Get Updates
Get notified of breaking news, exclusive insights, and must-see stories!

Cauvery Dispute: ಕಾವೇರಿ ನೀರಿಗಾಗಿ ಮತ್ತೊಮ್ಮೆ ಬಂದ್‌ಗೆ ಕರೆ!

ಕಾವೇರಿ ನೀರಿನ ಗಲಾಟೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅದರಲ್ಲೂ ಈಗಾಗಲೇ ಈ ಕಾರಣಕ್ಕೆ ಕನ್ನಡಿಗರು 2 ಬಂದ್‌ಗಳನ್ನ ನೋಡಿದ್ದಾರೆ. ಮೊದಲು ರಾಜಧಾನಿ ಬೆಂಗಳೂರಿನ ಬಂದ್ ಜನರನ್ನು ಸಂಕಷ್ಟಕ್ಕೆ ದೂಡಿತ್ತು. ನಂತರ ಕರ್ನಾಟಕ ಕೂಡ ಬಂದ್ ಆಗಿತ್ತು. ಈ ಎರಡೂ ಬಂದ್‌ಗಳ ಬಳಿಕ ಕಾವೇರಿ ನೀರಿಗಾಗಿ ಮತ್ತೊಮ್ಮೆ ಬಂದ್‌ಗೆ ಕರೆ ನೀಡಲಾಗಿದೆ. ಅರೆ ಮತ್ತೊಂದು ಬಂದ್? ಯಾವಾಗ? ಅಂತಾ ಕೇಳಿದ್ರಾ, ಮುಂದೆ ಓದಿ.

ಹೌದು, ಕಾವೇರಿ ನದಿ ಪಾತ್ರದಲ್ಲಿ ಈ ಬಾರಿ ಅಗತ್ಯ ಇರುವಷ್ಟು ಮಳೆ ಬಿದ್ದಿಲ್ಲ. ಹೀಗಾಗಿ ನೀರಿಗಾಗಿ ಭಾರಿ ಕೊರತೆ ಎದುರಾಗಿದೆ. ಅದ್ರಲ್ಲೂ ಕರ್ನಾಟಕದ ಕಾವೇರಿ ಕೊಳ್ಳ ಭಾಗದಲ್ಲಿ ನೀರು ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ. ಈ ಸಮಯದಲ್ಲೇ ತಮಿಳುನಾಡು ಸರ್ಕಾರವೂ ಕಾವೇರಿ ನೀರಿಗಾಗಿ ಕಿರಿಕ್ ತೆಗೆದಿದೆ. ಹೀಗಾಗಿ ಕರ್ನಾಟಕದಲ್ಲಿ ಬರ ಇದ್ದರೂ ಆರಂಭದಲ್ಲಿ ಹತ್ತಾರು ಟಿಎಂಸಿ ನೀರು ಬಿಟ್ಟಿತ್ತು ಕರ್ನಾಟಕ ಸರ್ಕಾರ. ಆದ್ರೆ ಮತ್ತೆಮತ್ತೆ ಕಾವೇರಿ ನೀರು ಬಿಡುವಂತೆ ತಮಿಳುನಾಡು ಒತ್ತಡ ಹೇರಿದ್ದು, ಕರ್ನಾಟಕ ಕೂಡ ಈ ಬಾರಿ ನೀರು ಬಿಡಲೇ ಬಾರದು ಅಂತಾ ನಿರ್ಧಾರ ಮಾಡಿದೆ. ಈ ಸಮಯಕ್ಕೇ ಮತ್ತೆ ಬಂದ್‌ಗೆ ಕರೆ ನೀಡಲಾಗಿದೆ.

another-bandh-and-protest

ಕಾವೇರಿ ನೀರಿಗಾಗಿ ಬಂದ್ ಯಾವಾಗ?

ಇದೀಗ ಕಾವೇರಿ ನೀರಿಗಾಗಿ ಬಂದ್‌ಗೆ ಕರೆ ನೀಡಲಾಗಿದೆ ನಿಜ ಆದರೆ ಈ ಬಂದ್ ಕನ್ನಡಿಗರ ನೆಲದಲ್ಲಿ ನಡೆಯುತ್ತಿಲ್ಲ. ಬದಲಾಗಿ ನೆರೆಯ ತಮಿಳುನಾಡು ರೈತರು ನೀರಿಗಾಗಿ ಹೋರಾಟ ಆರಂಭಿಸಲು ಮುಂದಾಗಿದ್ದಾರೆ. ತಮಿಳುನಾಡಿನ ಕಾವೇರಿ ನದಿ ಕೊಳ್ಳದ ರೈತರು ಬಂದ್‌ಗೆ ಕರೆ ನೀಡಿದ್ದಾರೆ. ಕಾವೇರಿ ನದಿ ಹರಿಯುವ ತಮಿಳುನಾಡಿನ ಜಿಲ್ಲೆಗಳಲ್ಲಿ ಬಂದ್ ನಡೆಸಲು ನಿರ್ಧಾರ ಮಾಡಲಾಗಿದೆ. ಅಕ್ಟೋಬರ್ 11ರ ಬುಧವಾರ ಈ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ರೈತರು ಈ ಮೂಲಕ ಪ್ರತಿಭಟಿಸಲಿದ್ದಾರೆ.

