ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೇ ನೋಟು ಬದಲಿಸಲು ಇನ್ನು 15 ದಿನಗಳಲ್ಲಿ ಮತ್ತೊಂದು ಅವಕಾಶ?

ಹಳೆ ನೋಟುಗಳನ್ನು ಬದಲಿಸದೇ ಇದ್ದವರಿಗೆ ಇನ್ನು 15 ದಿನಗಳಲ್ಲಿ ನೋಟು ಬದಲಿಸಲು ಅವಕಾಶ ಸಿಗುವ ಸಾಧ್ಯತೆ. ಸುಪ್ರೀಂ ಕೋರ್ಟ್ ನ ತಾಕೀತಿನಂತೆ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾದ ಸಾಧ್ಯತೆ.

|
Google Oneindia Kannada News

ನವದೆಹಲಿ, ಜುಲೈ 5: ಅಪನಗದೀಕರಣದ ಹಿನ್ನೆಲೆಯಲ್ಲಿ ಹಳೆಯ ನೋಟುಗಳನ್ನು ಬದಲಿಸಲು ಇನ್ನು ಹದಿನೈದು ದಿನಗಳಲ್ಲಿ ನಾಗರಿಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಅವಕಾಶವನ್ನು ನೀಡುವ ಸಾಧ್ಯತೆಯಿದೆ.

ಕಳೆದ ವರ್ಷ ನವೆಂಬರ್ 8ರಂದು ಕೇಂದ್ರ ಸರ್ಕಾರ ಹಳೆಯ 500 ರು. ಹಾಗೂ 1000 ರು. ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿತ್ತು. ಈ ಹಿನ್ನೆಲೆಯಲ್ಲಿ, ನಾಗರಿಕರಿಗೆ ತಮ್ಮಲ್ಲಿನ ಎಲ್ಲಾ 500 ರು., 1000 ರು. ಮುಖಬೆಲೆಯ ನೋಟುಗಳನ್ನು ಡಿ. 30ರೊಳಗೆ ಬದಲಾಯಿಸಿಕೊಳ್ಳುವಂತೆ ಸೂಚಿಸಲಾಗಿತ್ತು.

ಹಳೇ 500, 1,000 ನೋಟು ಇಟ್ಟುಕೊಂಡವರಿಗೆ ಆಶಾಕಿರಣ !ಹಳೇ 500, 1,000 ನೋಟು ಇಟ್ಟುಕೊಂಡವರಿಗೆ ಆಶಾಕಿರಣ !

Another chance to exchange demonetized notes likely in 15 days

ಆದರೆ, ಗಡುವಿನೊಳಗಡೆ ಕಾರಣಾಂತರಗಳಿಂದ ನೋಟುಗಳನ್ನು ಬದಲಾಯಿಸದೇ ಇದ್ದವರು ಇತ್ತೀಚೆಗೆ ಸುಪ್ರೀ ಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಮಂಗಳವಾರ (ಜುಲೈ 6) ನಿಷೇಧಿತ ನೋಟುಗಳನ್ನು ಬದಲಾಯಿಸಲು ಮತ್ತೊಂದು ಅವಕಾಶ ನೀಡಲು ಸಾಧ್ಯವೇ ಎಂಬುದನ್ನು ಜುಲೈ 15ರೊಳಗೆ ತಿಳಿಸುವಂತೆ ಕೇಂದ್ರ ಸರ್ಕಾರದಿಂದ ವಿವರಣೆ ಕೇಳಿತ್ತು.

ಶೀಘ್ರದಲ್ಲೇ 200 ರು. ಮುಖಬೆಲೆ ನೋಟುಗಳು ಬಿಡುಗಡೆಶೀಘ್ರದಲ್ಲೇ 200 ರು. ಮುಖಬೆಲೆ ನೋಟುಗಳು ಬಿಡುಗಡೆ

Recommended Video

ಈ ಹಿನ್ನೆಲೆಯಲ್ಲಿ, ನೋಟು ಬದಲಾವಣೆಗೆ ಮತ್ತೊಂದು ಅವಕಾಶ ನೀಡುವುದು ಔಚಿತ್ಯವೇ ಎಂಬುದನ್ನು ಕೇಂದ್ರ ಸರ್ಕಾರದ ಹಿರಿಯ ಸಚಿವರು ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದು ಇನ್ನು 15 ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಹೊರಬೀಳುವ ನಿರೀಕ್ಷೆಯಿದೆ.

ಇದೀಗ ಸುಪ್ರೀಂ ಕೋರ್ಟ್ ನಿಂದಲೇ ಇಂಥದ್ದೊಂದು ಸೂಚನೆ ಬಂದಿರುವುದರಿಂದ ನೋಟುಗಳ ಬದಲಾವಣೆಗೆ ಅವಕಾಶ ನೀಡಲೂ ಬಹುದೆಂದು ಹೇಳಲಾಗುತ್ತಿದೆ. ಆದರೆ, ನೋಟು ಬದಲಾಯಿಸಲು ಆಗದಿದ್ದವರು ಅದಕ್ಕೆ ಬಲವಾದ ಕಾರಣವನ್ನೂ ನೀಡಲೇಬೇಕಾಗುತ್ತದೆ ಎಂದು ಹೇಳಲಾಗಿದೆ.

English summary
The Supreme Court on Tuesday sought to prevail on the Centre to open a fresh window for exchange of scrapped Rs 500 and Rs 1,000 notes+ for people who missed the December 30 deadline, if they could establish that the money was theirs and they had a genuine reason for not changing it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X