ರೈಲು ಅಪಘಾತ ತಪ್ಪಿಸುವ ‘ಕವಚ’ ತಂತ್ರಜ್ಞಾನ ಏನಾಯ್ತು?

ಒಡಿಶಾ: ದೇಶದ ರೈಲು ದುರಂತಗಳ ಇತಿಹಾಸದಲ್ಲಿ ಒಡಿಶಾದ ಅಪಘಾತ ಎಂದೆಂದಿಗೂ ದೊಡ್ಡ ಕಪ್ಪು ಚುಕ್ಕೆ. ಈಗಾಗಲೇ 230ಕ್ಕೂ ಹೆಚ್ಚು ಪ್ರಯಾಣಿಕರು ಅಪಘಾತಕ್ಕೆ ಬಲಿಯಾಗಿ 900 ಪ್ರಯಾಣಿಕರು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಹೊತ್ತಲ್ಲೇ ರೈಲ್ವೆ ಇಲಾಖೆಯ 'ಕವಚ' ತಂತ್ರಜ್ಞಾನದ ಬಗ್ಗೆ ಪ್ರಶ್ನೆ ಮೂಡಿದ್ದು, ಅದರ ಮಾಹಿತಿ ಇಲ್ಲಿದೆ.

ರೈಲು ಚಾಲಕನ ದೋಷ ಅಥವಾ ಇತರ ಕಾರಣದಿಂದ ರೈಲು ಅಪಘಾತ ತಡೆಗಟ್ಟಲು ಅಂತಾ ಭಾರತೀಯ ರೈಲ್ವೇ ಅಭಿವೃದ್ಧಿಪಡಿಸಿದ ವ್ಯವಸ್ಥೆಯೇ 'ಕವಚ'. ರೈಲು ಅಪಘಾತ ತಪ್ಪಿಸುವ ಅತ್ಯಂತ ನಿಖರ ವ್ಯವಸ್ಥೆ ಇದು ಎನ್ನಲಾಗುತ್ತೆ. KAVACH ತಂತ್ರಜ್ಞಾನವನ್ನು ರೈಲು ಘರ್ಷಣೆ ತಪ್ಪಿಸುವ ವ್ಯವಸ್ಥೆ (TCAS) ಅಥವಾ ಸ್ವಯಂಚಾಲಿತ ರೈಲು ಸಂರಕ್ಷಣೆ ವ್ಯವಸ್ಥೆ (ATP) ಅಂತ ಕೂಡ ಕರೆಯುತ್ತಾರೆ. ಇದು ರೈಲು ಅಪಘಾತಗಳನ್ನು ಸೊನ್ನೆಗೆ ಇಳಿಸುವ ಗುರಿ ಹೊಂದಿದೆ. ಹೀಗಿದ್ದರೂ ಒಡಿಶಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಹೇಗೆ ಸಂಭವಿಸಿತು? ತಿಳಿಯೋಣ ಬನ್ನಿ.

Odisha train accident

ಒಡಿಶಾದಲ್ಲಿ 'ಕವಚ' ವರ್ಕ್ ಮಾಡಲಿಲ್ವಾ?

ಹೌದು, ಇದೀಗ ದೇಶಾದ್ಯಂತ ಈ ಪ್ರಶ್ನೆ ಮೂಡಿದೆ. ಅಲ್ಲದೆ ಈ ಹಿಂದೆ ರೈಲ್ವೆ ಸಚಿವರು ಖುದ್ದಾಗಿ 'ಕವಚ' ತಂತ್ರಜ್ಞಾನದ ಬಗ್ಗೆ ನೀಡಿದ್ದ ವಿವರಣೆಯ ವಿಡಿಯೋ ಸಮೇತ ಪ್ರಶ್ನೆ ಕೇಳಲಾಗುತ್ತಿದೆ. ಹಾಗಾದ್ರೆ ನಿಜಕ್ಕೂ 'ಕವಚ' ತಂತ್ರಜ್ಞಾನ ಒಡಿಶಾ ಅಪಘಾತದ ವೇಳೆ ಕೈಕೊಟ್ಟಿತ್ತಾ? ಅದರ ಸಂಪೂರ್ಣ ಮಾಹಿತಿಯನ್ನ ಅಧಿಕಾರಿಗಳೇ ಬಿಚ್ಚಿಟ್ಟಿದ್ದಾರೆ. ಅತ್ತ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುವಾಗಲೇ ಕವಚ ತಂತ್ರಜ್ಞಾನದ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಅದು ಏನು ಅನ್ನೋದನ್ನ ಮುಂದೆ ಓದಿ.