ಕರ್ನಾಟಕ ಸರ್ಕಾರದ ವಿರುದ್ಧವೂ ಆಕ್ರೋಶ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶದ ನಂತರವೂ ಕರ್ನಾಟಕ ಕಾವೇರಿ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ರೈತರು ಆರೋಪಿಸಿದ್ದಾರೆ. ಅಲ್ದೆ ಬಿಜೆಪಿ ಮತ್ತು ಮೈತ್ರಿ ಪಕ್ಷಗಳು ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಚಾರ ಪ್ರಸ್ತಾಪಿಸಿ ಬಂದ್‌ಗೆ ಕರೆ ನೀಡಿದ್ದಾರೆ. ಬಂದ್ ನಡೆಯುವ ದಿನ ರೈತರು ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಸಂಸದ & ಡಿಎಂಕೆ ರೈತ ಘಟಕದ ಕಾರ್ಯದರ್ಶಿ ಎಕೆಎಸ್ ವಿಜಯನ್ ತಿಳಿಸಿದ್ದಾರೆ. ಹೀಗೆ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಮತ್ತೆ ಸೂಕ್ಷ್ಮ ಪರಿಸ್ಥಿತಿ ಉಂಟಾಗಿದೆ.

another-bandh-and-protest

ಬರದಲ್ಲಿ ನರಳುತ್ತಿದೆ ನೆರೆ ರಾಜ್ಯ

ತಮಿಳುನಾಡು ಕೂಡ ಈ ಬಾರಿ ಬರದ ಬೇಗೆಯಲ್ಲಿ ನರಳಾಡುವ ಪರಿಸ್ಥಿತಿ ಇದ್ದು ಮಳೆ ಕೊರತೆ ಕಾರಣ ತಮಿಳುನಾಡು ಡ್ಯಾಂಗಳು ಒಣಗಿವೆ. ಅದ್ರಲ್ಲೂ ನೆರೆ ರಾಜ್ಯದ ಜೀವನಾಡಿ ಮೆಟ್ಟೂರು ಡ್ಯಾಂ ಭಾಗಶಃ ಖಾಲಿಯಾಗಿ ಹೋಗಿದೆ. ಇದೇ ಹಿನ್ನೆಲೆ ಕುಡಿಯುವ ನೀರಿಗೂ ಮುಂದೆ ಸಮಸ್ಯೆ ಎದುರಾಗುವ ಆತಂಕ ಆವರಿಸಿದೆ. ಹೀಗಾಗಿಯೇ ತಮಿಳುನಾಡಿನ ರೈತ ಸಂಘಟನೆಗಳು ಈಗ ಬಂದ್‌ಗೆ ಕರೆ ನೀಡಿವೆ. ಅಲ್ಲದೆ ಬಂದ್ ನಡೆಯುವ ದಿನ ತಮಿಳುನಾಡಿನ ರೈತರು ಕೇಂದ್ರ ಸರ್ಕಾರದ ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದಾರೆ.

ತಮಿಳುನಾಡಿನ 24 ಜಿಲ್ಲೆಗಳು ಅವಲಂಬಿಸಿರುವುದು ಇದೇ ಡ್ಯಾಂ ನೀರನ್ನ. ಹೀಗಾಗಿ ಕಾವೇರಿ ವಿಚಾರಕ್ಕೆ ತಮಿಳುನಾಡು ದೊಡ್ಡ ಕಿರಿಕ್ ತೆಗೆಯುತ್ತೆ. ಆದರೂ ಕುಡಿಯುವ ನೀರನ್ನ ಮೊದಲು ರಕ್ಷಣೆ ಮಾಡುವ ಬದಲು, ತಮಿಳುನಾಡು ಸರ್ಕಾರ ಕೃಷಿಗೆ ಆದ್ಯತೆ ನೀಡಿದ್ದು ತಪ್ಪು ಎನ್ನುವ ಆರೋಪ ಕೂಡ ಇದೆ. ಈಗ ಮೆಟ್ಟೂರು ಜಲಾಶಯ ನೀರಿನ ಮಟ್ಟ 31.57 ಅಡಿಗೆ ಕುಸಿದಿದೆ. 120 ಅಡಿ ಇರುವ ಮೆಟ್ಟೂರು ಜಲಾಶಯದ ಗರಿಷ್ಠ ಮಟ್ಟ ಇದೀಗ ಕನಿಷ್ಠ ಹಂತಕ್ಕೆ ತಲುಪಿದೆ. 2,204 ಕ್ಯುಸೆಕ್ ನೀರನ್ನ ಹೊರ ಬಿಡಲಾಗುತ್ತಿದೆ. ಹಾಗೇ ಕೇವಲ 86 ಕ್ಯುಸೆಕ್ ಒಳಹರಿವು ಮೆಟ್ಟೂರು ಡ್ಯಾಂನಲ್ಲಿ ಇದೀಗ ದಾಖಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+