ಪೆರಿಯಾರ್‌ ಪ್ರತಿಮೆ ತೆಗೆಯುತ್ತೇವೆ ಎಂದ ಅಣ್ಣಮಲೈ ವಿರುದ್ಧ ತಮಿಳುನಾಡಿನಲ್ಲಿ ಭುಗಿಲೆದ್ದ ಆಕ್ರೋಶ

ಚೆನ್ನೈ, ನವೆಂಬರ್‌ 9: ಶ್ರೀರಂಗಂ ದೇಗುಲದ ಹೊರಗಿರುವ 'ತಂಥೈ' ಪೆರಿಯಾರ್ ಅವರ ಪ್ರತಿಮೆ ಮತ್ತು ಫಲಕವನ್ನು ತೆಗೆದುಹಾಕುವ ಹೇಳಿಕೆ ನೀಡಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ವಿರುದ್ಧ ಹಲವು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ತೀವ್ರ ವಾಗ್ದಾಳಿ ಮಾಡುತ್ತಿದ್ದಾರೆ.

ಎಐಎಡಿಎಂಕೆಯ ಮಾಜಿ ಸಚಿವ ಜಯಕುಮಾರ್ ಅವರು ನಿಧನರಾದ ರಾಜ್ಯ ನಾಯಕರ ಖ್ಯಾತಿಯನ್ನು ಈಗ ನಾಯಕರು ಬಣ್ಣಿಸಬೇಕು. ಪೆರಿಯಾರ್ ಅವರ ಗೌರವ ಮತ್ತು ಖ್ಯಾತಿಯನ್ನು ಹಾಳುಮಾಡುವ ಯಾವುದೇ ರೀತಿಯ ಅಭಿಪ್ರಾಯವು ಅಣ್ಣಾಮಲೈ ಅವರಿಗೆ ಹಿನ್ನಡೆಯಾಗುತ್ತದೆ. ಇದು ಅಣ್ಣಾಮಲೈ ಅವರಿಗೆ ಪ್ರಮುಖ ಹೊಡೆತ. ಇದನ್ನು ಖಂಡಿತಾ ತಮಿಳುನಾಡು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Anger broke out in Tamil Nadu against Annamalai saying they will remove the statue of Periyar

ದೆಹಲಿಯಲ್ಲಿ ಬಿಜೆಪಿ ಆಡಳಿತವೇ ಉರುಳುತ್ತದೆ:

ಪೆರಿಯಾರ್‌ ಕುರಿತಂತೆ ಅಣ್ಣಾಮಲೈ ಹೇಳಿಕೆ ಬಗ್ಗೆ ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಹಾಗೂ ಮಾಜಿ ಸಂಸದೆ ಆರ್‌ಎಸ್‌ ಭಾರತಿ ಅವರು, ತಮಿಳುನಾಡಿನಲ್ಲಿ ಬಿಜೆಪಿ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ. ತಮಿಳುನಾಡಿನಲ್ಲಿ ಪೆರಿಯಾರ್ ಅವರ ಪ್ರತಿಮೆಯನ್ನು ತೆಗೆದರೆ ಕೇಂದ್ರದಲ್ಲಿ ಬಿಜೆಪಿ ಆಡಳಿತವೇ ಉರುಳುತ್ತದೆ ಎಂದು ಹೇಳಿದ್ದಾರೆ.

ಉಲ್ಟಾ ಹೊಡೆದ ಅಣ್ಣಾಮಲೈ:

ಏತನ್ಮಧ್ಯೆ, ತಮಿಳಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ "ದೇವರಿಲ್ಲ, ದೇವರನ್ನು ನಂಬುವವರು ಮೂರ್ಖರು" ಎಂಬ ಪ್ರಚೋದನಕಾರಿ ಹೇಳಿಕೆಯೊಂದಿಗೆ ಶ್ರೀರಂಗಂ ದೇವಸ್ಥಾನದ ಮುಂಭಾಗದಲ್ಲಿರುವ ಪೆರಿಯಾರ್ ಪ್ರತಿಮೆಯನ್ನು ತೆಗೆದುಹಾಕಲಾಗುವುದು ಎಂದು ಹೇಳಿಕೆ ನೀಡಿದ ಒಂದು ದಿನದ ನಂತರ ಅಣ್ಣಾಮಲೈ ಪೆರಿಯಾರ್ ಕುರಿತು ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ.

"ಪೆರಿಯಾರ್ ಸಾಮಾಜಿಕ ಅನ್ಯಾಯಕ್ಕಾಗಿ ಹೋರಾಡಿದರು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ತಮಿಳುನಾಡಿನ ಜನರ ದೃಷ್ಟಿಕೋನ ಬದಲಾಗಿದೆ. ದೇವಸ್ಥಾನದ ಮುಂದೆ ದೇವರ ಆರಾಧಕರನ್ನು ಅವಮಾನಿಸುವ ಪದಗಳನ್ನು ಬರೆಯುವುದು ಜನರಿಗೆ ಇಷ್ಟವಾಗುವುದಿಲ್ಲ. ಅದಕ್ಕಾಗಿಯೇ ನಾವು ಅವುಗಳನ್ನು ತೆಗೆದುಹಾಕುತ್ತೇವೆ ಎಂದು ಹೇಳಿದೆವು. ಪೆರಿಯಾರ್ ಪ್ರತಿಮೆಗಳು ಸಾರ್ವಜನಿಕ ಸ್ಥಳಗಳಲ್ಲಿ ಇರಬಹುದೇ ಹೊರತು ದೇವಸ್ಥಾನಗಳ ಮುಂದೆ ಅಲ್ಲ" ಎಂದು ಅಣ್ಣಾಮಲೈ ಗುರುವಾರ ಹೇಳಿದ್ದಾರೆ.

ಕಮ್ಯುನಿಸ್ಟ್ ಪಕ್ಷದ ಕಚೇರಿಯ ಮುಂದೆ ಪೆರಿಯಾರ್ ಅವರ ಕಮ್ಯುನಿಸ್ಟ್ ವಿರೋಧಿ ಹೇಳಿಕೆಗಳನ್ನು ಹಾಕುವುದು ಸರಿಯೇ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ಡಿಎಂಕೆ ಕಚೇರಿ ಎದುರು ಪ್ರತಿಮೆ ಇಟ್ಟರೆ ಡಿಎಂಕೆ ಬಗ್ಗೆ ಪೆರಿಯಾರ್ ಹೇಳಿದ್ದನ್ನು ಪಕ್ಷ ಒಪ್ಪಿಕೊಳ್ಳುತ್ತದೆಯೇ? ನಾವು ಯಾವಾಗಲೂ ಪೆರಿಯಾರ್ ಅವರಿಗೆ ಗೌರವವನ್ನು ನೀಡುತ್ತೇವೆ, ಆದರೆ ದೇವಸ್ಥಾನದ ಮುಂದೆ ಕೆಲವು ಪದಗಳನ್ನು ತೆಗೆದುಹಾಕಬೇಕು, ಪೆರಿಯಾರ್ ಅವರನ್ನು ಕೀಳಾಗಿ ಕಾಣುವ ಹೇಳಿಕೆ ಯಾವುದನ್ನೂ ನಾನು ಹೇಳಿಲ್ಲ ಎಂದು ಹೇಳಿದರು.

ಪೆರಿಯಾರ್ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ಅಣ್ಣಾಮಲೈ ಅವರು ತಿರುಚ್ಚಿ ಜಿಲ್ಲೆಯ ಶ್ರೀರಂಗಂನಲ್ಲಿ ನಡೆಯುತ್ತಿರುವ ಎನ್ ಮನ್ ಎನ್ ಮಕ್ಕಳ್ (ನನ್ನ ಭೂಮಿ ನನ್ನ ಜನರು) ಯಾತ್ರೆಯ ಭಾಗವಾಗಿ ರ್ಯಾಲಿಯಲ್ಲಿ ಮಾತನಾಡುತ್ತಾ, ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ದೇವಾಲಯಗಳ ಹೊರಗೆ ಇರಿಸಲಾಗಿರುವ ಪೆರಿಯಾರ್ ಪ್ರತಿಮೆಗಳನ್ನು ತೆಗೆದುಹಾಕಲಾಗುವುದು ಮತ್ತು ಆಳ್ವಾರ್, ನಾಯನ್ಮಾರ್ ಮತ್ತು ತಮಿಳು ಕವಿ ತಿರುವಳ್ಳುವರ್ ಅವರ ಪ್ರತಿಮೆಗಳನ್ನು ಇರಿಸಲಾಗುವುದು ಎಂದು ಹೇಳಿದ್ದರು.

ಬಿಜೆಪಿ ಸರ್ಕಾರದ ಮೊದಲ ದಿನವೇ ರಾಜ್ಯದಲ್ಲಿ ಹಿಂದೂ ದೇವಾಲಯಗಳನ್ನು ನಿರ್ವಹಿಸುವ ಹಿಂದೂ ಧಾರ್ಮಿಕ ಮತ್ತು ದತ್ತಿ ದತ್ತಿ (HR&CE) ಸಚಿವಾಲಯವನ್ನು ರದ್ದುಗೊಳಿಸುವುದಾಗಿ ಅಣ್ಣಾಮಲೈ ಭರವಸೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+