ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮೇಲೆ ಮೇಲ್ಜಾತಿಯ ಮುನಿಸು: ಸಂಧಾನಕ್ಕೆ ಬಂದ ಆರೆಸ್ಸೆಸ್?!

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ಭೋಪಾಲ್, ಅಕ್ಟೋಬರ್ 16: ಭಾರೀ ಕುತೂಹಲ ಕೆರಳಿಸಿರುವ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಈಗಾಗಲೇ ಪ್ರಚಾರ ಭರಾಟೆ ಜೋರಾಗಿದೆ.

ಮೂರು ಕಾಲಾವಧಿಯಲ್ಲಿ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸಿದ ಬಿಜೆಪಿ, ಪ್ರಸ್ತುತ ಆಡಳಿತವಿರೋಧಿ ಅಲೆಯಿಂದ ಕೊಚ್ಚಿಹೋಗಬಹುದು ಎಂಬ ಸೂಚನೆಯನ್ನು ಕೆಲವು ಸಮೀಕ್ಷೆಗಳು ನೀಡಿವೆ.

ಮೈಸೂರು ದಸರಾ - ವಿಶೇಷ ಪುರವಣಿ

ಇದರೊಟ್ಟಿಗೆ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಆಗಿದ್ದ ಮೇಲ್ಜಾತಿಯ ವರ್ಗ ಪಕ್ಷದ ಮೇಲೆ ಮುನಿಸು ತಾಳಿರುವುದು ಬಿಜೆಪಿಗೆ ಬಹುದೊಡ್ಡ ಹೊಡೆತವಾಗಬಹುದು ಎಂಬ ನಿರೀಕ್ಷೆ ಇದೆ.

ಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರಸಮೀಕ್ಷೆಗಳ ಸಮೀಕ್ಷೆ: ಮಧ್ಯಪ್ರದೇಶದಲ್ಲಿ ಮೋದಿ ಬಲದಿಂದ ಮತ್ತೆ ಅಧಿಕಾರ

ಮೇಲ್ಜಾತಿಯ ಮತದಾರರನ್ನು ಓಲೈಸುವ ಕೆಲಸವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುವ ಪ್ರಯತ್ನದಲ್ಲಿದೆಯಾದರೂ ಅದಕ್ಕೂ ಮತದಾರರು ತಲೆಬಾಗುವುದು ಅನುಮಾನ.

SAPAKS ಎಫೆಕ್ಟ್!

SAPAKS ಎಫೆಕ್ಟ್!

ಮಧ್ಯಪ್ರದೇಶದಲ್ಲಿ ಜಾತಿಯ ಆಧಾರದ ಮೇಲೆ ನೀಡುವ ಮೀಸಲಾತಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿಕೊಂಡ ಸಾಮಾನ್ಯ ಪಿಚ್ಡಾ ಅಲ್ಪಸಂಖ್ಯಕ್ ಸಮಾಜ ಕಲ್ಯಾಣ್ (SAPAKS) ಸಮಿತಿಯು ಹೊಸ ಪಕ್ಷವೊಂದನ್ನು ಕಟ್ಟಿಕೊಂಡಿದೆ. SAPAKS ಪಕ್ಷ ಎಂಬ ಹೆಸರಿನಲ್ಲೇ ಈ ಪಕ್ಷವನ್ನು ಕರೆಯಲಾಗುತ್ತಿದೆ. ಬಿಜೆಪಿಗೆ ಇದು ಬಹುದೊಡ್ಡ ಹೊಡೆತವಾಗಲಿದೆ. ಮಧ್ಯಪ್ರದೇಶದಲ್ಲಿ ಬ್ರಾಹ್ಮಣ, ರಜಪೂತ ಮತ್ತು ಬೈಶ್ಯ ಸಮುದಾಯದ ಜನರನ್ನು ಮೇಲ್ಜಾತಿಯ ಜನರನ್ನಾಗಿ ಗುರುತಿಸಲಾಗುತ್ತದೆ. ಈ ಸಮುದಾಯದವರೆಲ್ಲ ಸೇರಿ ಹೊಸ ಪಕ್ಷವೊಂದನ್ನು ಕಟ್ಟಿದ್ದಾರೆ. ಈಗಾಗಲೇ 88 ಅಭ್ಯರ್ಥಿಗಳನ್ನು ಪಟ್ಟಿಯನ್ನು ಅಂತಿಮಗೊಳಿಸಲಾಗಿದ್ದು, ಎಲ್ಲಾ 230 ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬೆದರಿಕೆಯನ್ನೂ ಅವರು ಹಾಕಿದ್ದಾರೆ. ಅಕಸ್ಮಾತ್ ಇದು ಸತ್ಯವೇ ಆದರೆ ಬಿಜೆಪಿಗೆ ಸಂಕಟವಂತೂ ಕಟ್ಟಿಟ್ಟಬುತ್ತಿ.

