದಿನ ಕಣ್ಣಿಡಲಾಗಿದೆ. ಹಾಗೇ ಜಿ20 ಶೃಂಗಸಭೆ ನಡೆಯುತ್ತಿರುವ ಪ್ರದೇಶದ ಸುತ್ತಮುತ್ತ ಸಾರ್ವಜನಿಕರ ಓಡಾಟಕ್ಕೆ ಬ್ರೇಕ್ ಹಾಕಲಾಗಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಗಮಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
भारत की सच्चाई को हमारे मेहमानों से छिपाने की जरूरत नहीं है। pic.twitter.com/fy6z3RS8Wv
— Congress (@INCIndia) September 9, 2023
ಮತ್ತೊಂದು ಕಡೆ ರಷ್ಯಾ & ಉಕ್ರೇನ್ ಯುದ್ಧದ ಬೆನ್ನಲ್ಲೇ ನಡೆಯುತ್ತಿರುವ ಜಿ20 ಶೃಂಗಸಭೆ ಸಾಕಷ್ಟು ಗಮನ ಸೆಳೆದಿದೆ. ಆದರೆ ಈ ಸಂದರ್ಭದಲ್ಲಿ ದೆಹಲಿ ಬಡತನ ಮುಚ್ಚಿಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ ಕಾಂಗ್ರೆಸ್ ಮಾತ್ರ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದೆ. ಈ ಮೂಲಕ ಮತ್ತೊಂದು ವಿಚಾರಕ್ಕೆ ಕಾಂಗ್ರೆಸ್ & ಬಿಜೆಪಿ ನಡುವೆ ಜಟಾಪಟಿ ಶುರುವಾಗುವ ಸೂಚನೆ ಸಿಕ್ಕಂತಾಗಿದೆ.
ಒಟ್ನಲ್ಲಿ ಇಡೀ ಜಗತ್ತು ದೆಹಲಿ ಕಡೆ ಕಣ್ಣಿಟ್ಟು ಕೂತಿದ್ದು, ಜಿ20 ಶೃಂಗಸಭೆ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಸಂಜೆ ರಾಷ್ಟ್ರಪತಿಗಳು ಆಯೋಜನೆ ಮಾಡಿರುವ ವಿಶೇಷ ಔತಣ ಕೂಟದಲ್ಲಿ ಜಗತ್ತಿನ ಗಣ್ಯರು ಭಾಗವಹಿಸಲಿದ್ದಾರೆ. ಇದಾದ ಬಳಿಕ ನಾಳೆ ಕೂಡ ಶೃಂಗಸಭೆ ನಡೆಯಲಿದ್ದು ನಾಳೆ ಸಂಜೆ ಜಿ20 ಶೃಂಗಸಭೆಗೆ ತೆರೆ ಬೀಳಲಿದೆ. ಹೀಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ












Click it and Unblock the Notifications