Annamalai: ಬಿಜೆಪಿ ಅಭ್ಯರ್ಥಿ ಅಣ್ಣಾಮಲೈಗೆ ತೀವ್ರ ಹಿನ್ನಡೆ; ಒಂದು ಬೂತ್‌ನಲ್ಲಿ ಕೇವಲ ಒಂದೇ ಮತ!
ಲೋಕಸಭಾ ಚುನಾವಣೆ 2024ರಲ್ಲಿ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ತಮಿಳುನಾಡಿನ ಕೊಯಮತ್ತೂರು ಕೂಡ ಒಂದು. ಬಿಜೆಪಿ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದ ಕ್ಷೇತ್ರಗಳಲ್ಲಿ ಇದು ಒಂದಾಗಿದ್ದು, ಈಗ ಹಿನ್ನಡೆಯಾಗಿದೆ. ಅಣ್ಣಾಮಲೈ ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಗೆಲ್ಲಿಸಲು ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ದಂಡು ಕೊಯಮತ್ತೂರಿನಲ್ಲಿ ಪ್ರಚಾರ ಮಾಡಿತ್ತು. ತಮಿಳುನಾಡಿನ ಮೇಲೆ ವಿಶೇಷ ಒಲವು ಹೊಂದಿರುವ ಮೋದಿಗೆ ಇಲ್ಲಿ ಬಿಜೆಪಿಯನ್ನು ಗೆಲ್ಲಿಸುವುದು ಕನಸಾಗಿತ್ತು.

ಕೊಯಮತ್ತೂರು ಲೋಕಸಭಾ ಚುನಾವಣೆ ಮತ ಎಣಿಕೆ ಬೆಳಗ್ಗೆಯೇ ಆರಂಭವಾಗಿದ್ದರೂ, ಸಾಕಷ್ಟು ಸಮಯದ ವರೆಗೆ ಮತ ಎಣಿಕೆ ವಿವರ ಬಹಿರಂಗವಾಗಿರಲಿಲ್ಲ. ತಡವಾಗಿ ಮತ ಎಣಿಕೆ ವಿವರವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
Looks like the poll agent's family didn't vote for BJPs #annamalai in coimbatore 😅
— 👑Che_ಕೃಷ್ಣ🇮🇳💛❤️ (@ChekrishnaCk) June 4, 2024
He is trailing by 30000 votes now#electionresults pic.twitter.com/k32jBBNWyZ
ಮಧ್ಯಾಹ್ನ 12.20 ಗಂಟೆಗೆ ಬಂದಿರುವ ಮಾಹಿತಿಯ ಪ್ರಕಾರ ಅಣ್ಣಾಮಲೈ 11,909 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಗಣಪತಿ ರಾಜ್‌ಕುಮಾರ್ 42798 ಮತ ಪಡೆದು ಮುನ್ನಡೆ ಪಡೆದುಕೊಂಡಿದ್ದಾರೆ.
ಒಂದು ಬೂತ್‌ನಲ್ಲಿ ಒಂದು ಮತ
ಬೂತ್‌ವಾರು ಮತ ಎಣಿಕೆಯಲ್ಲಿ ಅಣ್ಣಾಮಲೈ ಅವರಿಗೆ ಒಂದು ಬೂತ್‌ನಲ್ಲಿ ಒಂದೇ ಒಂದು ಮತ ಮಾತ್ರ ಸಿಕ್ಕಿದೆ. ಅವರಿಗೆ ಒಂದು ಮತ ಸಿಕ್ಕಿರುವ ಪತ್ರ ವೈರಲ್ ಆಗುತ್ತಿದೆ.












Click it and Unblock the Notifications