( )

'ಕವಚ' ಇರಲೇ ಇಲ್ಲ ಎಂದ ಅಧಿಕಾರಿಗಳು

ಅಂದಹಾಗೆ ಒಡಿಶಾ ಅಪಘಾತ & 'ಕವಚ' ತಂತ್ರಜ್ಞಾನದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮಾಹಿತಿ ನೀಡಿರುವಂತೆ, 'ರಕ್ಷಣಾ ಕಾರ್ಯಾಚರಣೆ ಪೂರ್ಣ ಮುಗಿದಿದ್ದು, ಮುಂದಿನ ಕಾರ್ಯ ಆರಂಭಿಸುತ್ತಿದ್ದೇವೆ. ಈ ಮಾರ್ಗದಲ್ಲಿ ಕವಚ ತಂತ್ರಜ್ಞಾನ ಲಭ್ಯವಿರಲಿಲ್ಲ' ಎಂದು ಭಾರತೀಯ ರೈಲ್ವೆ ಇಲಾಖೆ ವಕ್ತಾರ ಅಮಿತಾಭ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ. ಈ ಮೂಲಕ 'ಕವಚ' ತಂತ್ರಜ್ಞಾನದ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೆ ರೈಲ್ವೆ ಇಲಾಖೆ ಉತ್ತರ ನೀಡಿದಂತಾಗಿದೆ.

Odisha train accident

ಹೇಗೆ ಕೆಲಸ ಮಾಡುತ್ತೆ ಕವಚ?

ಅಷ್ಟಕ್ಕೂ ಕವಚ ಅಥವಾ ಕವಚ್ ಎಂದು ಕರೆಯುವ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆ ಭಾರತದ ರೈಲ್ವೆ ಇತಿಹಾಸದಲ್ಲೇ ಕ್ರಾಂತಿ ತಂದಿದೆ. 3 ಭಾರತೀಯ ಸಂಸ್ಥೆಗಳ ಜತೆಗೆ ಜಂಟಿಯಾಗಿ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಕವಚ ತಂತ್ರಜ್ಞಾನ ಲೋಕೋಮೋಟಿವ್ ಡ್ರೈವರ್‌ಗಳಿಗೆ ಅಪಾಯದ ಸಂಕೇತ ನೀಡುತ್ತದೆ ಮತ್ತು ವೇಗವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2 ರೈಲು ವಿರುದ್ಧ ದಿಕ್ಕಿನಿಂದ ಬಂದರೂ, ಎರಡರ ವೇಗ ಏನೇ ಇದ್ದರೂ ರೈಲು 'ರಕ್ಷಾ ಕವಚ'ದಿಂದ ಡಿಕ್ಕಿಯಾಗದೆ ರಕ್ಷಿತವಾಗುತ್ತದೆ. ಹೀಗಾಗಿಯೇ ಕವಚ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

₹10 ಲಕ್ಷ ಪರಿಹಾರ ಘೋಷಣೆ

ಒಟ್ನಲ್ಲಿ ಒಡಿಶಾದ ಭೀಕರ ಅಪಘಾತ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. 230ಕ್ಕೂ ಹೆಚ್ಚು ಜನ ಅಪಘಾತದಲ್ಲಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರುತ್ತಿದೆ. ಹಾಗೇ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹10 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರಿಗೆ ₹2 ಲಕ್ಷ ರೂಪಾಯಿ ಸೇರಿ ಸಣ್ಣಪುಟ್ಟ ಗಾಯಗಳೊಂದಿಗೆ ನರಳುತ್ತಿರುವ ಇತರ ಪ್ರಯಾಣಿಕರಿಗೆ ₹50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮತ್ತೊಂದ್ಕಡೆ ಕವಚ ತಂತ್ರಜ್ಞಾನದ ಬಗ್ಗೆ ಎದ್ದಿದ್ದ ಪ್ರಶ್ನೆಗೂ ಉತ್ತರ ಸಿಕ್ಕಿದೆ.

Odisha train accident

ತುರ್ತು ಸಂಪರ್ಕ ಮಾಡಲು ಸಹಾಯವಾಣಿ

ಇನ್ನು ಸಹಾಯವಾಣಿಗೆ ಈ ಸಂಖ್ಯೆಗಳನ್ನ ಸಂಪರ್ಕ ಮಾಡಬಹುದಾಗಿದೆ. ಬಂಗಾರಪೇಟೆ (Bangarpet): 08153 255253, ಬೆಂಗಳೂರು (Bangalor): 080-22356409, ಕುಪ್ಪಂ (Kuppam): 8431403419, ಕೆಜೆಎಮ್​ (KJM):+91 88612 03980, ಭದ್ರಕ್ (Bhadrak): 8455889900, ಕಟಕ್ (Cuttack): 8455889917, ಭುವನೇಶ್ವರ (Bhubaneswar): 8455889922, ಖುರ್ದಾ ರಸ್ತೆ (Khurda Road): 6370108046, ಬ್ರಹ್ಮಪುರ (Brahmapur): 89173887241, ಪಲಾಸ (Palasa): 8978881006 ಹಾಗೂ ಹೌರಾ ಸಹಾಯವಾಣಿ ಸಂಖ್ಯೆ (Howrah Helpline Number): 033-26382217 ಗೆ ಸಂಪರ್ಕ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+