ನೋಟಾ ಒತ್ತುವುದಕ್ಕೂ ಸಿದ್ಧ!

ನೋಟಾ ಒತ್ತುವುದಕ್ಕೂ ಸಿದ್ಧ!

ಜೊತೆಗೆ ಮೇಲ್ಜಾತಿಯ ಮತದಾರರು ನೋಟಾ(None of the Above) ಆಯ್ಕೆಯನ್ನೇ ನೆಚ್ಚಿಕೊಳ್ಳುವುದಾಗಿ ಬೆದರಿಸಿದ್ದು, ಮೇಲ್ಜಾತಿಯ ಮತದಾರರ ಮನೆ ಮುಂದೆ, 'ಬಿಜೆಪಿಗೆ ಮತಹಾಕಬೇಡಿ, ನೋಟಾಕ್ಕೆ ಮತ ಚಲಾಯಿಸಿ' ಎಂಬ ಘೋಷಣೆಯುಳ್ಳ ಪೋಸ್ಟರ್ ಗಳನ್ನು ಮನೆಯ ಮುಂದೆ ಅಂಟಿಸಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಮೇಲ್ಜಾತಿಯ ಸಮುದಾಯದಲ್ಲಿ ಬಿಜೆಪಿ ಬಗ್ಗೆ ತೀವ್ರ ಅಸಮಾಧಾನವಿರುವುದು ದೃಢವಾಗುತ್ತದೆ.

ಮಧ್ಯಪ್ರದೇಶದಲ್ಲಿ ಮೇಲ್ಜಾತಿಯ ವೋಟಿನತ್ತ ಕಾಂಗ್ರೆಸ್ ಕಣ್ಣು!ಮಧ್ಯಪ್ರದೇಶದಲ್ಲಿ ಮೇಲ್ಜಾತಿಯ ವೋಟಿನತ್ತ ಕಾಂಗ್ರೆಸ್ ಕಣ್ಣು!

ಪರಿಸ್ಥಿತಿ ತಣ್ಣಗಾಗಿಸಲು ಆರೆಸ್ಸೆಸ್ ಮಧ್ಯಸ್ಥಿಕೆ?

ಪರಿಸ್ಥಿತಿ ತಣ್ಣಗಾಗಿಸಲು ಆರೆಸ್ಸೆಸ್ ಮಧ್ಯಸ್ಥಿಕೆ?

