ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Amul Milk Prices: ಫೆ. 3 ರಿಂದ ಅಮುಲ್ ಹಾಲಿನ ದರ ಹೆಚ್ಚಳ, 10 ತಿಂಗಳಲ್ಲಿ 12 ರೂ. ಏರಿಕೆ

ಅಮುಲ್ ಬ್ರಾಂಡ್‌ಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಎಲ್ಲಾ ವಿಧಗಳಲ್ಲಿ ಹಾಲಿನ ಬೆಲೆಯನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಿದೆ.

|
Google Oneindia Kannada News

ನವದೆಹಲಿ, ಫೆಬ್ರವರಿ. 03: ಶುಕ್ರವಾರದಿಂದ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬಗ್ಗೆ ಅಮುಲ್ ಬ್ರಾಂಡ್‌ಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಮಾಹಿತಿ ನೀಡಿದೆ.

"ಅಮುಲ್ ಹಾಲಿನ ಪ್ಯಾಕ್‌ಗಳ ಎಲ್ಲಾ ವಿಧಗಳಲ್ಲಿಯೂ ಬೆಲೆಯನ್ನು ಲೀಟರ್‌ಗೆ 3 ರೂಪಾಯಿಗೆ ಹೆಚ್ಚಿಸಲಾಗಿದೆ. ಫೆಬ್ರವರಿ 3, 2023ರ ಬೆಳಗಿನಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿದೆ " ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಅಮುಲ್, ಕೆಎಂಎಫ್ ನಡುವಿನ ವ್ಯತ್ಯಾಸ, ಸಾಮ್ಯತೆ: ಅಂಕಿ-ಅಂಶಗಳನ್ನು ತಿಳಿಯಬೇಕೆ? ಇಲ್ಲಿ ನೋಡಿಅಮುಲ್, ಕೆಎಂಎಫ್ ನಡುವಿನ ವ್ಯತ್ಯಾಸ, ಸಾಮ್ಯತೆ: ಅಂಕಿ-ಅಂಶಗಳನ್ನು ತಿಳಿಯಬೇಕೆ? ಇಲ್ಲಿ ನೋಡಿ

ಕಳೆದ 10 ತಿಂಗಳಲ್ಲಿ ಹಾಲಿನ ದರ 12 ರೂಪಾಯಿಯಷ್ಟು ಏರಿಕೆಯಾಗಿದೆ. ಅದಕ್ಕೂ ಮುನ್ನ ಸುಮಾರು ಏಳು ವರ್ಷಗಳ ಕಾಲ ಹಾಲಿನ ದರ ಏರಿಕೆಯಾಗಿರಲಿಲ್ಲ. ಏಪ್ರಿಲ್ 2013 ಮತ್ತು ಮೇ 2014 ರ ನಡುವೆ ಹಾಲಿನ ಬೆಲೆ ಲೀಟರ್‌ಗೆ 8 ರೂಪಾಯಿಗೆ ಏರಿಕೆಯಾಗಿತ್ತು.

ಬೇಸಿಗೆಯಲ್ಲಿ ಹಾಲಿನ ಉತ್ಪಾದನೆಯು ಕಡಿಮೆಯಾಗುವುದರಿಂದ ಹಾಲು ಮಾರಾಟ ಮಾಡುವ ಕಂಪನಿಗಳು ಹೈನುಗಾರಿಕೆ ಮಾಡುವ ರೈತರಿಗೆ ಹೆಚ್ಚಿನ ದರ ನೀಡಬೇಕಾಗಿದೆ. ಅದಕ್ಕಾಗಿಯೇ ಮುಂದಿನ ದಿನಗಳಲ್ಲಿ ಇನ್ನು ಹಾಲಿನ ದರದಲ್ಲಿ ಹೆಚ್ಚಳ ಉಂಟಾಗಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಮಾರ್ಚ್ 5 ಮತ್ತು ಡಿಸೆಂಬರ್ 27, 2022 ರ ನಡುವೆ ಮದರ್ ಡೈರಿಯ ಬೆಲೆ ಪ್ರತಿ ಲೀಟರ್‌ಗೆ 57 ರೂಪಾಯಿಯಿಂದ 66 ರೂಪಾಯಿಗೆ ಏರಿಕೆಯಾಗಿದೆ. ಟೋನ್ಡ್ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 6 ರೂಪಾಯಿ ಹೆಚ್ಚಾಗಿದೆ.

Amul Milk Prices: Amul has increased prices of Amul pouch milk by Rs 3 per litre

2022 ರಲ್ಲಿ ಪಶು ಆಹಾರದ ಬೆಲೆ ಗಮನಾರ್ಹವಾಗಿ ಹೆಚ್ಚಾಗಿದೆ. ಅಲ್ಲದೆ, ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಹಾಲು ಮಾರಾಟವಾಗದ ಕಾರಣ ಹೈನುಗಾರಿಕೆ ನಡೆಸುವವರು ಕಡಿಮೆ ಪ್ರಾಣಿಗಳನ್ನು ಹೊಂದಿದ್ದಾರೆ. ಇದಲ್ಲದೆ ದೇಶದ ಹಲವಾರು ಸ್ಥಳಗಳಿಗೆ ಹರಡಿರುವ ಚರ್ಮ ಗಂಟು ಕಾಯಿಲೆಯು ಜಾನುವಾರುಗಳನ್ನು ಸಾಕಷ್ಟು ಬಾಧಿಸಿದೆ. ಈ ರೋಗವು ಸಾವಿರಾರು ಹಸುಗಳ ಪ್ರಾಣ ಹಿಂಡಿದೆ. ಇದರಿಂದಲೂ ಹಾಲಿನ ಉತ್ಪಾದನೆ ಕಡಿಮೆಯಾಗಿದೆ.

2021 ರ ಕೊನೆಯಲ್ಲಿ ಲಾಕ್‌ಡೌನ್ ಪ್ರಾರಂಭವಾದ ತಕ್ಷಣ, ಹಾಲಿನ ಪೂರೈಕೆಗೆ ಹೋಲಿಸಿದರೆ ಬೇಡಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹೆಚ್ಚಿನ ಬೇಡಿಕೆ ಮತ್ತು ಸಾಕಷ್ಟು ಹಾಲಿನ ಉತ್ಪಾದನೆಯ ಪರಿಣಾಮವಾಗಿ ಬೆಲೆಗಳು ಏರಿಕೆಯಾಗಿವೆ.

English summary
Gujarat Cooperative Milk Marketing Federation (GCMMF) increased prices of Amul pouch milk (All variants) by Rs 3 per litre. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X