Tirupati Laddu: ವಿಶೇಷ ತನಿಖೆಗೆ ತಿರುಪತಿ ಲಡ್ಡು ಪ್ರಕರಣ ನೀಡಿ ಸುಪ್ರೀಂ ಕೋರ್ಟ್ ಆದೇಶ
ಬೆಂಗಳೂರು, ಅಕ್ಟೋಬರ್ 04: ಅಪಾರ ಭಕ್ತ ಸಮೂಹ ಹೊಂದಿರುವ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಿಶೇಷ ತನಿಖೆಗೆ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ. ಕೇಂದ್ರ ತನಿಖಾ ಸಂಸ್ಥೆಗಳು ಲಡ್ಡು ಪ್ರಸಾದದ ಆರೋಪ ಬಗ್ಗೆ ಸತ್ಯಾಂಶವನ್ನು ಶೀಘ್ರವೇ ಬಿಚ್ಚಿಸಲಿವೆ. ಈ ತನಿಖೆಯಲ್ಲಿ ಯಾವೆಲ್ಲ ಸಂಸ್ಥೆಗಳ ಅಧಿಕಾರಿಗಳು ಇರಲಿದ್ದಾರೆ?
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ, ತಿರುಪತಿ ಲಡ್ಡು ತಯಾರಿಕೆಗೆ ಮೀನು ಎಣ್ಣೆ, ಹಂದಿ ಸೇರಿದಂತೆ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ವಿಶೇಷ ತನಿಖಾ ತಂಡ (SIT), ಆಂಧ್ರ ಪ್ರದೇಶದ ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳು, ಕೇಂದ್ರ ಆಹಾರ ನಿಯಂತ್ರಕ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಹಿರಿಯ ಅಧಿಕಾರಿಗಳು ಲಡ್ಡು ಪ್ರಕರಣದ ವಿಶೇಷ ತನಿಖಾ ತಂಡದಲ್ಲಿರಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಿದೆ.

ತಿಮ್ಮಪ್ಪನ ಸಹಸ್ರಾರು ಭಕ್ತರ ಭಾವನೆಯ ವಿಷಯ
ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಈ ಲಡ್ಡು ಪ್ರಕರಣದ ವಿಚಾರವಾಗಿ ಕೇಳಿ ಬಂದ ಆರೋಪದಲ್ಲಿ ರಾಜಕೀಯ ಮಾಡುವುದು ಬೇಡ. ಇದು ಪ್ರಪಂಚದಾದ್ಯಂತ ಮಿಲಿಯನ್ ಗಟ್ಟಲೇ ಇರುವ ತಿರುಪತಿ ತಿಮ್ಮಪ್ಪನ ಭಕ್ತರ ಸಮೂಹದ ನಂಬಿಕೆ ವಿಷಯವಾಗಿದೆ ಎಂದು ಗಂಭೀರತೆಯನ್ನು ವಿವರಿಸಿತು.
ಬಳಿಕ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ವಿಶೇಷ ತನಿಖೆಗೆ ನೀಡಿ ಆದೇಶ ಹೊರಡಿಸಿತು.
ಮಾಜಿ ಸಿಎಂ ಮೇಲೆ ಹಾಲಿ ಸಿಎಂ ಆರೋಪ
ಆಂಧ್ರ ಪ್ರದೇಶದ ಹಾಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಈ ಹಿಂದಿನ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ರಾಜ್ಯ ಸರ್ಕಾರದ ಆಡಳಿತದಲ್ಲಿ ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪ ಕೇಳಿ ಬರುತ್ತಿದ್ದಂತೆ ಲಡ್ಡು ಪರೀಕ್ಷೆ ನಡೆಸಿದ ಪ್ರಯೋಗಾಲವು, ಲಡ್ಡುವಿನಲ್ಲಿ ಪ್ರಾಣಿಗಳ ಫ್ಯಾಟ್ ಇರುವುದನ್ನು ಖಚಿತ ಪಡಿಸಿ ವರದಿ ಪ್ರಕಟಿಸಿತ್ತು.
