ಆ್ಯಂಡ್ರಾಯ್ಡ್ ಫೋನಿನಲ್ಲಿ ಅಶ್ಲೀಲ ವೆಬ್ ಸೈಟ್ ನೋಡುವವರೇ ಎಚ್ಚರ !!!
ಆನ್ ಲೈನ್ ವೆಬ್ ಸೈಟ್ ಗಳನ್ನು ವೀಕ್ಷಿಸುವಾಗ ನಿಮಗೆ ಗೊತ್ತಿಲ್ಲದಂತೆ ಹ್ಯಾಕರ್ ಗಳು ಗುಪ್ತ ಸಾಫ್ಟ್ ವೇರ್ ಮೂಲಕ ಅಥವಾ ಕೆಲವೊಮ್ಮೆ ಅಧಿಕೃತ ಪೋರ್ನ್ ಆ್ಯಪ್ ಗಳ ಮೂಲಕವೇ ಮೊಬೈಲ್ ಮಾಹಿತಿಗೆ ಕನ್ನ ಹಾಕುವ ಸಾಧ್ಯತೆಗಳಿವೆಯಂತೆ.
ನವದೆಹಲಿ, ಫೆಬ್ರವರಿ 22: ಹ್ಯಾಂಡ್ ಸೆಟ್ ಗಳಲ್ಲಿ ಅಶ್ಲೀಲ ವೆಬ್ ಸೈಟ್ ಗಳನ್ನು ನೋಡಿ ಆನಂದಿಸುವ ಚಪಲ ಚೆನ್ನಿಗರಾಯರೇ ಇನ್ನು ನಿಮ್ಮ ಚಟವನ್ನು ಬಿಟ್ಟರೆ ಉತ್ತಮ. ಏಕೆಂದರೆ, ಜಗತ್ತಿನ ನಾನಾ ಭಾಗಗಳಲ್ಲಿರುವ ಆನ್ ಲೈನ್ ಕಿರಾತಕರು ಆನ್ ಲೈನ್ ಅಶ್ಲೀಲ ವೆಬ್ ಸೈಟ್ ಗಳ ಮೂಲಕವೇ ನಿಮ್ಮ ಸ್ಮಾರ್ಟ್ ಫೋನ್ ಗೆ ಕನ್ನ ಹಾಕಲು ಭರ್ಜರಿ ತಯಾರಿ ನಡೆಸಿದ್ದಾರೆಂದು 'ಇಂಡಿಪೆಂಡೆಂಟ್' ವರದಿ ಮಾಡಿದೆ.
ವಿವಿಧ ಆ್ಯಪ್ ಗಳ ಮೂಲಕ ಅಥವಾ ಯಾವುದೋ ತಂತ್ರಾಂಶದ ಮೂಲಕ ಮೊಬೈಲ್ ಗಳಲ್ಲಿನ ಕೆಲವಾರು ಅಮೂಲ್ಯ ಹಾಗೂ ಖಾಸಗಿ ಮಾಹಿತಿಗಳಿಗೆ ಕನ್ನ ಹಾಕುವುದು ಆ ಅಂತರ್ಜಾಲ ಕಳ್ಳರ ಈವರೆಗಿನ ರೂಢಿಯಾಗಿತ್ತು.[ಇನ್ನು 'ಜಿಯೊ' ಮೂಲಕ ಕಾರು ನಿಯಂತ್ರಿಸಿ, ಮೆಟ್ರೊ ಟಿಕೆಟ್ ಬುಕ್ ಮಾಡಿ!]

ಆದರೆ, ಇತ್ತೀಚಿನ ದಿನಗಳಲ್ಲಿ ಅಶ್ಲೀಲ ವೆಬ್ ಸೈಟ್ ಗಳಿಗೆ ಭೇಟಿ ನೀಡುತ್ತಿರುವ ಆ್ಯಂಡ್ರಾಯ್ಡ್ ಫೋನ್ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲ ಹ್ಯಾಕರ್ ಗಳು, ಅಂತರ್ಜಾಲ ಚೋರರು, ಕೆಲವಾರು ಅಶ್ಲೀಲ ವೆಬ್ ಸೈಟ್ ಗಳೊಂದಿಗೆ ನಂಟು ಬೆಳೆಸಿ, ಆನ್ ಲೈನ್ ಅಶ್ಲೀಲ ವೆಬ್ ಸೈಟ್ ಗಳ ಮೂಲಕ ಮೊಬೈಲ್ ನಲ್ಲಿರುವ ಕೆಲವಾರು ಮಾಹಿತಿ ಕದಿಯಲು ಮುಂದಾಗಿದ್ದಾರೆಂದು ಹೇಳಲಾಗಿದೆ.[ಏಪ್ರಿಲ್ ನಿಂದ ಜಿಯೋ ಆಫರ್ ಮುಂದುವರಿಸಲು ತಿಂಗಳಿಗೆ 303 ರೂ.]
ನೀವು ಯಾವುದೋ ವೆಬ್ ಸೈಟ್ ನ ವೀಡಿಯೋ ನೋಡುತ್ತಿದ್ದಂತೆ, ನಿಮಗೆ ಗೊತ್ತಿಲ್ಲದ ಹಾಗೆ ದಂಧೆಕೋರರು ಹರಿಯಬಿಟ್ಟಿರುವ ಗುಪ್ತ ಸಾಫ್ಟ್ ವೇರ್ ಅಥವಾ ಆ್ಯಪ್ ಒಂದು ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಆಗುವುದರ ಜತೆಗೆ ನೀವು ಮೊಬೈಲ್ ಮೂಲಕ ನಿರ್ವಹಿಸುವ ಹಲವಾರು ಆನ್ ಲೈನ್ ವ್ಯವಹಾರಗಳ ಅಪ್ ಡೇಟ್ ಅನ್ನು ಸಂಬಂಧಪಟ್ಟವರಿಗೆ ರವಾನಿಸುತ್ತದೆ ಎಂದು ಹೇಳಲಾಗಿದೆ.[ಲಾವದಿಂದ 3,333 ರು ಗಳಿಗೆ 4ಜಿ ಹ್ಯಾಂಡ್ ಸೆಟ್!]
ಕೆಲವೊಮ್ಮೆ ಅಧಿಕೃತ ಪೋರ್ನ್ ವೆಬ್ ಸೈಟ್ ಗಳ ಆ್ಯಪ್ ಗಳ ಹೆಸರಿನಲ್ಲಿಯೂ ಈ ಕನ್ನ ಹಾಕುವ ಕೆಲಸ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಅಂದರೆ, ನೀವು ಇತ್ತ ಯಾವುದೋ ಅಶ್ಲೀಲ ವೆಬ್ ಸೈಟ್ ಗೆ ಹೋಗಿ ಅಶ್ಲೀಲ ವೀಡಿಯೋ ನೋಡುತ್ತಾ ಎಂಜಾಯ್ ಮಾಡುತ್ತಿರಬೇಕಾದರೆ, ಇತ್ತ ನಿಮ್ಮ ಅಕೌಂಟಿನಲ್ಲಿರುವ ಹಣ ಅಥವಾ ಮತ್ಯಾವುದೋ ಮಾಹಿತಿ ಸೋರಿ ಹೋಗಿರುತ್ತದೆ.












Click it and Unblock the Notifications