Delhi: ಪೊಲೀಸ್‌ಗೆ ಡಿಕ್ಕಿ ಹೊಡೆದ ಎಸ್‌ಯುವಿ ಕಾರು: ಭಯಾನಕ ವಿಡಿಯೋ ವೈರಲ್
ದೆಹಲಿ ಪೊಲೀಸ್‌ಗೆ ಎಸ್‌ಯುವಿ ಕಾರು ಡಿಕ್ಕಿ ಹೊಡೆದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಟೋಬರ್ 24 ಮತ್ತು 25ರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಕ್ಯಾಮರಾದಲ್ಲಿ ಈ ದೃಶ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಟ್ರಾಫಿಕ್ ಬ್ಯಾರಿಕೇಡ್ ಎದುರು ಕಾರಿನ ಬಳಿ ಪೊಲೀಸ್ ನಿಂತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ವೇಳೆ ವೇಗವಾಗಿ ಬಂದ ಎಸ್‌ಯುವಿ ಕಾರು ಅವರಿಗೆ ಡಿಕ್ಕಿ ಹೊಡೆಯುತ್ತದೆ. ಆಗ ಪೊಲೀಸ್ ಹಾರಿ ರಸ್ತೆ ಬದಿ ಬೀಳುತ್ತಾರೆ.

ಇದರಿಂದ ಅವರಿಗೆ ಗಾಯಗಳಾಗಿವೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯ ನಂತರ ಎಸ್‌ಯುವಿ ಕಾರು ಚಾಲಕನನ್ನು ಸಹ ಬಂಧಿಸಲಾಗಿದೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ದೃಶ್ಯಾವಳಿ ಇದೀಗ ವೈರಲ್ ಆಗಿದೆ. ಅಪಘಾತ ಮಾರಣಾಂತಿಕವಾಗಿದ್ದು ಆ ಸಮಯದಲ್ಲಿ ರಸ್ತೆಯಲ್ಲಿ ಹೆಚ್ಚು ಕಾರುಗಳು ಇರಲಿಲ್ಲ. ಇಲ್ಲದಿದ್ದರೆ ಇನ್ನಷ್ಟು ಅಪಾಯ ಎದುರಿಸಬೇಕಾಗುತ್ತಿತ್ತು.
ವಿಡಿಯೋ ನೋಡಿ ಕೋಪಗೊಂಡ ಜನರು
ಈ ವೀಡಿಯೋ ನೋಡಿದ ಜನ ಅಚ್ಚರಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮುಂದೆ ನಿಂತಿದ್ದ ಪೊಲೀಸರಿಗೆ ಎಸ್‌ಯುವಿ ಚಾಲಕ ಡಿಕ್ಕಿ ಹೊಡೆದ ರೀತಿ ನೋಡಿದರೆ ಆತ ಸಾವನ್ನಪ್ಪಿರಬಹುದು ಎಂದು ಊಹಿಸಿದ್ದಾರೆ. ಈ ವೀಡಿಯೊ ಸಾಕಷ್ಟು ಭೀತಿಯನ್ನು ಹುಟ್ಟಿಸಿದೆ. ಟ್ರಾಫಿಕ್ ನಿಯಮಗಳನ್ನು ಪಾಲಿಸದ ಜನರು ತಮ್ಮ ಪ್ರಾಣವನ್ನು ಮಾತ್ರವಲ್ಲದೆ ಇತರರ ಪ್ರಾಣವನ್ನೂ ಅಪಾಯಕ್ಕೆ ತಳ್ಳುತ್ತಾರೆ. ಇಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಹೇರಲಾಗಿದೆ.
#WATCH | CCTV footage shows a Delhi Police personnel hit by an SUV and thrown into the air in the Connaught Place area
— ANI (@ANI) October 27, 2023
The incident happened on the intervening night of 24th-25th October. Police detained the car driver and action was taken against him.
(Video source: Delhi… pic.twitter.com/5lMAD0It7g
ಮೀರತ್ ಹಿಟ್ ಆಂಡ್ ರನ್ ಘಟನೆ
ಈ ಹಿಂದೆ ಉತ್ತರಪ್ರದೇಶದ ಮೀರತ್‌ನಲ್ಲಿ ಹಿಟ್ ಅಂಡ್ ರನ್ ಪ್ರಕರಣದ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿತ್ತು. ಈ ಘಟನೆ ದಸರಾ ಆಯುಧ ಪೂಜೆಯಂದು (ಅಕ್ಟೋಬರ್ 23) ನಡೆದಿತ್ತು. ಆ ಪ್ರದೇಶದಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿತ್ತು.
ಅಬು ಲೇನ್ ಮಾರುಕಟ್ಟೆಯಲ್ಲಿ ಬಡ ಬಲೂನ್ ಮಾರಾಟಗಾರಿಗೆ ವೇಗವಾಗಿ ಬಂದ ಮಹೀಂದ್ರ ಸ್ಕಾರ್ಪಿಯೋ ಚಾಲಕ ಡಿಕ್ಕಿ ಹೊಡೆದು ಅದೇ ವೇಗದಲ್ಲಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದನು. ಡಿಕ್ಕಿ ಹೊಡೆದ ರಬಸಕ್ಕೆ ಬಲೂನ್ ಮಾರಾಟಗಾರ ಭಾನು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ನೋಡಗರನ್ನು ಬೆಚ್ಚಿ ಬೀಳಿಸಿದೆ. ಖಾಲಿ ರಸ್ತೆಯಲ್ಲಿ ತಡರಾತ್ರಿ ವೇಗವಾಗಿ ಬಂದ ಮಹೀಂದ್ರ ಸ್ಕಾರ್ಪಿಯೋ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿ ಎರಡು ಬಾರಿ ಪಲ್ಟಿಯಾಗಿದೆ.
-
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ












Click it and Unblock the Notifications