ಮುನಿಸಿಕೊಂಡಿರುವ ಮೇಲ್ಜಾತಿಯ ಸಮುದಾಯವನ್ನು ತಣ್ಣಗಾಗಿಸುವ ಕೆಲಸಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮುಂದಾಗಿದೆ. ಆದರೆ ಆರೆಸ್ಸೆಸ್ ಆಯಕಟ್ಟಿನ ಹುದ್ದೆಯಲ್ಲಿ ಮಧ್ಯಪ್ರದೇಶದವರೇ ಆದ ಸುರೇಶ್ ಸೋನಿ(ಸಹಸರಕಾರ್ಯವಾಹ) ಅವರಿದ್ದರೂ ಆರೆಸ್ಸೆಸ್ ಮಾತಿಗೂ ಮೇಲ್ಜಾತಿಯ ಸಮುದಾಯ ಶಾಂತವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಮೇಲ್ಜಾತಿಯ ಮುನಿಸೇಕೆ?

ಮೇಲ್ಜಾತಿಯ ಮುನಿಸೇಕೆ?

ಅಷ್ಟಕ್ಕೂ ಸರ್ಕಾರದ ಮೇಲೆ ಮೇಲ್ಜಾತಿಯ ವರ್ಗದವರಲ್ಲಿ ಈ ಪರಿ ಮುನಿಸೇಕೆ? ಇಲ್ಲಿನ ಸರ್ಕಾರ ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಮೀಸಲಾತಿಯನ್ನು ಮೇಲ್ಜಾತಿಯವರು ವಿರೋಧಿಸಿದರೂ, 'ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ರದ್ದಾದರೆ, ಅದನ್ನು ಮತ್ತೆ ಜಾರಿಗೆ ತರಲು ನಾನು ಹೋರಾಡುತ್ತೇನೆ' ಎಂದಿದ್ದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಮಾತು ಮೇಲ್ಜಾತಿಯವರಲ್ಲಿ ಸಾಕಷ್ಟು ಅಸಮಾಧಾನ ತಂದಿದೆ.

ಸಮೀಕ್ಷೆ : ಮೋದಿ ಅಲೆಗೆ ಬೆಲೆ 3 ರಾಜ್ಯಗಳಲ್ಲಿ ಕಮಲಕ್ಕೆ ಮತ್ತೆ ನೆಲೆಸಮೀಕ್ಷೆ : ಮೋದಿ ಅಲೆಗೆ ಬೆಲೆ 3 ರಾಜ್ಯಗಳಲ್ಲಿ ಕಮಲಕ್ಕೆ ಮತ್ತೆ ನೆಲೆ

ಜಾತಿ-ಮತದಾರರ ಬಲಾಬಲ

ಜಾತಿ-ಮತದಾರರ ಬಲಾಬಲ

ಮಧ್ಯಪ್ರದೇಶದಲ್ಲಿ ಒಟ್ಟು 13% ರಷ್ಟು ಮೇಲ್ಜಾತಿಯ ಮತದಾರರಿದ್ದಾರೆ. ಅವರಲ್ಲಿ ಬ್ರಾಹ್ಮಣರು 5.7 ಪ್ರತಿಶತವಾದರೆ, 5.3 ರಷ್ಟು ರಜಪೂತ ಮತಗಳು ಮತ್ತು ಶೇ.2 ರಷ್ಟು ಬೈಶ್ಯ ಸಮುದಾಯದ ಮತಗಳಿವೆ. ಇತರ ಹಿಂದುಳಿದ ವರ್ಗಗಳ ಶೇ.42 ಮತಗಳಿದ್ದರೆ, 14% ಮತ್ತು 22% ರಷ್ಟು ಕ್ರಮವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮತಗಳಿವೆ.

ಯಾವಾಗ ಚುನಾವಣೆ?

ಯಾವಾಗ ಚುನಾವಣೆ?

ಒಟ್ಟು 230 ವಿಧಾನಸಭಾ ಕ್ಷೇತ್ರಗಳ ಮಧ್ಯಪ್ರದೇಶದಲ್ಲಿ ನವೆಂಬರ್ 28 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. ಪ್ರಸ್ತುತ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ

English summary
For the first time after a long time the Bharatiya Janata Party (BJP) is facing a tough electoral battle in Madhya Pradesh due to the anger of people against the government especially the upper caste communities which have become a big issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X