Annamalai: ಅಣ್ಣಾಮಲೈ ತಂತ್ರಕ್ಕೆ ತಮಿಳುನಾಡಿನಲ್ಲಿ ಬಿಜೆಪಿಗೆ ಮೊದಲ ಗೆಲುವು?
ಅಣ್ಣಾಮಲೈ ಈಗ, ತಮಿಳುನಾಡು ಚುನಾವಣೆ ಅಖಾಡದಲ್ಲಿ ಜಾದೂ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ. ಅದರಲ್ಲೂ ನಿನ್ನೆ ಎಕ್ಸಿಟ್ ಪೋಲ್ ಅಂದ್ರೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿತ್ತು. ಈ ಪೈಕಿ ತಮಿಳುನಾಡು ರಾಜ್ಯದಲ್ಲಿ ಕೂಡ ಬಿಜೆಪಿ ಮೊದಲ ಬಾರಿಗೆ ಬಂಪರ್ ಬೆಳೆ ತೆಗೆಯುವ ಮುನ್ಸೂಚನೆ ಸಿಕ್ಕಿತ್ತು. ಹೀಗಾಗಿ ಅಣ್ಣಾಮಲೈ ವಿಚಾರ ಈಗ ಮತ್ತೆ ಟ್ರೆಂಡ್‌ನಲ್ಲಿದೆ.
ಅಣ್ಣಾಮಲೈ ಅಂದ್ರೆ ತಮಿಳುನಾಡಿನ ಮೂಲೆ ಮೂಲೆಯಲ್ಲೂ ಹವಾ ಇದೆ. ಇನ್ನು ಕರ್ನಾಟಕ ರಾಜ್ಯದಲ್ಲೂ ಅಣ್ಣಾಮಲೈ ಅವರು ದೊಡ್ಡ ಹೆಸರು ಸಂಪಾದಿಸಿದ್ರು. ಯಾಕಂದ್ರೆ ಅಣ್ಣಾಮಲೈ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು.

ಚಿಕ್ಕಮಗಳೂರು ಭಾಗದಲ್ಲಿ ಇವರ ಹೆಸರಿನ ಬದಲು 'ಸಿಂಗಂ ಅಣ್ಣಾಮಲೈ' ಅಂತಾನೆ ಜನರು ಕರೆಯುತ್ತಿದ್ದರು. ಈಗ ಇದೆ ಅಣ್ಣಾಮಲೈ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ತಮಿಳುನಾಡು ರಾಜ್ಯದಲ್ಲಿ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.
ಬಿಜೆಪಿ ಭರ್ಜರಿ ಲಾಭ?
ಅಂದಹಾಗೆ ನಿನ್ನೆ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ತಮಿಳುನಾಡು ರಾಜ್ಯದಲ್ಲಿ ಒಟ್ಟು 39 ಸ್ಥಾನಗಳು ಇವೆ. ಈ ಪೈಕಿ ಬಿಜೆಪಿ 1 ರಿಂದ 3 ಸ್ಥಾನದಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಹಾಗೇ ಕಾಂಗ್ರೆಸ್ & ಡಿಎಂಕೆ 36 ರಿಂದ 39 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆ ಇದ್ದು, ಇತರರು ಒಟ್ಟು 02 ಸ್ಥಾನದಲ್ಲಿ ಗೆಲ್ಲುವ ನಿರೀಕ್ಷೆಯನ್ನ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ವ್ಯಕ್ತಪಡಿಸಿವೆ.
ಹೀಗಿದ್ದಾಗ ತಮಿಳುನಾಡಿನ ಈ ಪ್ರಚಂಡ ಗೆಲುವಿನ ಕ್ರೆಡಿಟ್ ಸಂಪೂರ್ಣ ಕೆ. ಅಣ್ಣಾಮಲೈ ಅವರಿಗೆ ಸಲ್ಲುತ್ತದೆ. ಯಾಕಂದ್ರೆ, ತಮಿಳುನಾಡು ಅಖಾಡದಲ್ಲಿ ಬಿಜೆಪಿಯ ಬಲ ಹೆಚ್ಚಿಸಿದ್ದು ಅಣ್ಣಾಮಲೈ. ಅಕಸ್ಮಾತ್ ಬಿಜೆಪಿ ತಮಿಳುನಾಡಿನಲ್ಲಿ 1 ರಿಂದ 3 ಸ್ಥಾನದಲ್ಲಿ ಗೆದ್ದು ಬೀಗಿದರೆ ಅದು ಬಹುದೊಡ್ಡ ಸಾಧನೆ ಆಗಲಿದೆ.
ಪಕ್ಷದಲ್ಲಿ ಅಣ್ಣಾಮಲೈಗೆ ಭಾರಿ ಗೌರವ
ಕೆ. ಅಣ್ಣಾಮಲೈ ಕಂಡರೆ ಪ್ರಧಾನಿ ಮೋದಿ ಅವರಿಂದಲು ಹಿಡಿದು, ಆರ್‌ಎಸ್‌ಎಸ್ ಮುಖಂಡರ ತನಕ ಪ್ರತಿಯೊಬ್ಬರಿಗೂ ಭಾರಿ ಗೌರವ. ಬಿಜೆಪಿಗೆ ಬಂದು ಕೆಲ ವರ್ಷದಲ್ಲಿ ಅಣ್ಣಾಮಲೈ ಅವರು ದೊಡ್ಡ ಹೆಸರು ಸಂಪಾದಿಸಿದ್ದಾರೆ.
ಅದ್ರಲ್ಲೂ ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ಅಣ್ಣಾಮಲೈ ಅವರನ್ನ ಹೊಗಳಿದ್ದರು. ಇದರ ಜೊತೆಗೆ ಬಿಜೆಪಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿರುವ ಬಿ.ಎಲ್. ಸಂತೋಷ್‌ರ ಬೆಂಬಲ ಕೂಡ ಅಣ್ಣಾಮಲೈ ಅವರಿಗೆ ಇದೆ. ಹೀಗಿದ್ದಾಗ, ತಮಿಳುನಾಡು ರಾಜಕೀಯದಲ್ಲಿ ಬಿಜೆಪಿ ಕಮಾಲ್ ಮಾಡುತ್ತಿದೆ. ಜೂನ್ 4 ರ ಮಂಗಳವಾರ ಈ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.












Click it and Unblock the Notifications