ಈ ವರದಿ ಸಮೇತವಾಗಿ ಟ್ವೀಟ್ ಮಾಡಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕಳವಳ ವ್ಯಕ್ತಪಡಿಸಿದ್ದರು. ಅಷ್ಟೋತ್ತಿಗಾಗಲೇ ತಿರುಪತಿಯ ಅಪಾರ ಭಕ್ತರ ನಂಬಿಕೆಗೆ ಭಾವನೆಗೆ ಕುತ್ತು ಬಂತಾ? ಎಂಬ ಅನುಮಾನ ಮೂಡ ತೊಡಗಿತು. ಬಳಿಕ ಇದನ್ನು ರಾಜಕೀಯ ವಿಚಾರವಾಗಿ ಚರ್ಚೆಗೆ ಮಾಡಲಾಯಿತು. ಆರೋಪ ಪ್ರತ್ಯಾರೋಪಗಳು, ತನಿಖೆಯ ಮಾತುಗಳು ಕೇಳಿ ಬಂದವು.
ಕೊನೆಗೆ ಇಂದು ಸುಪ್ರೀಂ ಕೋರ್ಟ್ ಇಂದು ವಿಶೇಷ ತನಿಖೆಗೆ ಆದೇಶಿಸಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾದಕ್ಕೆ ಕಾರಣರಾದವರು ಯಾರು? ಅಸಲಿ ಕಥೆ ಏನು ಎಂಬುದು ತನಿಖೆಯಿಂದ ಬಯಲಾಗಲಿದೆ ಎಂದು ತಿಮ್ಮಪ್ಪನ ಅಪಾರ ಭಕ್ತರು ಕಾಯುತ್ತಿದ್ದಾರೆ. ಕೆಲವರಂತೂ ಇದು ಸನಾತನ ಭಾವನೆಗೆ ಮಾಡಿದ ಧಕ್ಕೆಯಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
I welcome the Honourable Supreme Court’s order of setting up SIT, comprising officers from CBI, AP Police and FSSAI to investigate the issue of adulteration of Tirupati laddu.
— N Chandrababu Naidu (@ncbn) October 4, 2024
Satyamev Jayate.
Om Namo Venkatesaya.
ಸತ್ಯಮೇವ ಜಯತೇ: ಸುಪ್ರೀಂ ಕೋರ್ಟ್ ಆದೇಶ ಸ್ವಾಗತಿಸಿದ ಸಿಎಂ
ತಿರುಪತಿ ಲಡ್ಡು ಪ್ರಕರಣವನ್ನು ವಿಶೇಷ ತನಿಖೆಗೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸ್ವಾಗತಿಸಿದ್ದಾರೆ. 'ಸತ್ಯಮೇವ ಜಯತೆ, ಓ ನಮಃ ವೆಂಕಟೇಶಾಯ...' ಎಂದು ಬರೆದುಕೊಂಡಿದ್ದಾರೆ
ಈ ಬಗ್ಗೆ ಸಾಮಾಜಿಕ ಜಾಲತಾಣ (ಎಕ್ಸ್) ದಲ್ಲಿ ಪೋಸ್ಟ್ ಮಾಡಿರುವ ಅವರು, ಲಡ್ಡು ತಯಾರಿಕೆಯಲ್ಲಿ ಪ್ರಾಣಿಕಗಳ ಕೊಬ್ಬು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT), ಆಂಧ್ರ ಪ್ರದೇಶದ ರಾಜ್ಯದ ಪೊಲೀಸರು, ಕೇಂದ್ರ ಆಹಾರ ನಿಯಂತ್ರಕ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ (FSSAI) ಅಧಿಕಾರಿಗಳ ತಂಡ ಸೇರಿ ವಿಶೇಷ ತನಿಖೆ ನಡೆಸಲು ಸೂಚಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications